ಚಿತ್ತೂರ್​:ಆಕಸ್ಮಿಕವಾಗಿ ಮದುವೆ ರದ್ದಾ ಕಾರಣದಿಂದ ಆಂಧ್ರ ಪ್ರದೇಶ ಮೂಲದ ಯುವತಿಯೊಬ್ಬಳು ಮದುವೆ ನಡೆಯಬೇಕಿದ್ದ ದಿನದಂದೇ ಆತ್ಮಹತ್ಯೆ ಶರಣಾಗಿರುವ ಘಟನೆ ಅಮೆರಿಕಾದ ದಲ್ಲಾಸ್​ನಲ್ಲಿ ನಡೆದಿದೆ.
ಯುವತಿ ಸಾವಿನಿಂದ ಆಂಧ್ರದ ಚಿತ್ತೂರ್​ ಜಿಲ್ಲೆಯ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ಮೃತದೇಹವು ಎರಡು ದಿನಗಳಲ್ಲಿ ತವರಿಗೆ ಹಸ್ತಾಂತರವಾಗಲಿದೆ. ನಿಗದಿಯಾಗಿದ್ದ ಮದುವೆ ಯಾವ ಕಾರಣಕ್ಕೆ ಮರಿದುಬಿದ್ದಿತು? ಎಂಬ ವಿಚಾರ ನಿಗೂಢವಾಗಿಯೇ ಉಳಿದಿದ್ದು, ತನಿಖಾ ನಂತರವೇ ತಿಳಿದುಬರಲಿದೆ.
ಇದನ್ನೂ ಓದಿರಿ:ಬಿಗ್​ಬಾಸ್​ ಖ್ಯಾತಿಯ ಮಸ್ತಾನ್​ ಮನೆ ಮೇಲೆ ಪೊಲೀಸರ ದಾಳಿ..!
ಘಟನೆಯ ವಿವಿರಣೆಗೆ ಬರುವುದಾದರೆ, ಸುಷ್ಮಾ ಅಮೆರಿಕಾದ ದಲ್ಲಾಸ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಚಿತ್ತೂರ್​ ಜಿಲ್ಲೆಯ ಪುಥಲಪಟ್ಟು ಮಂಡಲದ ಬಂಡಾರ್ಲಪಲ್ಲಿಯ ಭರತ್​ ಎಂಬಾತನ ಜತೆ ಸುಷ್ಮಾಗೆ ಮದುವೆ ನಿಶ್ಚಯವಾಗಿತ್ತು. ಮದುವೆ ಮಾರ್ಚ್​ 4ಕ್ಕೆ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಭರತ್​ ಮನೆಯವರು ಮದುವೆ ಮುರಿದುಕೊಂಡರು.
ಆಕಸ್ಮಿಕವಾರಿ ಮದುವೆ ರದ್ದಾದ ನೋವಿನಿಂದ ಸುಷ್ಮಾ ಖಿನ್ನತೆಗೆ ಜಾರಿದ್ದರು. ಇದೇ ನೋವಿನಲ್ಲಿ ಮದುವೆಯ ದಿನದಂದೇ ದಲ್ಲಾಸ್​ನಲ್ಲಿ ತನ್ನ ನಿವಾಸದಲ್ಲಿ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಸುಷ್ಮಾ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಇನ್ನು ಎರಡು ದಿನಗಳಲ್ಲಿ ಆಕೆಯ ಮೃತದೇಹ ಕುಟುಂಬಕ್ಕೆ ಹಸ್ತಾಂತರವಾಗಲಿದೆ.
ಇದನ್ನೂ ಓದಿರಿ:ಜಾರಕಿಹೊಳಿ ಸಿಡಿ ಕೇಸಲ್ಲಿ ಇಂದು ಎಫ್​ಐಆರ್? ಯಾವ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಬೇಕೆಂಬ ಜಿಜ್ಞಾಸೆ
ಇತ್ತ ಭರತ್​ ಮನೆಯವರ ವಿರುದ್ಧ ಸುಷ್ಮಾ ಮನೆಯವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.(ಏಜೆನ್ಸೀಸ್​)
ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

ಬರ-ನೆರೆಗೆ ಸಿದ್ಧವಾಗುತ್ತಿದೆ ತಡೆಗೋಡೆ: ಹವಾಮಾನ ಬದಲಾವಣೆ ಕ್ರಿಯಾಯೋಜನೆ, ಸರ್ಕಾರಕ್ಕೆ ಶೀಘ್ರ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
