ವಿಜಯವಾಡ:ವಿಜಯವಾಡದಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನ್ ರೆಡ್ಡಿ ಅವರು ಆಯೋಜಿಸಿದ್ದ ‘ಸಿದ್ಧಂ’ ಬಸ್ ಯಾತ್ರೆಯಲ್ಲಿ ಕೆಲ ದುಷ್ಕರ್ಮಿಗಳು ಮುಖ್ಯಮಂತ್ರಿ ಜಗನ್​ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸಿಎಂ ಎಡಕಣ್ಣಿನ ಹುಬ್ಬಿನ ಬಳಿ ಗಂಭೀರ ಗಾಯವಾಗಿದೆ.
ಇದನ್ನೂ ಓದಿ:ಕೋಟ್ಯಂತರ ಮೌಲ್ಯದ ಕಳವು ಪ್ರಕರಣ ಬಯಲಿಗೆ: 1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ
ವಿಜಯವಾಡದ ಸಿಂಗ್‌ನಗರದ ಡಾಬಾ ಕೋಟ್ಲಾ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಬಸ್​ನಿಂದ ಹೊರಬಂದು ಜನರತ್ತ ಕೈ ಬೀಸುವ ವೇಳೆ ದುಷ್ಕರ್ಮಿಗಳು ಕಲ್ಲು ಎಸೆದು ಪೈಶಾಚಿಕ ಕೃತ್ಯ ವೆಸಗಿದ್ದಾರೆ.
ವೇಗವಾಗಿ ಎಸೆದ ಕಲ್ಲು ನೇರವಾಗಿ ಸಿಎಂ ಜಗನ್‌ ಮೋಹನ್​ ರೆಡ್ಡಿ ಎಡ ಕಣ್ಣಿನ ಹುಬ್ಬಿಗೆ ಬಿದ್ದಿದೆ. ಇದರಿಂದ ಕಣ್ಣಿನ ಬಳಿ ರಕ್ತ ಬಂದಿದ್ದು, ಊತ ಬಂದಿದೆ. ವೈದ್ಯರು ಜಗನ್‌ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಬಸ್ ಪ್ರಯಾಣ ಎಂದಿನಂತೆ ಮುಂದುವರಿಸಿದರು.
ಇದೇ ವೇಳೆ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ಅವರು ಕೂಡ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಿಎಂ ಜಗನ್ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿ ಒಂದು ಕಡೆ ಶಾಲೆ, ಮತ್ತೊಂದು ಕಡೆ ಎರಡು ಅಂತಸ್ತಿನ ಕಟ್ಟಡಗಳಿವೆ. ದಾಳಿ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕೂಡ ಉಂಟಾಗಿದೆ ಎಂದು ವರದಿಯಾಗಿದೆ.
6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
