ಹೈದರಾಬಾದ್​:ಕರೊನಾ ವಾರಿಯರ್ಸ್​ ಎಂದು ಆರೋಗ್ಯ ಸಿಬ್ಬಂದಿಯನ್ನು ಎಷ್ಟೇ ಹಾಡಿ, ಹೊಗಳಿ, ಕೊಂಡಾಡಿದರೂ ಕೆಲವು ರಾಜ್ಯಗಳಲ್ಲಿ ಇವರಿಗೆ ಕನಿಷ್ಠ ಸೌಲಭ್ಯವೂ ಇಲ್ಲದ ಪರಿಸ್ಥಿತಿ ತಲೆದೋರಿದೆ. ಇದಕ್ಕಾಗಿ ಕೆಲವು ಕಡೆಗಳಲ್ಲಿ ವೈದ್ಯರು ಪ್ರತಿಭಟಿಸಿದ್ದೂ ನಡೆದಿದೆ.
ಇಂಥದ್ದೇ ಒಂದು ಪ್ರತಿಭಟನೆ ಮಾಡಿದ್ದರು ಹೈದರಾಬಾದ್​ನ ಅರವಳಿಕೆ ತಜ್ಞ ಡಾ. ಸುಧಾಕರ್. ಕಳೆದ ಮಾರ್ಚ್​ನಲ್ಲಿ ಸರ್ಕಾರದ ವಿರುದ್ಧ ಇವರು ತಿರುಗಿಬಿದ್ದಿದ್ದರು. ಕರೊನಾ ಸೋಂಕಿತರ ಸಮೀಪ ಹೋಗುವ ಸಮಯದಲ್ಲಿ ವೈದ್ಯರಿಗೆ ಅವಶ್ಯವಾಗಿ ಬೇಕಾಗಿರುವ ಎನ್-95 ಮಾಸ್ಕ್ ಅನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದ್ದರು. ಪದೇ ಪದೇ ಮಾಸ್ಕ್​ ಬದಲಿಸುವ ಅಗತ್ಯವಿದೆ. ಆದರೆ 15 ದಿನಗಳಾದರೂ ಮಾಸ್ಕ್​ ನೀಡದೇ ಸರ್ಕಾರ ವೈದ್ಯರನ್ನು ಸತಾಯಿಸುತ್ತಿದೆ. ಇದರಿಂದ ವೈದ್ಯರ ಜೀವಕ್ಕೆ ಅಪಾಯವಿದೆ ಎಂದಿದ್ದರು ಈ ವೈದ್ಯ.
ಇದನ್ನೂ ಓದಿ:ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…
ಪರಿಣಾಮವಾಗಿ ಅವರನ್ನು ಸರ್ಕಾರ ಸೇವೆಯಿಂದ ಅಮಾನತು ಮಾಡಿತ್ತು. ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ ನೀಡುತ್ತಿದ್ದೀರಿ. ಸರ್ಕಾರ ಎಲ್ಲವನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದರೂ ಸುಳ್ಳು ಸುದ್ದಿ ಹರಡುತ್ತೀರಿ ಎಂಬ ಕಾರಣ ನೀಡಿ ಅವರಿಗೆ ಅಮಾನತು ಶಿಕ್ಷೆ ನೀಡಲಾಗಿತ್ತು.
ಆದರೆ ಅಮಾನತುಗೊಂಡರೂ ವೈದ್ಯರಿಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ಪೊಲೀಸರು ಇವರ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿದ್ದಾರೆ. ಈ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ನೂರಾರು ಜನರು ಈ ಅಮಾನುಷ ಘಟನೆಯನ್ನು ಮೂಕರಂತೆ ವೀಕ್ಷಿಸಿದ್ದಾರೆ.
ಇದನ್ನೂ ಓದಿ:VIDEO: ‘ಮೋದಿಯನ್ನು ಕೊಲ್ಲುತ್ತೇನೆ’ ಎಂದ ಬಾಲಕ: ಮಕ್ಕಳಲ್ಲಿಯೂ ಬಿತ್ತಲು ಶುರುವಾಯಿತೇ ವಿಷಬೀಜ? ಬಿಜೆಪಿ ಟ್ವೀಟ್​
ಹಿಗ್ಗಾ ಮುಗ್ಗ ಥಳಿಸಿದ ನಂತರ ಅವರನ್ನು ಆಟೋ ರಿಕ್ಷಾವೊಂದರ ಮೂಲಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಸ್ಥಳೀಯರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿರೋಧ ಪಕ್ಷಗಳಾದ ಟಿಡಿಪಿ, ಸಿಪಿಐ ಮತ್ತಿತರ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ, ವೈದ್ಯರ ಮೇಲೆ ಹಲ್ಲೆ ನಡೆಸಿದ ಪೊಲೀಸ್​ ಪೇದೆಗಳನ್ನು ವೈಜಾಗ್ ಪೊಲೀಸ್ ಆಯಕ್ತರಾದ ಆರ್ ಕೆ ಮೀನಾ ಅಮಾನತುಮಾಡಿದ್ದಾರೆ. ವೈದ್ಯ ಕುಡಿದು ಬಂದು ಗಲಾಟೆ ಮಾಡಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.(ಏಜೆನ್ಸೀಸ್​)

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 4 =
Remember me
