ಅಮರಾವತಿ:ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದಕ್ಕೆಂದು ವರ್ಷಗಟ್ಟಲೆ ದುಡಿದ ಹಣವನ್ನು ಕೂಡಿಡುತ್ತೇವೆ. ಅದೇ ರೀತಿ ಆಂಧ್ರ ಪ್ರದೇಶದ ಸಣ್ಣ ಉದ್ಯಮಿಯೊಬ್ಬ ಮನೆಯೆಂಬ ದೊಡ್ಡ ಕನಸಿಗಾಗಿ ಹಣ ಕೂಡಿಟ್ಟಿದ್ದ. ಆದರೆ ಕೆಲ ವರ್ಷದ ನಂತರ ಆತ ಕೂಡಿಟ್ಟಿದ್ದ ಹಣವನ್ನು ತೆರೆದು ನೋಡಿದಾಗ ಆತನ ಜೀವವೇ ಬಾಯಿಗೆ ಬಂದಂತಾಗಿದೆ.
ಆಂಧ್ರದ ಕೃಷ್ಣ ಜಿಲ್ಲೆಯ ಮೈಲವರಂ ನಿವಾಸಿ ಬಿಜ್ಲಿ ಜಮಲಯ ಹಂದಿ ವ್ಯಾಪಾರ ಮಾಡುತ್ತಾನೆ. ಪ್ರತಿದಿನದ ಜೀವನ ನಡೆಸುವುದಕ್ಕೆ ಬೇಕಾಗುವ ಹಣಕ್ಕಿಂತ ಸ್ವಲ್ಪ ಹಚ್ಚೇ ದುಡಿದು, ಕಳೆದ ಕೆಲ ವರ್ಷಗಳಿಂದ ಹಣವನ್ನು ಕೂಡಿಡುತ್ತಿದ್ದಾನೆ. ಬ್ಯಾಂಕ್​ನಲ್ಲಿ ಹಣವಿಡುವುದು ಬೇಡ ಎಂದು ಮನೆಯಲ್ಲಿಯೇ ಒಂದು ಟ್ರಂಕ್​ನಲ್ಲಿ ಹಣವನ್ನು ಹಾಕಿಡುತ್ತಾ ಬಂದಿದ್ದಾನೆ. 100, 200, 500 ರೂಪಾಯಿ ಮುಖಬೆಲೆಯ ಹಲವು ನೋಟನ್ನು ಎತ್ತಿಟ್ಟಿದ್ದಾನೆ.
ಕಳೆದ ಕೆಲ ದಿನಗಳಿಂದ ಆತ ಟ್ರಂಕ್​ ತೆರೆದು ನೋಡಿರಲಿಲ್ಲ. ಇತ್ತೀಚೆಗೆ ಒಮ್ಮೆ ಟ್ರಂಕ್​ ತೆರೆದು ನೋಡಿದ್ದಾನೆ. ಸುಮಾರು 5 ಲಕ್ಷ ರೂಪಾಯಿ ಕೂಡಿಟ್ಟಿದ್ದೇನೆ ಎನ್ನುವ ಖುಷಿಯಲ್ಲಿ ಟ್ರಂಕ್​ ತೆರೆದ ಜಮಲಯಗೆ ಶಾಕ್​ ಆಗಿದೆ. ಟ್ರಂಕ್​ ಒಳಗಿದ್ದ ನೋಟುಗಳಲ್ಲೆಲ್ಲ ಒರಲೆ ತನ್ನ ಕೆಲಸ ಮಾಡಿಬಿಟ್ಟಿದೆ. ನೋಟಿನ ಕಂತುಗಳನ್ನೆಲ್ಲ ಅರ್ಧಕ್ಕೆ ಅರ್ಧದಷ್ಟು ತಿಂದು ಮುಗಿಸಿಬಿಟ್ಟಿದೆ. ಎಷ್ಟೋ ವರ್ಷಗಳಿಂದ ಪರಿಶ್ರಮ ಹಾಕಿ ದುಡಿದು ಕೂಡಿಟ್ಟಿದ್ದ ಹಣವನ್ನೆಲ್ಲ ಒರಲೆ ತನ್ನ ಊಟವಾಗಿ ಮಾಡಿಕೊಂಡು ಖಾಲಿ ಮಾಡಿಬಿಟ್ಟಿದೆ.
ಟ್ರಂಕ್​ ನೋಡಿ ಅಘಾತಗೊಂಡ ಜಮಲಯ ಉಳಿದಿದ್ದ ಹರಕು ನೋಟುಗಳನ್ನು ಅಲ್ಲಿಯೇ ಹತ್ತಿರದಲ್ಲಿದ್ದ ಮಕ್ಕಳಿಗೆ ಆಟವಾಡಲು ಕೊಟ್ಟಿದ್ದಾನೆ. ಆದರೆ ಅದನ್ನು ಕಂಡ ಗ್ರಾಮಸ್ಥರು ಅನುಮಾನ ಬಂದು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ನಿಜ ಘಟನೆ ಹೊರಬಿದ್ದಿದೆ. (ಏಜೆನ್ಸೀಸ್​)
ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…

‘ರಾಹುಲ್​ ಗಾಂಧಿ ದಲಿತ ಯುವತಿಯನ್ನೇ ಮದುವೆಯಾಗಬೇಕು’ ರಾಹುಲ್​ ಮದುವೆಗೆ 2.5 ಲಕ್ಷ ಕೊಡಲು ಸಿದ್ಧವಾದ ಸಚಿವ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 2 =
Remember me
