ಮದನಪಲ್ಲಿ:ಆಂಧ್ರದಲ್ಲಿ ತಂದೆ ತಾಯಿಯೇ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆಯಲ್ಲಿ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ನಾವು ಇಬ್ಬರೂ ಮಕ್ಕಳನ್ನು ಕೊಲೆ ಮಾಡಲಿಲ್ಲ, ಒಬ್ಬಳನ್ನೇ ಮಾಡಿದ್ದು ಎಂದು ಮೃತರ ತಾಯಿ ಹೇಳಿದ್ದಾರೆ. ಕಿರಿಯ ಮಗಳನ್ನು ಹಿರಿಯ ಮಗಳೇ ಕೊಲೆ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ.
ಇದನ್ನೂ ಓದಿ:ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ತ್ರಿವರ್ಣ ಧ್ವಜಕ್ಕೆ ಅಪಮಾನ
ನಾವು ಕೊಲೆ ಮಾಡಿಲ್ಲ. ನಮ್ಮ ಹಿರಿ ಮಗಳು ಅಲೈಖ್ಯಾ (27) ಸಾಯಿದಿವ್ಯಾಳನ್ನು (22) ಕೊಲೆ ಮಾಡಿದಳು. ಆಮೇಲೆ ನಮ್ಮ ಬಳಿ ಬಂದು ಬೇಡಿಕೊಂಡಳು. ನನ್ನನ್ನೂ ಕೊಲೆ ಮಾಡಿ, ನಾನು ಹೋಗಿ ದಿವ್ಯಾಳನ್ನು ವಾಪಾಸು ಕರೆದು ತರುತ್ತೇನೆ ಎಂದಳು. ಅದಕ್ಕಾಗಿ ನಾವು ಅವಳನ್ನು ಕೊಂದೆವು ಎಂದು ಮೃತರ ತಾಯಿ ಪದ್ಮಜಾ ಹೇಳಿದ್ದಾಳೆ. ಸದ್ಯ ಪೊಲೀಸ್​ ಠಾಣೆಯಲ್ಲಿರುವ ಆಕೆ ಪೊಲೀಸರು ಎದುರು ಈ ಹೇಳಿಕೆ ಕೊಟ್ಟಿದ್ದಾಳೆ.
ಭಾನುವಾರ ಸಂಜೆ ಮೃತರ ತಂದೆಯ ಸಹೋದ್ಯೋಗಿಯಿಂದ ಘಟನೆಯ ವಿವರ ಪೊಲೀಸರಿಗೆ ಸಿಕ್ಕಿದ್ದು, ಅವರು ಆ ಮನೆಗೆ ತೆರಳಿದ್ದಾರೆ. ಆ ಸಮಯದಲ್ಲಿ ಇಬ್ಬರು ಹೆಣ್ಣ ಮಕ್ಕಳ ಮೃತ ದೇಹವನ್ನು ರೂಮಿನಲ್ಲಿ ಇಡಲಾಗಿತ್ತು. ಇಬ್ಬರ ದೇಹದ ಮೇಲೂ ಒಂದೂ ಬಟ್ಟೆಯಿರಲಿಲ್ಲ. ಪೊಲೀಸರು ಮನೆಗೆ ಬೂಟು ಕಾಲಿನಲ್ಲಿ ಬಂದು ಮನೆಯೊಳಗೆಲ್ಲ ಬೂಟ ಕಾಲಿನಲ್ಲೇ ಓಡಾಡಿದ್ದಾರೆ. ಆಗ ಅವರ ತಾಯಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲ ಕಡೆಯೂ ದೇವರಿದ್ದಾರೆ, ನೀವೇಕೆ ಬೂಟು ಕಾಲಿನಲ್ಲಿ ಓಡಾಡುತ್ತಿದ್ದೀರಿ ಎಂದು ಕೇಳಿದ್ದಾರೆ.
ಮೃತ ದೇಹಗಳಿದ್ದ ರೂಮಿಗೆ ಪೊಲೀಸರು ಹೋಗದಂತೆ ತಡೆಯಲಾಗಿದೆ. ನನ್ನ ಮಕ್ಕಳು ಬಟ್ಟೆಯಿಲ್ಲದೆ ಇದ್ದಾರೆ, ನೀವು ಅಲ್ಲಿಗೆ ಹೋಗುವಂತಿಲ್ಲ ಎಂದು ಹೇಳಲಾಗಿದೆ. ನಂತರ ಪೊಲೀಸರು ನಾವು ನಿಮ್ಮ ಮಕ್ಕಳಿಗೆ ನಮಸ್ಕಾರ ಮಾಡಿ ಬರುತ್ತೇವೆ ಎಂದು ಹೇಳಿ ರೂಂ ಒಳಗೆ ಹೋಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲೂ ದಂಪತಿ ಬಿಟ್ಟಿಲ್ಲ. ಈಗ ಬೇಡ ಸೋಮವಾರ ಬಂದು ಅವರನ್ನು ಕರೆದುಕೊಂಡು ಹೋಗಿ. ನಮ್ಮ ಮಕ್ಕಳು ನಾಳೆ ಬೆಳಗ್ಗೆ ಬದುಕಿ ಬರುತ್ತಾರೆ ಎಂದು ಅವರು ವಾದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪುಟಾಣಿ ಮಕ್ಕಳಿಗೆ ನಾಯಿಯೊಂದಿಗೆ ಮದುವೆ! ಕಾರಣ ಕೇಳಿದರೆ ಗಾಬರಿಯಾಗುತ್ತೀರ
ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಂದೆಗೆ ಮಾತ್ರವೇ ಮಕ್ಕಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಇಬ್ಬರೂ ವಿಚಾರಣೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೂ ಪುರ್ನಜನ್ಮದ ಬಗ್ಗೆ ಅತೀವ ನಂಬಿಕೆ ಹುಟ್ಟಿಸಿದ್ದರು. ಅದೇ ನಂಬಿಕೆಯ ಮೇಲೆಯೇ ಅವರನ್ನು ಕೊಲೆ ಮಾಡಲಾಗಿದ್ದಾಗಿ ತಿಳಿಸಲಾಗಿದೆ.
ಸ್ನಾತಕೋತ್ತರ ಪದವಿ ಮುಗಿಸಿದ್ದ ಅಲೈಖ್ಯಾ, ಸಿವಿಲ್ಓ​ ಸರ್ವಿಸ್​ ಎಕ್ಸಾಂಗೆ ಸಿದ್ಧತೆ ನಡೆಸುತ್ತಿದ್ದಳು. ಎಂಬಿಎ ಪದವೀಧರೆ ಸಾಯಿದಿವ್ಯಾ ಸಂಗೀತ ಕ್ಲಾಸ್ ನಡೆಸುತ್ತಿದ್ದಳು. (ಏಜೆನ್ಸೀಸ್​)
ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 4 =
Remember me
