ವಿಶಾಖಪಟ್ಟಣಂ:ಆ ದಂಪತಿಯ ಬದುಕಿನಲ್ಲಿ ಈಗ ತಾನೇ ಒಂದು ಸಂತಸದ ಅಲೆ ಎದ್ದಿತ್ತು. ಮದುವೆಯಾಗಿ ಆರು ತಿಂಗಳಾಗಿದ್ದ ಅವರ ಬಾಳಿಗೆ ಹೊಸ ಜೀವವೊಂದು ಬರುತ್ತದೆಯೆನ್ನುವ ವಿಚಾರ ಎರಡು ದಿನಗಳ ಹಿಂದೆಯಷ್ಟೇ ಗೊತ್ತಾಗಿತ್ತು. ಆದರೆ ಆ ಸಂತೋಷವನ್ನು ಸಹಿಸದ ವಿಧಿ ಗಂಡ ಹೆಂಡತಿ ಇಬ್ಬರನ್ನೂ ರಸ್ತೆ ಮೇಲೆಯೇ ಬಲಿ ತೆಗೆದುಕೊಂಡುಬಿಟ್ಟಿದೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಚಿಟ್ಟಿವಲಸಾದ ರೌತು ಯೋಗೇಶ್ವರ ರಾವ್ (27) ಮತ್ತು ರೋಹಿಣಿ (22) ಮೃತ ದಂಪತಿ. ಯೋಗೇಶ್ವರ ರಾವ್ ಎರಡು ವರ್ಷಗಳ ಹಿಂದೆ ವಿಶಾಖಪಟ್ಟಣಂನ ರೈಲ್ವೆ ಕಾಲೇಜಿಗೆ ಸೇರಿದ್ದ. ಆರು ತಿಂಗಳ ಹಿಂದೆ ರೋಹಿಣಿಯನ್ನು ಮದುವೆಯಾಗಿ ಮನೆ ತುಂಬಿಸಿಕೊಂಡಿದ್ದ. ಅದಾದ ನಂತರ ದಂಪತಿ ಕಂಚರಪಲೆಂನಲ್ಲಿ ಬಾಡಿಗೆ ಮನೆ ಪಡೆದು ಅದರಲ್ಲೇ ಸಂಸಾರ ಆರಂಭಿಸಿದ್ದರು.
ಆಗಷ್ಟೇ ಸಂಸಾರ ಆರಂಭಿಸಿದ್ದ ದಂಪತಿ ಬದುಕಿಗೆ ಕರೊನಾ ಎಂಟ್ರಿ ಕೊಟ್ಟಿತ್ತು. ಗಂಡ ಹೆಂಡತಿ ಇಬ್ಬರೂ ಸೋಂಕಿಗೆ ತುತ್ತಾಗಿದ್ದಾರೆ. ಹೆಚ್ಚಿನ ಲಕ್ಷಣವಿಲ್ಲವಾಗಿದ್ದರಿಂದ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಈ ನಡುವೆ ದಂಪತಿಯ ಬದುಕಲ್ಲಿ ಮತ್ತೊಂದು ಕುಡಿ ಚಿಗುರುತ್ತಿರುವ ವಿಚಾರ ಗೊತ್ತಾಗಿದೆ. ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದ ಯೋಗೇಶ್ವರ ವಿಚಾರ ಗೊತ್ತಾದ ಎರಡು ದಿನಗಳ ನಂತರ ಹೆಂಡತಿಯನ್ನು ವೈದ್ಯಕೀಯ ಪರೀಕ್ಷೆ ಮಾಡಿಸಲೆಂದು ಆಸ್ಪತ್ರೆಗೆ ತನ್ನ ಬೈಕ್​ನಲ್ಲಿ ಕರೆದುಕೊಂಡು ಹೊರಟಿದ್ದ. ಕನಿಮೆಟ್ಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಯಾವುದೋ ವಾಹನ ಬಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ದಂಪತಿ ಇಬ್ಬರೂ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. (ಏಜೆನ್ಸೀಸ್)
ಸುತ್ತೂರು ಮಠಕ್ಕೆ ಸಿಪಿವೈ, ಸಿ.ಟಿ.ರವಿ & ಸುರೇಶ್ ಕುಮಾರ್​ ಪ್ರತ್ಯೇಕ ಭೇಟಿ; ಕುತೂಹಲ ಕೆರಳಿಸುತ್ತಿದೆ ಬಿಜೆಪಿ ನಾಯಕರ ನಡೆ

ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + four =
Remember me
