ವಿಜಯವಾಡ:ಮದುವೆಯಾದ 13 ವರ್ಷಗಳ ಬಳಿಕ ಇತ್ತೀಚೆಗೆ ತನ್ನ ಪತ್ನಿ ಯಾವಾಗಲೂ ಮೊಬೈಲ್​ನಲ್ಲಿ ಬಿಜಿಯಾಗಿರುವುದನ್ನು ನೋಡಿ ಅನುಮಾನಗೊಂಡ ಪತಿರಾಯ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಅನಂತಪುರ ಜಿಲ್ಲೆಯ ಕನಗನಪಲ್ಲಿ ಮೂಲದ ಚಿಕ್ಕಣ್ಣಯ್ಯ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್​ ಕೆಲಸ ಮಾಡುತ್ತಿದ್ದಾನೆ. ಈತ 2008ರಲ್ಲಿ ಕರ್ನೂಲ್​ ಜಿಲ್ಲೆಯ ಕವಿತಾ ಎಂಬಾಕೆಯನ್ನು ಮದುವೆ ಆಗಿದ್ದ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಹನ್ನೊಂದು ವರ್ಷದ ಸಂತೋಷ್​ ಮತ್ತು ಒಂಬತ್ತು ವರ್ಷದ ಜಾಹ್ನವಿ ಮಕ್ಕಳೊಂದಿಗೆ ದಂಪತಿ ಅನಂತಪುರದ ಜೀಸಸ್​ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಇದನ್ನೂ ಓದಿರಿ:ರಾತ್ರಿ ಮಲಗ್ತಿದ್ದಂತೆ ಅಮ್ಮನ ಮೊಬೈಲ್​ ತೆಗೆದುಕೊಳ್ತಿದ್ದ ಮಗ: ತಾಯಿಗೆ ಕಾದಿತ್ತು ಬಿಗ್​ ಶಾಕ್​!
ಇಬ್ಬರ ವೈವಾಹಿಕ ಜೀವನ ಸಾಮಾನ್ಯವೆಂಬಂತೆ ಸಣ್ಣಪುಟ್ಟ ಕಲಹಗಳೊಂದಿಗೆ 11 ವರ್ಷಗಳವರೆಗೆ ಮೃಧುವಾಗೇ ಸಾಗಿತ್ತು. ಆದರೆ, ಕವಿತಾ ತನ್ನ ಕುಟುಂಬದವರೊಂದಿಗೆ ಹೆಚ್ಚಾಗಿ ಮಾತನಾಡುವುದೇ ಆಕೆಗೆ ತೊಂದರೆಗೆ ದೂಡಿತು. ಕೆಲಸದಿಂದ ಮನೆಗೆ ಬಂದಾಗಲೆಲ್ಲ ಮೊಬೈಲ್​ ತೆಗೆದುಕೊಂಡು ಕರೆ ಮಾಡಿ ಮಾತನಾಡುವುದರಲ್ಲೇ ಕವಿತಾ ಕಾಲ ಕಳೆಯುತ್ತಿದ್ದಳು. ಗಂಡ ಆಕೆಗೆ ಫೋನ್​ ಮಾಡಿದಾಗಲೆಲ್ಲ ಬಿಜಿ ಹೇಳುತ್ತಿತ್ತು.
ಇದರಿಂದ ಅನುಮಾನಗೊಂಡ ಚಿಕ್ಕಣ್ಣಯ್ಯ, ಈ ಬಗ್ಗೆ ಪತ್ನಿಯನ್ನು ವಿಚಾರಿಸಿದಾಗ ಅನೇಕ ಬಾರಿ ಜಗಳವೂ ನಡೆದಿತ್ತು. ಜಗಳವಾದಾಗಲೆಲ್ಲ ಕವಿತಾ ತನ್ನ ತವರು ಮನೆಗೆ ಹೋಗುತ್ತಿದ್ದಳು. ಬಳಿಕ ಹಿರಿಯ ಸಮ್ಮುಖದಲ್ಲಿ ರಾಜಿ ಮಾಡಿ ಕಳುಹಿಸಲಾಗುತ್ತಿತ್ತು. ಆದರೆ, ಮನೆಯಲ್ಲಿ ಗಂಡ ಇರದೇ ಇದ್ದಾಗಲೆಲ್ಲ ಆಕೆ ಫೋನ್​ನಲ್ಲಿ ಮಾತನಾಡುವುದು ಸಾಮಾನ್ಯವಾಗಿತ್ತು.
ಹೀಗೆ ಮಾರ್ಚ್​ 24ರ ಬುಧವಾರ ಸಂಜೆ ಚಿಕ್ಕಣ್ಣಯ್ಯ ತನ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಈ ಸಮಯದಲ್ಲೂ ಕವಿತಾ ಫೋನ್​ನಲ್ಲಿ ಬಿಜಿಯಾಗಿರುವುದನ್ನು ನೋಡಿ ಆತ ಜಗಳ ಮಾಡಿದ್ದಾನೆ. ಪಾಪಾ ಕವಿತಾ ಯಾವುದೇ ಅಕ್ರಮ ಸಂಬಂಧವಾಗಿ ಇರಲಿಲ್ಲ. ಫೋನ್​ನಲ್ಲಿ ಹೆಚ್ಚು ಹೊತ್ತು ಮಾತಾಡಿದ್ದೇ ಆಕೆಗೆ ಮುಳುವಾಯಿತು. ಅಂದು ರಾತ್ರಿ ಸುಮ್ಮನೇ ಮಲಗಿದ್ದಾರೆ. ಮರುದಿನ ನಸುಕಿಜ ಜಾವ 3 ಗಂಟೆಗೆ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿದೆ.
ಇದನ್ನೂ ಓದಿರಿ:ಮನೆ ದೋಚಲು ಹೋದ ಕಳ್ಳ: ಪೊಲೀಸ್ ಅಧಿಕಾರಿ ಮಗಳ ರೂಮ್​​ನಲ್ಲಿ ಲಾಕ್​​ ಆದ!
ಈ ಬಾರಿ ಜಗಳ ತೀವ್ರವಾಗಿ ನಡೆಯುವಾಗ ಅದನ್ನು ಕೇಳಿ ಮಕ್ಕಳು ನಿದ್ದೆಯಿಂದ ಎಚ್ಚರಗೊಂಡಿದ್ದಾರೆ. ಇತ್ತ ಚಿಕ್ಕಣ್ಣಯ್ಯ ತನ್ನ ತಾಳ್ಮೆ ಕಳೆದುಕೊಂಡು ನೋಡ ನೋಡುತ್ತಿದ್ದಂತೆ ತನ್ನ ಪಂಚೆಯಿಂದ ಪತ್ನಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಮಕ್ಕಳು ಅಪ್ಪ ಏನು ಮಾಡುತ್ತಿರುವೆ? ಅಮ್ಮನನ್ನು ಬಿಟ್ಟುಬಿಡು ಅಪ್ಪ ಎಂದು ಗೊಗರೆದರು ಬಿಡದ ಚಿಕ್ಕಣ್ಣಯ್ಯ ಕೊನೆಗೆ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.
ಇದಾದ ಬಳಿಕ ಆಕೆ ಮೃತಪಟ್ಟಿರುವುದು ಖಚಿತಪಡಿಸಿಕೊಂಡ ಚಿಕ್ಕಣ್ಣಯ್ಯ, ನಿಮ್ಮ ತಾಯಿ ಮಲಗಿದ್ದಾಳೆ ಎಂದು ಮಕ್ಕಳಿಗೆ ಹೇಳಿ ಅವರನ್ನು ಹೊರೆಗೆ ಕರೆದೊಯ್ದಿದ್ದಾನೆ. ಬೆಳಗ್ಗೆ 8 ಗಂಟೆಗೆ ಮನೆಯ ಮಾಲೀಕರಿಗೆ ಕರೆ ಮಾಡಿ ನನ್ನ ಪತ್ನಿಯನ್ನು ಕೊಲೆ ಮಾಡಿ, ಮಕ್ಕಳನ್ನು ನನ್ನ ಜತೆ ಕರೆತಂದಿದ್ದೇನೆಂದು ಚಿಕ್ಕಣ್ಣಯ್ಯ ಹೇಳಿದ್ದಾನೆ. ಮಾಲೀಕ ತಕ್ಷಣ ಪೊಲೀಸರಿಗೆ ಈ ವಿಚಾರವನ್ನು ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಮಾಲೀಕ ಮತ್ತು ಪೊಲೀಸರು ಕವಿತಾ ಮೃತದೇಹವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಬಳಿಕ ಸ್ಥಳವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಸ್ಥಳಾಂತರಿಸಿದರು. ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಪಾಲಕರ ಮುಂದೆಯೇ ಮಹಿಳೆಯರ ಗ್ಯಾಂಗ್​ರೇಪ್​, ಪುರುಷರಿಂದಲೇ ಕುಟುಂಬಸ್ಥರ ಅತ್ಯಾಚಾರ: ವಿಶ್ವವೇ ಬೆಚ್ಚಿಬೀಳಿಸೋ ಘಟನೆ!
ಸಾಕು ಬಿಡ್ರಿ ಮುಖ್ಯಮಂತ್ರಿಗಂತೂ ಇಷ್ಟೊಂದು ಪ್ರಚಾರ ಮಾಡೋದೆ ಇಲ್ಲ: ಟಿಎಂಸಿ ಸಂಸದೆ ನುಸ್ರತ್ ವಿಡಿಯೋ ವೈರಲ್!​

ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಮದ್ವೆಯಾದ ಮೊದಲ ರಾತ್ರಿಯೇ ಗಲಾಟೆ; ನಂಗೆ ಅವಳು ಬೇಡ ಅಂತ ಗಂಡ, ಅವನೇ ಬೇಕು ಎಂದು ಚೈತ್ರಾ ಪಟ್ಟು!

ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
