ಪಾಳಾ:ಎಟಿಎಂಗೆ ಹೋಗಿದ್ದ ಅಂಗನವಾಡಿ ಶಿಕ್ಷಕಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ತಮ್ಮ ಎಟಿಎಂ ಕಾರ್ಡ್​ನ್ನು ಮಶಿನ್​ಗೆ ಹಾಕಿ, ಪಿನ್​ ನಂಬರ್​ ಬರೆದು, ಬೇಕಾದರ ಹಣದ ಮೊತ್ತವನ್ನೂ ದಾಖಲಿಸಿ ಕಾಯುತ್ತ ನಿಂತರು. ಹಣವೇನೋ ಬಂತು. ಆದರೆ ಅದನ್ನು ನೋಡಿದ ಶಿಕ್ಷಕಿ ಕಕ್ಕಾಬಿಕ್ಕಿಯಾದರು.
ಕೇರಳದ ವೆರಾನಲ್​ನ ಕರೂರು ಪಂಚಾಯಿತಿಯಲ್ಲಿರುವ ಅಂಗನವಾಡಿ ಶಿಕ್ಷಕಿ ಲಿಸ್ಸಿ ಕಟ್ಟಕತ್​ ಎಂಬುವರು ಪಾಳಾದಲ್ಲಿರುವ ಎಸ್​ಬಿಐ ಎಟಿಎಂ ಕೇಂದ್ರವೊಂದಕ್ಕೆ ಹೋಗಿ ಹಣ ತೆಗೆದರು. ಅವರು ಎಟಿಎಂ ಯಂತ್ರದಲ್ಲಿ ಕೇವಲ 500 ರೂಪಾಯಿಯಷ್ಟನ್ನು ಮಾತ್ರ ದಾಖಲಿಸಿದರು. ಆದರೆ ಬಂದ ಹಣದ ಮೊತ್ತ 10,000 ರೂಪಾಯಿ.
ಶಿಕ್ಷಕಿ ಕೂಡಲೇ ಆ ಪಂಚಾಯಿತಿ ಸದಸ್ಯನಿಗೆ ವಿಷಯ ತಿಳಿಸಿದರು. ಬಳಿಕ ಎಸ್​ಬಿಐ ಅಧಿಕಾರಿಗಳಿಗೂ ವಿಷಯ ತಲುಪಿಸಲಾಯಿತು. ಅವರು ಸ್ಥಳಕ್ಕೆ ಬಂದರೂ ಶಿಕ್ಷಕಿಯಿಂದ ಉಳಿದ ಹಣ ಪಡೆಯಲು ನಿರಾಕರಿಸಿದರು. ಬ್ಯಾಂಕ್​ಗೆ ತೆಗೆದುಕೊಂಡು ಹೋಗಿ ಎಂದು ಹೇಳಿದರು.
ಆದರೆ ಇದು ಎಸ್​ಬಿಐ ಎಟಿಎಂ ಕೇಂದ್ರದಿಂದ ನಡೆದ ಎಡವಟ್ಟು. ಹಾಗಾಗಿ ನೀವೇ ತೆಗೆದುಕೊಳ್ಳಿ ಎಂದು ಆಗ್ರಹಿಸಿ ಸ್ಥಳೀಯರು, ಪಂಚಾಯಿತಿ ಸದಸ್ಯರು ಎಲ್ಲ ಸೇರಿ ಪ್ರತಿಭಟನೆ ಮಾಡಿದ ಬಳಿಕ ಅಧಿಕಾರಿಗಳು ಹಣವನ್ನು ವಾಪಸ್​ ಪಡೆದು, ರಶೀದಿ ಕೊಟ್ಟರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
