ಪಾಲನ್​ಪುರ: ಕುಡಿತದ ಚಟವೇ ಹಾಗೆ.. ಅಬೋಧಾವಸ್ಥೆಗೆ ಕೊಂಡೊಯ್ಯುತ್ತದೆ. ಮದ್ಯದ ನಶೆ ತಲೆಗೇರಿದಾಗ ಬಂದ ಆಪತ್ತು ಪ್ರಾಣಕ್ಕೇ ಕುತ್ತಾದ ಕರುಣಾಜನಕ ಘಟನೆ ಇದು. ಗುಜರಾತ್​ನ ಅರಾವಳಿ ಜಿಲ್ಲೆಯ ಭಿಲೋಡಾ ತಾಲೂಕಿನ ಕುಟುಂಬವೊಂದರಲ್ಲಿ ಮಗನ ಏಟಿಗೆ ಕುಡುಕ ತಂದೆ ಪ್ರಾಣ ಬಿಟ್ಟ ಪ್ರಕರಣವಿದು.
ಭಿಲೋಡಾ ತಾಲೂಕಿನ ಬಾಲುಂದ್ರಾ ಗ್ರಾಮದ ದುಧಾಭಾಯ್ ತಾರಾಲ್​(58) ಮೃತ ವ್ಯಕ್ತಿ. ಈತನ ಪುತ್ರ ದಿನೇಶ್ (26) ಬಂಧಿತ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಘಟನೆ ಹೀಗೆ ನಡೆದಿತ್ತು- ಮೂಗು ಮುಟ್ಟ ಕುಡಿದ ದುಧಾಭಾಯ್ ಮಂಗಳವಾರ ತಡರಾತ್ರಿ ಮನೆ ಬಂದ. ಹೆಂಡ್ತಿಯನ್ನು ಕೂಗಿ ಕರೆದ. ಎದುರು ಬಂದು ನಿಂತವಳಿಗೆ ನಾಲ್ಕೇಟು ಹೊಡೆದ. ಕುಡಿತದ ನಶೆಯಲ್ಲಿ ದುಧಾಭಾಯ್ ಈ ರೀತಿ ಹೆಂಡ್ತಿ ಮೇಲೆ ಹಲ್ಲೆ ನಡೆಸುವುದು ಇದೇ ಮೊದಲಲ್ಲ. ಇದನ್ನು ಅನೇಕ ಸಲ ಗಮನಿಸಿ ಅಪ್ಪನಿಗೆ ಬುದ್ಧಿ ಹೇಳಿದ್ದ ಮಗ ದಿನೇಶ್.
ಇದನ್ನೂ ಓದಿ:ಶ್ರೀಶೈಲಂನಲ್ಲಿರುವ ತೆಲಂಗಾಣ ಪವರ್ ಸ್ಟೇಷನ್​ನಲ್ಲಿ ಭಾರಿ ಬೆಂಕಿ ದುರಂತ: 9 ಜನ ಸಿಲುಕಿರುವ ಶಂಕೆ
ಆದರೆ, ಮಂಗಳವಾರ ರಾತ್ರಿ ಅಮ್ಮನಿಗೆ ಬಿದ್ದ ಪೆಟ್ಟನ್ನು ನೋಡಿ ತಡೆಯಲಾಗದೆ ವ್ಯಗ್ರನಾದ ದಿನೇಶ್ ಕೈಗೆ ಸಿಕ್ಕ ಹರಿತವಾದ ವಸ್ತುವಿನಿಂದ ತಂದೆಯ ತಲೆಗೆ ಹೊಡೆದ. ಗಂಭೀರವಾಗಿ ಗಾಯಗೊಂಡ ದುಧಾಭಾಯರ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗುರುವಾರ ಬೆಳಗ್ಗೆ ದುಧಾಭಾಯ್ ಯನ್ನು ಮಗನೇ ಹತ್ಯೆ ಮಾಡಿರುವ ವಿಚಾರ ಗ್ರಾಮದಲ್ಲಿ ಸುದ್ದಿಯಾಗಿದೆ. ನಮಗೂ ಮಾಹಿತಿ ಸಿಕ್ಕಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ದಿನೇಶ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದೇವೆ. ಆರೋಪಿಯ ಬಂಧನಕ್ಕೆ ಶೋಧಕಾರ್ಯ ಶುರುಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಲವರ್​ ಅನ್ನು ಮದುವೆ ಆಗೋಕೆ ಅದೇನೆಲ್ಲಾ ಡ್ರಾಮಾ ಮಾಡಿದ್ಳು ಕಿರಾತಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
