ಬೆಂಗಳೂರು:ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್​ನಲ್ಲಿ ಗ್ರಾಹಕರ ಸೋಗಿನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾಜಿಸ್ಟಿಕ್ಸ್​ನ ಮ್ಯಾನೇಜರ್ ಕರ್ತವ್ಯಪ್ರಜ್ಞೆಯಿಂದ ಪಾರ್ಸೆಲ್​ನಲ್ಲಿದ್ದ 220 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಜಾಲ ಪತ್ತೆಗೆ ನೆರವಾದ ವಿಆರ್​ಎಲ್ ಲಾಜಿಸ್ಟಿಕ್ಸ್​ನ
ವಿಶಾಖಪಟ್ಟಣಂ ಶಾಖಾ ವ್ಯವಸ್ಥಾಪಕ ಎ.ವೈ.ನಾಯ್ಡು ಅವರ ಪ್ರಮಾಣಿಕತೆ ಹಾಗೂ ಕರ್ತವ್ಯಪ್ರಜ್ಞೆ ಮೆಚ್ಚಿ, ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮ ಸ್ಮರಣಿಕೆ ನೀಡಿ ಸನ್ಮಾನಿಸಿದ್ದಾರೆ.
ಲಾಜಿಸ್ಟಿಕ್ಸ್ ವಿಶಾಖಪಟ್ಟಣಂ ಶಾಖೆಗೆ ಬಂದಿದ್ದ ಪೆಡ್ಲರ್​ಗಳು, ಮೂರು ಪಾರ್ಸೆಲ್ ಕೊರಿಯರ್ ಬುಕ್ಕಿಂಗ್ ಮಾಡಿದ್ದರು. ಬುಕ್ಕಿಂಗ್ ವೇಳೆ ಪಾರ್ಸೆಲ್​ನಲ್ಲಿ ಗ್ಲೌಸ್ ಹಾಗೂ ಚರ್ಮದ ವಸ್ತುಗಳು ಇರುವುದಾಗಿ ಮಾಹಿತಿ ನೀಡಿದ್ದರು. ಪಾರ್ಸೆಲ್ ಬುಕ್ಕಿಂಗ್​ನಲ್ಲಿದ್ದ ವ್ಯವಸ್ಥಾಪಕ ಎ.ವೈ. ನಾಯ್ಡು, ಅನುಮಾನ ಬಂದು ಪಾರ್ಸೆಲ್ ಪರಿಶೀಲನೆ ನಡೆಸಿದ್ದಾರೆ. ಪ್ಯಾಕೇಜ್ ತೆರೆದು ನೋಡಿದಾಗ ಅದರಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಪಾರ್ಸೆಲ್ ಪರಿಶೀಲನೆ ನಡೆಸಿದಾಗ ಗಾಂಜಾ ಎಂಬುದು ಖಚಿತವಾಗಿದೆ. 3 ಪಾರ್ಸೆಲ್​ನಲ್ಲಿ ಅಂದಾಜು 220 ಕೆಜಿ ಗಾಂಜಾ ಪತ್ತೆಯಾಗಿದೆ. ಬುಕ್ಕಿಂಗ್ ಮಾಡಿದ್ದ ಬಿಲ್ ಮೂಲಕ ಪೊಲೀಸರು, ವಿಆರ್​ಎಲ್ ಲಾಜಿಸ್ಟಿಕ್ಸ್ ಸಿಬ್ಬಂದಿ ಸಹಕಾರದೊಂದಿಗೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಭಾರಿ ಪ್ರಮಾಣದ ಗಾಂಜಾ ಜಪ್ತಿ ಮತ್ತು ದಂಧೆಕೋರರ ಬಂಧನಕ್ಕೆ ಸಹಕಾರ ನೀಡಿದ ವಿಆರ್​ಎಲ್ ಲಾಜಿಸ್ಟಿಕ್ಸ್ ವಿಶಾಖಪಟ್ಟಣಂ ಶಾಖಾ ವ್ಯವಸ್ಥಾಪಕ ಎ.ವೈ.ನಾಯ್ಡು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಷಯವನ್ನು ಸ್ಥಳೀಯ ಪೊಲೀಸರು ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಇದರ ಮೇರೆಗೆ ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮ, ಗುರುವಾರ ಎ.ವೈ. ನಾಯ್ಡು ಅವರನ್ನು ಕಚೇರಿಗೆ ಕರೆಸಿಕೊಂಡು ಸನ್ಮಾನಿಸಿದ್ದಾರೆ. ಜತೆಗೆ ವಿಆರ್​ಎಲ್ ಲಾಜಿಸ್ಟಿಕ್ಸ್ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

ಹೊಡೆಯುವುದಾದ್ರೆ ಹೊಡೆಯಿರಿ, ಕಡ್ಡಾಯವಾಗಿ ಬಿಲ್ ಕಟ್ಟಿಸಿಕೊಳ್ಳಿ ಅಂದಿದ್ದಾರೆ; ‘ಗ್ಯಾರಂಟಿ’ ತಂದಿಟ್ಟ ಫಜೀತಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty − 14 =
Remember me
