ಗುಂಟೂರು:ಸೇತುವೆಯಿಂದ ತಳ್ಳಲ್ಪಟ್ಟರೂ ಪೊಲೀಸರಿಗೆ ಕರೆಮಾಡಿ ಅಪ್ರಾಪ್ತ ವಯಸ್ಕಳು ಬದುಕುಳಿದಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವ್ಯಕ್ತಿಯೋರ್ವ ತನ್ನ ಪ್ರೇಯಸಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನೂ ಸೇತುವೆ ಮೇಲಿಂದ ತಳ್ಳಿ ಹತ್ಯೆ ಮಾಡಲು ಯತ್ನಿಸಿದ್ಧಾನೆ. ಪ್ರಕರಣ ಸಂಬಂಧ ಪೊಲೀಸರು ಉಳ್ಳವ ಸುರೇಶ್​ ಎಂಬಾತನನ್ನು ವಶಕ್ಕೆ ಪಡೆದಿದ್ದು, ಅಪ್ರಾಪ್ತ ವಯಸ್ಕಳನ್ನು ರಕ್ಷಿಸಿದ್ದಾರೆ. ಕಾಣೆಯಾಗಿರುವ ಪಪ್ಪುಲ ಸುಹಾಸಿನಿ(36) ಹಾಗೂ ಒಂದು ವರ್ಷದ ಮಗುವಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರೂ ಬಂಧಿತ ಆರೋಪಿ ಉಳ್ಳವ ಸುರೇಶ್​ ರಕ್ಷಿಸಲ್ಪಟ್ಟ ಬಾಲಕಿಯ ತಾಯಿಯೊಂದಿಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದ. ಭಾನುವಾರ ಸಂಜೆ ಆರೋಪಿಯೂ ಮಹಿಳೆ ಹಾಗೂ ಆಕೆಯ ಮಕ್ಕಳನ್ನು ರಾವುಲಪಾಲೆಂ ಗೌತಮಿ ಸೇತುವೆ ಬಳಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕರೆದುಕೊಂಡು ಬಂದಿದ್ದಾನೆ.
ಇದನ್ನೂ ಓದಿ:ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪ್ರಾಣಬಿಟ್ಟ ಗೃಹಿಣಿ
ಬಳಿಕ ಮೂವರನ್ನೂ ಸೇತುವೆ ಮೇಲಿಂದ ತಳ್ಳಿ ಆರೋಪಿ ಪರಾರಿಯಾಗಿದ್ದಾನೆ. ಈ ವೇಳೆ ಬಾಲಕಿ ಸೇತುವೆಯೆ ಪೈಪ್ ಒಂದನ್ನೂ ಬಿಗಿಯಾಗಿ ಹಿಡಿದಿದ್ದಾಳೆ. ತನ್ನ ಬಳಿ ಇದ್ದ ಮೊಬೈಲ್​ ಫೋನಿನಿಂದ ಬೆಳಗಿನ ಜಾವ 3:50ರ ಸುಮಾರಿಗೆ ಪೊಲೀಸ್​ ಕಂಟ್ರೋಲ್​ ರೂಮಿಗೆ ಕರೆ ಮಾಡಿ ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದಾಳೆ.
ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಾಲಕಿಯನ್ನೂ ರಕ್ಷಿಸಿ ಹೇಳಿಕೆಯನ್ನೂ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನೂ ಬಂಧಿಸಲಾಗಿದೆ. ಕಾಣೆಯಾಗಿರುವ ಮಹಿಳೆ ಹಾಗೂ ಮಗುವಿನ ಹುಡುಕಾಟಕ್ಕೆ ತಂಡ ಒಂದನ್ನೂ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರುರೂ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
