ಮುಂಬೈ :ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​​ ಒಟಿಟಿ-3 ಸುತ್ತ ಇದ್ದ ಊಹಾಪೋಹಗಳಿಗೆ ಫುಲ್​ಸ್ಟಾಪ್​ ಬಿದ್ದಿದೆ. ಬಿಗ್​ಬಾಸ್​ ಒಟಿಟಿ 1 ಮತ್ತು ಬಿಗ್​ಬಾಸ್​ ಒಟಿಟಿ 2 ಅನ್ನು ಅನುಕ್ರಮವಾಗಿ ಕರಣ್​ ಜೋಹಾರ್​ ಮತ್ತು ಸಲ್ಮಾನ್​​ಖಾನ್​​ ಹೋಸ್ಟ್​ ಮಾಡಿದ್ದರು. ಬಿಗ್​​​ಬಾಸ್ OTT ಸೀಸನ್-2 ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಬ್ಲಾಕ್​ ಬಸ್ಟರ್​ ಸೀಸನ್​ ಆಗಿತ್ತು. ಆದರೆ ಈ ಬಾರಿ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂಬುದು ಖಚಿತವಾಗಿದೆ.
ಇದನ್ನು ಓದಿ : https://www.vijayavani.net/easy-ways-to-weight-loss
ಬಜರಂಗಿ ಭಾಯಿಜಾನ್ ಬದಲಿಗೆ ಈ ಬಾರಿ ಬಿಗ್​ಬಾಸ್​​ ಮನೆಯಲ್ಲಿನ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಳ್ಳಲು ಬಾಲಿವುಡ್ ನಟ ಅನಿಲ್ ಕಪೂರ್ ರೆಡಿಯಾಗಿದ್ದಾರೆ. ಕಾರ್ಯಕ್ರಮವನ್ನು ಅನಿಲ್ ಕಪೂರ್ ಹೇಗೆ ಹೋಸ್ಟ್ ಮಾಡುತ್ತಾರೆ ಎಂಬುದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ OTT ಸೀಸನ್-3 ಮುಂದಿನ ತಿಂಗಳು ಜೂನ್‌ನಲ್ಲಿ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ. ಅದರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.
OTT ಸೀಸನ್-3 ಕಾರ್ಯಕ್ರಮವನ್ನು ಈ ಹಿಂದೆ ಮೇ ತಿಂಗಳಲ್ಲಿ ಸ್ಟ್ರೀಮ್ ಮಾಡಲು ನಿರ್ಧರಿಸಲಾಗಿತ್ತು, ಆದರೆ ಅದು ಒಂದು ತಿಂಗಳು ವಿಳಂಬವಾಗಿದೆ. ಈ ಶೋಗೆ ಹೋಗುವ ಹಲವು ಸ್ಪರ್ಧಿಗಳ ಹೆಸರುಗಳು ಹೊರಬರುತ್ತಿದ್ದು, ಇದರಲ್ಲಿ ರಿಯಾಜ್ ಅಲಿ, ಶಿವಂಗಿ ಜೋಶಿ, ಶಫಾಕ್ ನಾಜ್, ದಲ್ಜಿತ್ ಕೌರ್, ವೈರಲ್ ವಡಾಪಾವ್ ಹುಡುಗಿ ಚಂದ್ರಿಕಾ, ಯೂಟ್ಯೂಬರ್ ಝೈನ್ ಸೈಫಿ, ವಿಕ್ಕಿ ಜೈನ್ ಮತ್ತು ಅದ್ನಾನ್ ಶೇಖ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದುವರೆಗೂ ಯಾವದೇ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಹೇಳಲಾಗಿಲ್ಲ.
ಲೋಕಸಭೆ ಚುನಾವಣೆ: ಐಟಿ ದಾಳಿ.. ದಾಖಲೆಯ 1,100 ಕೋಟಿ ರೂ. ವಶ..! ಕರ್ನಾಟಕಕ್ಕೆ ಸಿಂಹಪಾಲು!!!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 5 =
Remember me
