ಕೋಲ್ಕತ:ಭಾರತೀಯ ಯೋಧರನ್ನು ಕುತಂತ್ರದಿಂದ ಹತ್ಯೆಗೈದ ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಎಲ್ಲಡೆ ಸ್ವದೇಶಿ ಅಭಿಯಾನ ಕೇಳಿಬರುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಪ್ರತಿಕೃತಿ ದಹಿಸಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.
ಇದರ ನಡುವೆ ಪಶ್ಚಿಮ ಬಂಗಾಳದ ಅನ್ಸೋಲ್​ನಲ್ಲಿ ಬಿಜೆಪಿ ಕಾರ್ಯಕರ್ತರು ಚೀನಾ ಮೇಲಿನ ಕೋಪಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನಪ್ಪಾ ಎಂದು ಕಿಮ್​ ಜಾಂಗ್​ ಉನ್​ಗೂ ಪ್ರತಿಭಟನೆಗೂ ಏನು ಸಂಬಂಧವೆಂದು ಊಹಿಸುತ್ತಿದ್ದೀರಾ? ಮುಂದೆ ಓದಿ.ಇದನ್ನೂ ಓದಿ:ಚಲಿಸುತ್ತಿದ್ದ ಬಸ್​ನಲ್ಲಿಯೇ ಮಹಿಳೆಯ ಅತ್ಯಾಚಾರ: ಪ್ರಯಾಣಿಕರಿದ್ರೂ ಕೃತ್ಯವೆಸಗಿದ್ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಕಮಲದ ಚಿತ್ರವುಳ್ಳ ಫೇಸ್​ ಮಾಸ್ಕ್ ಧರಿಸಿರುವ ಕಾರ್ಯಕರ್ತನೊಬ್ಬ ಮಾತನಾಡಿ​, ನಮ್ಮ ಯೋಧರ ಹತ್ಯೆಗೆ ಕಾರಣರಾದ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಎಂದು ಹೇಳಲು ಗೊಂದಲಕ್ಕೀಡಾಗಿ ಕಿಮ್​ ಜಾಂಗ್​ ಉನ್​ ಪ್ರತಿಕೃತಿಯನ್ನು ಸುಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದೆ. ವಿಡಿಯೋವನ್ನು ಈ ಕೆಳಗೆ ಕಾಣಬಹುದಾಗಿದೆ.
🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
pic.twitter.com/OlpjHDj1ej
— Lavanya Ballal (@LavanyaBallal)June 18, 2020

ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ
ಅಂದಹಾಗೆ ಲಡಾಖ್​ ಗಡಿಯ ಗಾಲ್ವಾನ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಚೀನಾ ಸೇನೆ ಭಾರತದ 20 ಸೈನಿಕರನ್ನು ಹತ್ಯೆಗೈದಿದೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ಚೀನಾದ 35 ಸೈನಿಕರನ್ನು ಹೊಡೆದುರುಳಿಸಿದೆ. ಚೀನಾದ ನರಿಬುದ್ಧಿಗೆ ಕಿಡಿ ಕಾರುತ್ತಿರುವ ಭಾರತ ಜನರು ಚೀನಾ ವಿರುದ್ಧ ಸ್ವದೇಶಿ ಜನಾಂದಾಲೋನಕ್ಕೆ ಮುಂದಾಗಿದ್ದಾರೆ.(ಏಜೆನ್ಸೀಸ್​)
40ರ ವೈದ್ಯನನ್ನು ಹನಿಟ್ರ್ಯಾಪ್​ಗೆ ಕೆಡವಿದ್ದ​ ಆರೋಪಿಗಳು ಪೊಲೀಸ್​ ಬಲೆಗೆ ಬಿದ್ದಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
