ವಿಜಯವಾಡ:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಆಂಧ್ರ ಪ್ರದೇಶದ ಮೀನುಗಾರನ ಬಾಳಲ್ಲಿ ನಡೆದಿದೆ.
ಮೀನುಗಾರರ ಬಲೆಯಲ್ಲಿ ಅಪರೂಪದ ಮೀನುಗಳು ಆಗಾಗ ಸಿಕ್ಕಿಬೀಳುತ್ತವೆ. ನೋಡಲು ಚಿಕ್ಕದಾಗಿದ್ದರೂ ಈ ಮೀನುಗಳ ಬೆಲೆ ಮಾತ್ರ ಲಕ್ಷಗಟ್ಟಲೆ ಇರುತ್ತದೆ. ಇಂತಹ ಅಪರೂಪದ ಜಾತಿಯ ಮೀನುಗಳು ಬಲೆಗೆ ಬಿದ್ದರೆ ಮೀನುಗಾರರಿಗಂತೂ ಸುಗ್ಗಿಯೋ ಸುಗ್ಗಿ. ಏಕೆಂದರೆ ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಇತ್ತೀಚೆಗಷ್ಟೇ, ಕೃಷ್ಣಾ ಜಿಲ್ಲೆಯ ಅಂತರವೇದಿ ಮೂಲದ ಮೀನುಗಾರ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾರೆ. ಮೀನುಗಾರನ ಬಲೆಯಲ್ಲಿ ಸಿಕ್ಕ 2 ಮೀನುಗಳು ಬರೋಬ್ಬರಿ 4 ಲಕ್ಷ ರೂಪಾಯಿಗೆ ಮಾರಾಟವಾಗಿದವೆ.
ಬಲೆಗೆ ಬಿದ್ದ ಈ ಮೀನುಗಳನ್ನು ಕೋನಸೀಮಾ ಜಿಲ್ಲೆಯ ಅಂತರವೇದಿಪಲ್ಲಿಪಾಲೆಂ ಮೀನುಗಾರಿಕಾ ಬಂದರಿನಲ್ಲಿ ಹರಾಜು ಮಾಡಲಾಗಿದೆ. ಇವುಗಳನ್ನು ಖರೀದಿಸಲು ವ್ಯಾಪಾರಸ್ಥರು ಮುಗಿಬಿದ್ದರು. ಆದರೆ, ಕೊನೆಗೆ 4 ಲಕ್ಷ ರೂ. ಕೊಟ್ಟು ವ್ಯಕ್ತಿಯೊಬ್ಬರು ಈ ಎರಡು ಮೀನುಗಳನ್ನು ಖರೀದಿಸಿದ್ದಾರೆ.
ಈ ಮೀನಿನ ವಿಶೇಷತೆ ಏನು?ಬಲೆಗೆ ಬಿದ್ದ ಮೀನನ್ನು ಕಚಿಡಿ ಫಿಶ್​ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪ್ರೋಟೋನಿಬಿಯಾ ಡಯಾಕಂಥಸ್. ಈ ಮೀನಿನ ಹೊಟ್ಟೆಯಲ್ಲಿರುವ ಅಂಗಾಂಗಗಳು ಔಷಧೀಯ ಗುಣಗಳನ್ನು ಹೊಂದಿವೆ ಎನ್ನುತ್ತಾರೆ ಮೀನುಗಾರಿಕಾ ಅಧಿಕಾರಿಗಳು. ಇಂತಹ ಮೀನುಗಳು ಅಪರೂಪವಾಗಿ ಬಲೆಯಲ್ಲಿ ಸಿಕ್ಕಿಬೀಳುತ್ತವೆ. ಕಚಡಿ ಮೀನುಗಳನ್ನು ಸಮುದ್ರದ ಚಿನ್ನದ ಮೀನು ಎಂದು ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ಮೀನುಗಳು ಚಿನ್ನಕ್ಕಿಂತ ಹೆಚ್ಚು ಮೌಲ್ಯಯುತವಾಗಿವೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಲಿಗೆಗಳನ್ನು ಹಾಕಲು ವೈದ್ಯರು ಬಳಸುವ ದಾರಗಳನ್ನು ಈ ಮೀನುಗಳಿಂದ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಕಚಡಿ ಮೀನಿನ ಹೊಟ್ಟೆಯಿಂದ ತಯಾರಿಸುವ ದಾರದಿಂದ ಹೊಲಿಗೆ ಹಾಕಿದಾಗ ಕಾಲಕ್ರಮೇಣ ಅದು ದೇಹಕ್ಕೆ ಸೇರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ಮೀನನ್ನು ಪಿತ್ತಕೋಶ ಮತ್ತು ಶ್ವಾಸಕೋಶದ ಕಾಯಿಲೆಗಳನ್ನು ಗುಣಪಡಿಸಲು ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಇದಲ್ಲದೆ ಈ ಕಚ್ಚಾ ಮೀನುಗಳನ್ನು ವೈನ್ ತಯಾರಿಸುವ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಮೀನಿನ ರೆಕ್ಕೆಗಳು ವೈನ್ ಅನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚಡಿ ಮೀನುಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ವ್ಯಾಪಾರಸ್ಥರು ಲಕ್ಷಗಟ್ಟಲೆ ಹಣ ನೀಡಿ ಖರೀದಿಸುತ್ತಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 15 =
Remember me
