ನವದೆಹಲಿ: ಚೀನೀಯರು ಆರಂಭಿಸಿರುವ ಫೇಕ್​​ಸ್ಕೈ ಅಟ್ಯಾಕ್​ನ ಟಾರ್ಗೆಟ್ ನೀವು ಕೂಡ ಆಗಿರಬಹುದು- ಹುಷಾರಾಗಿರಿ!. ಏಷ್ಯಾದಲ್ಲೇ ಕಾರ್ಯಾಚರಿಸುತ್ತಿರುವ ಚೀನಿ ಭಾಷೆ ಮಾತನಾಡುವ ರೋಮಿಂಗ್ ಮಾಂಟಿಸ್ ಎಂಬ ಗ್ರೂಪ್​ ಫೇಸ್​ಸ್ಕೈ ಅಟ್ಯಾಕ್ ನಡೆಸುತ್ತಿರುವ ಬಗ್ಗೆ ಟೆಕ್ ಸಂಶೋಧಕರು ಸಂದೇಹ ವ್ಯಕ್ತಪಡಿಸಿದ್ದಾರೆ.
ಫೇಕ್​​ಸ್ಕೈ ಅಟ್ಯಾಕ್​ ಆದ್ರೆ ಬಳಕೆದಾರರ ಬ್ಯಾಂಕಿಂಗ್ ಮಾಹಿತಿ, ವೈಯಕ್ತಿಕ ಮಾಹಿತಿ ಎಲ್ಲವೂ ಕಳುವಾಗುವುದು ಶತಃಸಿದ್ಧ. ಫೇಸ್​ಸ್ಕೈ ಎಂಬ ಆಂಡ್ರಾಯ್ಡ್ ಮಾಲ್ವೇರ್ ಮೂಲಕ ಈ ದಾಳಿ ನಡೆಸಲಾಗುತ್ತದೆ. ಈ ದಾಳಿ ಮೊಟ್ಟ ಮೊದಲ ಬಾರಿಗೆ 2017ರ ಅಕ್ಟೋಬರ್ ತಿಂಗಳಲ್ಲಿ ಪತ್ತೆಯಾಗಿತ್ತು. ಅಂದು ಪ್ರಾಥಮಿಕವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಜನರ ವಿರುದ್ಧ ಈ ದಾಳಿ ನಡೆದಿತ್ತು ಎಂಬ ಅಂಶವನ್ನು ಸೈಬರೀಸನ್​ ನೋಕ್ಟರ್​ನಸ್​ ಎಂಬ ಸಂಸ್ಥೆಯ ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಮತ್ತೊಂದು ಮಾರಕ ಕಾಯಿಲೆಯ ಎಚ್ಚರಿಕೆ ರವಾನಿಸಿದೆ ಚೀನಾ!
ಸದ್ಯದ ಪರಿಸ್ಥಿತಿಯಲ್ಲಿ ಈ ದಾಳಿಯ ಗುರಿ ಅಮೆರಿಕ, ಬ್ರಿಟನ್​, ಜರ್ಮನಿ, ಫ್ರಾನ್ಸ್, ತೈವಾನ್​, ಭಾರತದ ಜನರಾಗಿದ್ದಾರೆ. ಈ ಸಲ ಮಾಲ್ವೇರ್​ ಪೋಸ್ಟಲ್ ಸರ್ವೀಸ್ ಆ್ಯಪ್​ನ ಸೋಗಿನಲ್ಲಿ ಆಂಡ್ರಾಯ್ಡ್ ಫೋನಿಗೆ ಪ್ರವೇಶ ಪಡೆಯುತ್ತಿದೆ. ವರದಿಗಳ ಪ್ರಕಾರ, ಸ್ಮಿಷಿಂಗ್ ಅಥವಾ ಎಸ್​ಎಂಎಸ್​ ಪಿಷಿಂಗ್ ಈ ಸಲದ ಅಸ್ತ್ರ. ಫೇಕ್​ಸ್ಕೈ ದಾಳಿ ಕೋರರು ಆರಂಭದಲ್ಲಿ ಎಸ್​ಎಂಎಸ್ ರವಾನಿಸಿ, ಆ್ಯಪ್ ಡೌನ್​ಲೋಡ್ ಮಾಡುವಂತೆ ಸೂಚಿಸುತ್ತಾರೆ.
ನೋಡುವುದಕ್ಕೆ ಇದು ನಿಜವಾದ ಪೋಸ್ಟಲ್ ಸರ್ವೀಸ್ ಆ್ಯಪ್​ನಂತೆ ಭಾಸವಾದರೂ, ಒಮ್ಮೆ ಡೌನ್​ಲೋಡ್ ಮಾಡಿದ ಬಳಿಕ ಎಸ್ಎಂಎಸ್​ ಇಂಟರ್​ಸೆಪ್ಟ್ ಮಾಡುವ ಅನುಮತಿ ಕೇಳುತ್ತದೆ. ನಂತರದಲ್ಲಿ ಅನುಮತಿಯಲ್ಲಿ ನಿಮ್ಮ ಫೋನಿನ ಸಂಪೂರ್ಣ ನಿಯಂತ್ರಣ ದಾಳಿಕೋರರ ಕೈಯಲ್ಲಿರುತ್ತದೆ. ಅವರಿಗೆ ಬೇಕಾದ ಬ್ಯಾಂಕಿಂಗ್ ಮಾಹಿತಿ, ಐಎಂಇಐ ನಂಬರ್, ಐಎಂಎಸ್​ಐ ನಂಬರ್​ ಸೇರಿ ಎಲ್ಲ ಮಾಹಿತಿಗಳನ್ನು ಅವರು ತೆಗೆದುಕೊಂಡು ಅನ್ಯ ಕಾರ್ಯಗಳಿಗೆ ಬಳಸತೊಡಗುತ್ತಾರೆ. (ಏಜೆನ್ಸೀಸ್)
ಕೋವಿಡ್ ಚಿಕಿತ್ಸೆಗೆ ಹೆಚ್ಚು ಹಣ ಪಡೆಯುವಂತಿಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 15 =
Remember me
