ವಿಜಯವಾಡ:ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.
ಗುಡಿವಾಡ ಠಾಣೆಯ ಎಸ್​ಐ ವಿಜಯ್ ​ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಹಿಂದೆ ವಿವಾಹೇತರ ಸಂಬಂಧವಿರುವ ಶಂಕೆಯನ್ನು ಸಹೋದ್ಯೋಗಿಗಳು ವ್ಯಕ್ತಪಡಿಸಿದ್ದಾರೆ. ​​
ಇದನ್ನೂ ಓದಿರಿ:ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!
ವೆಸ್ಟ್​ ಗೋದಾವರಿ ಜಿಲ್ಲೆಯ ಏಳೂರಿನ 2012ನೇ ಬ್ಯಾಚ್ ಎಸ್​ಐ ಆಗಿದ್ದ ವಿಜಯ್​ಕುಮಾರ್​, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ನೋಜೀಡು ಮೂಲದ ಬ್ಯೂಟಿಷಿಯನ್​ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದ ಮೇಲೆ ವಿಜಯ್​ ಕುಮಾರ್ ಒಮ್ಮೆ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದರು.
ಶಿಕ್ಷೆ ಅವಧಿ ಮುಗಿದ ಬಳಿಕ ಗುಡಿವಾಡ ಉಪವಲಯದ ಅನೇಕ ಠಾಣೆಗಳಲ್ಲಿ ಎಸ್​ಐ ಆಗಿ ವಿಜಯ್​ ಕಾರ್ಯ ನಿರ್ವಹಿಸಿದ್ದರು. ಮೂರು ತಿಂಗಳ ಹಿಂದಷ್ಟೇ ಏಳೂರು ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ವಿವಾಹವಾದರೂ ಪತ್ನಿಯನ್ನು ಕರೆತರದೆ ಕಪೂರಾದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಬ್ಯೂಟಿಷಿಯನ್​ ಜತೆಯಲ್ಲೇ ಉಳಿದುಕೊಂಡಿದ್ದರು.
ಇದನ್ನೂ ಓದಿರಿ:PHOTO GALLERY| ರಮೇಶ್ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ಸಮಾಗಮ..
ಇದೀಗ ಸಾವಿಗೀಡಾಗಿದ್ದು, ಬ್ಯೂಟಿಷಿಯನ್​ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯ್​ ಮೃತದೇಹವನ್ನು ಗುಡಿವಾಡ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

ದಿವಂಗತ ಸುರೇಶ್ ಅಂಗಡಿ ಉತ್ತರಾಧಿಕಾರಿಯಾಗಿ ಶ್ರದ್ಧಾ ಶೆಟ್ಟರ್ ಹೆಸರು ಫೈನಲ್?

VIDEO| ಮೈಕಲ್​ ಜಾಕ್ಸನ್​ ಮೂನ್​ ವಾಕ್​ ಮೂಲಕ ಸಂಚಾರ ನಿರ್ವಹಿಸೋ ಪೇದೆಯ ಹಿಂದಿದೆ ಕಣ್ಣೀರ ಕತೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
