ಅಮರಾವತಿ: ಆಂಧ್ರಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ವೈ.ಎಸ್.ಜಗನ್​ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಡಿಜಿಪಿ ಸ್ತರ ಐಪಿಎಸ್​ ಅಧಿಕಾರಿ ವಿರುದ್ಧ ರಾಷ್ಟ್ರದ್ರೋಹದ ಆರೋಪ ಹೊರಿಸಿ ಅಮಾನತು ಮಾಡಿದೆ. ಸರ್ಕಾರ ಈ ನಿರ್ಧಾರ ಆಂಧ್ರಪ್ರದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಎ.ಬಿ.ವೆಂಕಟೇಶ್ವರ ರಾವ್​ ಅಮಾನತುಗೊಂಡ ಹಿರಿಯ ಐಪಿಎಸ್ ಅಧಿಕಾರಿ. ದೇಶದ ರಹಸ್ಯಗಳನ್ನು ಸೋರಿಕೆ ಮಾಡಿದ ಗುರುತರ ಆರೋಪ ಅವರ ಮೇಲೆ ಹೊರಿಸಲಾಗಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ನೀಲಂ ಸಾವ್ಹ್ನೇ ಅಮಾನತು ಆದೇಶ ಹೊರಡಿಸಿದ್ದು, ಡೈರೆಕ್ಟರ್ ಜನರಲ್ ಆಫ್ ಪೊಲೀಸ್​ (ಪೊಲೀಸ್ ದಳದ ಮುಖ್ಯಸ್ಥ) ಗೌತಮ್ ಸಾವಂಗ್ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ರಾವ್ ಅವರ ವಿರುದ್ಧ 1968ರ ಆಲ್​ ಇಂಡಿಯಾ ಸರ್ವೀಸ್​(ಕಂಡಕ್ಟ್) ರೂಲ್ಸ್​ ನ ರೂಲ್​ (3)(ಎ) ಪ್ರಕಾರ ನೈತಿಕ ನೀತಿಯ ನೇರ ಉಲ್ಲಂಘನೆ ಆರೋಪದಡಿ ಅಮಾನತುಗೊಳಿಸಲಾಗಿದ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ರಾವ್ ಅವರು ಸುರಕ್ಷಾ ಉಪಕರಣ ಖರೀದಿಯಲ್ಲಿ ಗಂಭೀರ ಅವ್ಯವಹಾರ ನಡೆಸಿದ್ದಾರೆ.ಗುಪ್ತಚರ ಮಾಹಿತಿಗಳನ್ನು ಅನೇಕ ಸಲ ಉದ್ದೇಶ ಪೂರ್ವಕ ಸೋರಿಕೆ ಮಾಡಿದ್ದಾರೆ. ಅಲ್ಲದೆ, ರಕ್ಷಣಾ ಉಪಕರಣ ಉತ್ಪಾದನೆಯ ವಿದೇಶಿ ಸಂಸ್ಥೆಜತೆ ವ್ಯವಹರಿಸುವಾಗ ಪೊಲೀಸ್​ ಖರೀದಿ ಪ್ರಕ್ರಿಯೆಗಳ ವಿವರವನ್ನು ಬಹಿರಂಗಪಡಿಸಿದ್ದಾರೆ. ಇದು ರಾಷ್ಟ್ರದ ಭದ್ರತೆಗೆ ಮತ್ತು ಇಡೀ ಪೊಲೀಸ್ ವ್ಯವಸ್ಥೆಗೆ ಧಕ್ಕೆ ತರುವಂತಹ ವಿಚಾರವಾಗಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂಬುದು ವರದಿಯ ಶಿಫಾರಸಿನ ಸಾರ.
ರಾವ್ 1989ರ ಬ್ಯಾಚಿನ ಅಧಿಕಾರಿಯಾಗಿದ್ದು,ಚಂದ್ರಬಾಬು ನಾಯ್ಡು ಅವಧಿಯಲ್ಲಿ ರಾಜ್ಯ ಗುಪ್ತಚರದಳ ವಿಭಾಗದ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಕಳೆದ ವರ್ಷ ಮೇ 30ರಂದು ಜಗನ್ ಮೋಹನ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಗುಪ್ತಚರದಳದ ಮುಖ್ಯಸ್ಥ ಹುದ್ದೆಯಿಂದ ರಾವ್ ಅವರನ್ನು ತೆರವುಗೊಳಿಸಲಾಗಿತ್ತು. ಬೇರೆ ಹೊಣೆಗಾರಿಕೆ ನೀಡಿರಲಿಲ್ಲ.
ತನಿಖೆಯ ಮೂಲಕ ಬಹಿರಖಂಗ ಗೊಂಡ ವಾಸ್ತವಾಂಶಗಳು ಮತ್ತು ಪ್ರಾಥಮಿಕ ಸಾಕ್ಷ್ಯಗಳ ಪ್ರಕಾರ ರಾವ್ ಮತ್ತು ಇಸ್ರೇಲ್​ನ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಆರ್​ಟಿ ಇನ್​ಫ್ಲಾಟೆಬಲ್ಸ್​ ಪ್ರೈವೇಟ್ ಲಿಮಿಟೆಡ್ ಗೆ ರಕ್ಷಣಾ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರ ಗುತ್ತಿಗೆಯನ್ನು ರಾವ್ ಅವರ ಪುತ್ರ ಚೇತನ್ ಸಾಯಿ ಕೃಷ್ಣಾ ಸಿಇಒ ಆಗಿರುವ ಆಕಾಶಂ ಅಡ್ವಾನ್ಸ್ಡ್​ ಸಿಸ್ಟಮ್ಸ್​ ಪ್ರೈವೇಟ್ ಲಿಮಿಟೆಡ್ ಪಡೆದಿತ್ತು. ಈ ಸಂಸ್ಥೆ ಇಸ್ರೇಲ್​ನ ಸಂಸ್ಥೆಯ ಮುಖವಾಣಿಯಾಗಿ ಭಾರತದಲ್ಲಿ ಕೆಲಸ ಮಾಡುತ್ತಿದೆ.ಸದ್ಯ ಈ ಪ್ರಕರಣ ದೇಶದ ಗಮನಸೆಳೆದಿದ್ದು, ಎಲ್ಲರ ಗಮನ ಈಗ ಆಂಧ್ರಪ್ರದೇಶದೆಡೆಗೆ ನೆಟ್ಟಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
