ಮುಂಬೈ:ರಣಬೀರ್ ಕಪೂರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಅನಿಮಲ್’. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಈ ಸಿನಿಮಾದ ಒಟಿಟಿ ರಿಲೀಸ್‌ಗಾಗಿ ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್​’ ಒಟಿಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ವಂದೇ ಭಾರತ್ ರೈಲ್​ಗಳು ಸ್ಪೀಡ್​ ಹೆಚ್ಚಾಗಲಿದೆಯೇ?: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಅನಿಮಲ್​ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ‘ಅನಿಮಲ್’ ಮೂರುವರೆ ಗಂಟೆಗಳ ರನ್ಟೈಮ್ ಹೊಂದಿದ್ದರೂ, ಒತ್ತಡದಿಂದಾಗಿ ಸುಮಾರು ಒಂಬತ್ತು ನಿಮಿಷಗಳ ದೃಶ್ಯಗಳನ್ನು ಕತ್ತರಿಸಲಾಯಿತು. ನಾನು ಪ್ರಸ್ತುತ ನೆಟ್​ಫ್ಲಿಕ್ಸ್​ ಆವೃತ್ತಿಗಾಗಿ ಅವುಗಳನ್ನು ಮರುಹೊಂದಿಸಲು ಯತ್ನಿಸುತ್ತಿದ್ದೇನೆ. ಥಿಯೇಟರ್‌ಗಾಗಿ ಅಳಿಸಲಾದ ಶಾಟ್‌ಗಳನ್ನು ಒಟಿಟಿ ಆವೃತ್ತಿಗೆ ಸೇರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯಾವಾಗ ಬರಲಿದೆ ಓಟಿಟಿಗೆ?: ಇತ್ತೀಚಿನ ಮಾಹಿತಿ ಪ್ರಕಾರ, 2024 ರ ಮೊದಲ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅನಿಮಲ್ ಸ್ಟ್ರೀಮ್ ಮಾಡುವ ನಿರೀಕ್ಷೆಯಿದೆ.
ಕಥೆ ಹೀಗಿದೆ: ರಣ ವಿಜಯ್ (ರಣಬೀರ್ ಸಿಂಗ್) ಸ್ವಸ್ತಿಕ್ ಸ್ಟೀಲ್ಸ್ ಮುಖ್ಯಸ್ಥ ಮತ್ತು ದೇಶದ ಅತ್ಯಂತ ಶ್ರೀಮಂತ ಬಲ್ಬೀರ್ ಸಿಂಗ್ (ಅನಿಲ್ ಕಪೂರ್) ಅವರ ಕಿರಿಯ ಪುತ್ರ. ಯಾರನ್ನಾದರೂ ಧೈರ್ಯದಿಂದ ಎದುರಿಸುವ ಮನೋಭಾವದವನು. ಬಾಲ್ಯದಿಂದಲೂ ರಣ ವಿಜಯ್ ಗೆ ಅಪ್ಪನ ಮೇಲೆ ಹೇಳಲಾಗದ ಪ್ರೀತಿ. ಆದರೆ, ಬಲ್ಬೀರ್ ಸಿಂಗ್ ತಮ್ಮ ವ್ಯವಹಾರದಲ್ಲಿ ನಿರತನಾಗಿ ರಣ್ ವಿಜಯ್ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ರಣ ವಿಜಯ್ ಬಲ್ಬೀರ್ ಸಿಂಗ್ ಅವರ ಆಕ್ರಮಣಕಾರಿ ಮನಸ್ಥಿತಿಯನ್ನು ಇಷ್ಟಪಡಲಿಲ್ಲ. ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ವಿಜಯ್​ ಕಡೆಗೆ ತಾನು ಪ್ರೀತಿಸಿದ ಗೀತಾಂಜಲಿ(ರಶ್ಮಿಕಾ)ಳನ್ನು ಮದುವೆಯಾಗಿ ಅಮೆರಿಕಕ್ಕೆ ಹೋಗುತ್ತಾನೆ. ಕೆಲವು ವರ್ಷಗಳ ನಂತರ ತನ್ನ ತಂದೆ ಕೊಲೆಯಾದ ವಿಷಯ ತಿಳಿದ ನಂತರ ಅವನು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಾನೆ. ಬಂದ ಮೇಲೆ ಏನಾಯಿತು? ವಿಜಯ್ ತನ್ನ ತಂದೆಯನ್ನು ಕೊಲ್ಲಲು ಬಯಸಿದ ಶತ್ರುವನ್ನು ಹೇಗೆ ಗುರುತಿಸಿದ? ಹಾಗಾದರೆ ಆ ಶತ್ರು ಯಾರು? ಆತನಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡಿದ ಎಂಬ ಅಂಶಗಳೊಂದಿಗೆ ‘ಅನಿಮಲ್​’ ಸಿದ್ಧಗೊಂಡಿದೆ.
‘ತಮಿಳುನಾಡಲ್ಲಿ ಹಿಂದಿಯವರು ಶೌಚಗೃಹ ತೊಳೆಯುತ್ತಾರೆ’: ಮಾರನ್ ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆ ಕೇಳಿದ ಬಿಜೆಪಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 12 =
Remember me
