ಕಲ್ಕತ್ತಾ:ಸಹೋದರ-ಸಹೋದರಿ ಸಂಬಂಧವನ್ನು ಬೆಸೆಯುವ ಬಾಂಧವ್ಯದ ಹಬ್ಬ ರಕ್ಷಾ ಬಂಧನ. ಸಹೋದರ ಮತ್ತು ಸಹೋದರಿ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತಿ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ರಕ್ಷಾಬಂಧನ ಪ್ರಯುಕ್ತ ತನ್ನ ಹೆಂಡತಿ ತವರು ಮನೆಗೆ ಹೋಗಿ ಬರುವುದಾಗಿ ಹೇಳಿದ್ದಕ್ಕೆ ಕುಪಿತಗೊಂಡು ಆಕೆಯ ಮೂಗನ್ನೇ ಕತ್ತರಿಸಿರುವ ಘಟನೆ ಉತ್ತರಪ್ರದೇಶದ ಹರ್ದೋಯ್​ನಲ್ಲಿ ನಡೆದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆರೀಪಿಯನ್ನು ರಾಹುಲ್​ ಎಂದು ಗುರುತಿಸಲಾಗಿದ್ದು, ಮಹಿಳೆಯ ಹೆಸರು ಅನಿತಾ ಎಂದು ತಿಳಿದು ಬಂದಿದೆ.
तू घर जाना चाहती है… जा.. तेरी नाक काट देता हूं…हरदोई में अनीता अपने भाई को राखी बांधने के लिए मायके जाना चाहती थी। पति राहुल ने मना किया तो दोनों में झगड़ा हो गया। राहुल ने अनीता को मारा पीटा और अंत में उसकी नाक काट दी।pic.twitter.com/p2GSIoJxev
ಇದನ್ನೂ ಓದಿ:ರೇಣುಕಸ್ವಾಮಿ ಕೊಲೆ ಕೇಸ್​; ದರ್ಶನ್​ಗೆ ಮನೆಯೂಟದ ಭಾಗ್ಯ ಕರುಣಿಸುತ್ತಾ ನ್ಯಾಯಾಲಯ
ಈ ಕುರಿತು ಮಾತನಾಡಿರುವ ಗಾಯಾಳು ಅನಿತಾ, ಅಣ್ಣನಿಗೆ ರಾಖಿ ಕಟ್ಟಿ ಬರಲು ತವರಿಗೆ ಹೋಗುತ್ತೀನಿ ಎಂದು ಹೇಳಿದ್ದಕ್ಕೆ ನನ್ನ ಪತಿ ಮೂಗನ್ನು ಕತ್ತರಿಸಿದ್ದಾನೆ. ಆತನ ಜೊತೆ ನನಗೆ ಬದುಕಲು ಇಷ್ಟವಿಲ್ಲ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮಹಿಳೆ ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳುತ್ತಿರುವುದನ್ನು ನೋಡಬಹುದಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬನಿಯಾನಿ ಪೂರ್ವದ ನಿವಾಸಿ ರಾಹುಲ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಪತ್ನಿ ಅನಿತಾ ರಕ್ಷಾ ಬಂಧನದ ಸಂದರ್ಭದಲ್ಲಿ ಬೆಹಟಗೋಕುದಲ್ಲಿರುವ ತನ್ನ ತಾಯಿಯ ಮನೆಗೆ ಹೋಗುವಂತೆ ಕೇಳಿಕೊಂಡ ನಂತರ ಜಗಳವಾಡಿದ್ದಾನೆ. ಈ ವಿಷಯ ವಿಕೋಪಕ್ಕೆ ಹೋಗಿದ್ದು, ಕೋಪಗೊಂಡ ಆತ ತನ್ನ ಪತ್ನಿಯ ಮೂಗನ್ನೇ ಕತ್ತರಿಸಿದ್ದಾನೆ. ಮಹಿಳೆಯ ಕಿರುಚಾಟವನ್ನು ಕೇಳಿದ ಆಕೆಯ ಅತ್ತೆಯೂ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಒಇ ತಲೆಮಾರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
