ಕೃಷ್ಣಾ:ಪ್ರೀತಿಗೆ ಎಲ್ಲೆಯಿಲ್ಲ ಅಂತಾರೆ. ಜಾತಿ ಬೇಧ ನೋಡದೆ ಚಿಕ್ಕ ಪರಿಚಯವೊಂದು ಕೊಂಚ ಪ್ರೀತಿಗೆ ತಿರುಗುತ್ತಿದೆ. ಆಂಧ್ರದ ಯುವಕನೊಬ್ಬ ತೈವಾನ್​ ಯುವತಿಯನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ದೇವರಕೋಟಾದ ಚಲ್ಲಪಲ್ಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಆತನ ವಯಸ್ಸು 18, ಗೆಳತಿಗೆ 17 ವರ್ಷ: ಇಬ್ಬರು ನಡುವಿತ್ತು ಒಂದು ವರ್ಷದ ಪ್ರೀತಿ, ಕೊನೆಗೆ ನಡೆದಿದ್ದು ದುರಂತ
ವೇಮುರಿ ಕಿಶೋರ್ ಎಂಬುವವರು ಚಲ್ಲಪಲ್ಲಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದು, ಅವರ ಮಗ ಸಾಯಿ ದಿನಕರ್ ತೈವಾನ್‌ನ ಹ್ಸಿಂಚುನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಆತನಿಗೆ ಅಲ್ಲಿನ ಫಿಸಿಯೋಥೆರಪಿಸ್ಟ್ ಯುಟಿಂಗ್ ಲಿಯು ಎಂಬಾಕೆಯ ಪರಿಚಯವಾಗಿದ್ದು, ಇಬ್ಬರು ನಡುವೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರು ಮದುವೆಯಾಗಲು ನಿಶ್ಚಿಯಿಸಿ ಮನೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.ಇಬ್ಬರ ಪ್ರೀತಿಗೆ ಎರಡು ಮನೆಯವರು ಒಪ್ಪಿಗೆ ನೀಡಿದ್ದು, ರವಿವಾರದಂದು ದ್ವಾರಕಾ ತಿರುಮಲದಲ್ಲಿ ಈ ಜೋಡಿ ಹಿಂದೂ ವಿವಾಹ ಸಂಪ್ರದಾಯದಂತೆ ಸಪ್ತಪದಿ ತುಳಿದಿದೆ. ಘಂಟಸಾಲ ಮಂಡಲದ ದೇವರಕೋಟದಲ್ಲಿ ಸೋಮವಾರದಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಈ ಸಮಾರಂಭಕ್ಕೆ ವಧುವಿನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತೈವಾನ್‌ನಿಂದ ಬಂದಿದ್ದರು. ಈ ವೇಳೆ ಮಹಿಳೆಯರು ರೇಷ್ಮೆ ಸೀರೆ ಮತ್ತು ಪುರುಷರು ರೇಷ್ಮೆ ಪಂಚೆಗಳನ್ನು ಧರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
