ಅನಂತಪುರ:ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಅದ್ಭುತ ಗೆಲುವಿಗೆ ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪಾಲೂ ದೊಡ್ಡದಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗ್ಯಾರಂಟಿ: ಪ್ರಧಾನಿ ಮೋದಿ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದು ಖಚಿತವಾಗಿದೆ. ಆಂಧ್ರ ಮುಖ್ಯಮಂತ್ರಿ ಜಗನ್​ ಸಹೋದರಿ ಹಾಗೂ ಎಪಿಸಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಮೊದಲ ಗ್ಯಾರಂಟಿ ಯೋಜನೆ ಫೆ.26 ಸೋಮವಾರ ಘೋಷಿಸಿದ್ದಾರೆ.
ಅನಂತಪುರ ಪಟ್ಟಣದಲ್ಲಿ ಎಪಿಸಿಸಿ ಆಯೋಜಿಸಿದ್ದ ನ್ಯಾಯ ಸಾಧನಾ ಸಭೆಯ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.‘ಇಂದಿರಮ್ಮ ಅಭಯಂ’ ಹೆಸರಿನ ಮೊದಲ ಗ್ಯಾರಂಟಿ ಘೋಷಿಸಿದ ಶರ್ಮಿಳಾ ಅವರು ಈ ಯೋಜನೆಯಡಿ ಪ್ರತಿ ಬಡ ಕುಟುಂಬದ ಗೃಹಿಣಿಗೆ ತಿಂಗಳಿಗೆ 5 ಸಾವಿರ ರೂ. ನೀಡುವುದು ಹಾಗೂ ಗೃಹಿಣಿ ಹೆಸರಿನಲ್ಲಿ ಚೆಕ್ ವಿತರಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಅಡಿಪಾಯವನ್ನು ಹಾಕಿತು. ಇದನ್ನು ಹಂತ ಹಂತವಾಗಿ ನಿರ್ಮಿಸಲಾಗಿದೆ. ಇಂದು ಕಾಂಗ್ರೆಸ್ ಪಕ್ಷ ಆಂಧ್ರ ರಾಜ್ಯಕ್ಕೆ ಗ್ಯಾರಂಟಿ ನೀಡುತ್ತದೆ. ಪ್ರತಿ ಮನೆಗೆ 5 ಸಾವಿರ ರೂ. ನೀಡಲಿದೆ. ಬಡ ಕುಟುಂಬಗಳು ನಿರ್ಭೀತಿಯಿಂದ ಬದುಕುವ ಯೋಜನೆ ಇದಾಗಿದೆ. ಬಡತನ ನಿರ್ಮೂಲನೆಗೆ ಇಂದಿರಮ್ಮ ಅಭಯ ಜಾರಿಯಾಗಲಿದೆ. ಅಸಮಾನತೆಗಳನ್ನು ಹೋಗಲಾಡಿಸಲು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದಾಗಿ ಶರ್ಮಿಳಾ ಹೇಳಿದರು.
ಕಷ್ಟದಲ್ಲಿರುವ ಬಡ ಕುಟುಂಬದ ಪ್ರತಿ ಮನೆಯ ಮುಂದೆ ಇಂದಿರಮ್ಮ ಅಭಯ ಗ್ಯಾರಂಟಿ ಯೋಜನೆ ಬರುತ್ತದೆ. ಪ್ರತಿ ಕುಟುಂಬಕ್ಕೆ ಮಹಿಳೆಯೇ ದೇವರು. ಆದ್ದರಿಂದ ಮಹಿಳೆಯ ಹೆಸರಿನಲ್ಲಿ ಚೆಕ್ ನೀಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್ ರಾಜಶೇಕರ್​ ರೆಡ್ಡಿ ಅವರ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಅದ್ಭುತ ಯೋಜನೆಗಳನ್ನು ಜಾರಿಗೆ ತಂದರು. ಕಾಂಗ್ರೆಸ್​​ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಪ್ರತ್ಯೇಕ ರಾಜ್ಯ ರಚನೆಯಾದ ಬಳಿಕ ಅಭಿವೃದ್ಧಿ ಕುಸಿದಿದೆ ಎಂದು ಟಿಡಿಪಿ ಮತ್ತು ಸಿಎಂ ಜಗನ್​ ಮೋಹನ್​ ರೆಡ್ಡಿ ವಿರುದ್ಧ ಶರ್ಮಿಳಾ ವಾಗ್ದಾಳಿ ನಡೆಸಿದರು.
ಮುಂಬರುವ ಲೋಕಸಭೆ ಮತ್ತು ವಿಧಾಸನಭೆ ಚುನಾವಣೆ ದೃಷ್ಟಿಯಿಂದ ಅಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪ್ರತಿ ಕುಟುಂಬದ ಗೃಹಿಣಿಯರಿಗೆ​ 5000 ರೂ. ಮೊತ್ತವನ್ನು ಘೋಷಿಸಿದ್ದು ಕರ್ನಾಟಕದಲ್ಲೂ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ 2000 ರೂ. ಮೊತ್ತದಿಂದ 5000 ರೂ. ಹೆಚ್ಚಳ ಮಾಡಬಹುದೇ ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆಗೂ ಮುನ್ನವೇ ರಾಜ್ಯದ ಜನಸಾಮಾನ್ಯರು, ಗೃಹಿಣಿಯರು, ನಿರುದ್ಯೋಗಿಗಳು, ರೈತರು ಸೇರಿದಂತೆ ಹಲವು ವರ್ಗಗಳವನ್ನು ಗುರುಯಾಗಿಸಿಕೊಂಡು 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು.
ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen + eighteen =
Remember me
