ನವದೆಹಲಿ:ತನ್ನ ಪಾಕಿಸ್ತಾನಿ ಫೇಸ್‌ಬುಕ್ ಸ್ನೇಹಿತನನ್ನು ವಿವಾಹವಾದರು ಎಂದು ಹೇಳಲಾದ 34 ವರ್ಷದ ಇಬ್ಬರು ಮಕ್ಕಳ ತಾಯಿ, ಫೋನ್‌ನಲ್ಲಿ ತನ್ನ ತಂದೆಯೊಂದಿಗೆ ಮಾತನಾಡುವಾಗ ಮದುವೆಯ ಸುದ್ದಿಯ ಬಗ್ಗೆ ಭಾರಿ ಟ್ವಿಸ್ಟ್​ ಕೊಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿ ಜನಿಸಿ ಮತ್ತು ರಾಜಸ್ಥಾನದ ಅಲ್ವಾರ್‌ನಲ್ಲಿ ವಾಸಿಸುತ್ತಿದ್ದ ಅಂಜು ತನ್ನ 29 ವರ್ಷದ ಸ್ನೇಹಿತ ನಸ್ರುಲ್ಲಾ ಅವರ ಆಹ್ವಾನದ ಮೇರೆಗೆ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿದ್ದರು. ಸುಮಾರು 3 ವರ್ಷಗಳ ಹಿಂದೆ ಇಬ್ಬರೂ ಫೇಸ್​ಬುಕ್​​ನಲ್ಲಿ ಪರಿಚಿತರಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​
ನಸ್ರುಲ್ಲಾ- ಅಂಜು ಪ್ರೇಮ್ ಕಹಾನಿ ಹಾಗೂ ಮದುವೆಯ ಸುದ್ದಿ ಎರಡೂ ದೇಶಗಳಲ್ಲಿ ವೈರಲ್​ ಆಗಿದ್ದು ಇದೀಗ ಅಂಜು ತಮ್ಮ ‘ನಿಕಾಹ್’ ಬಗ್ಗೆ ವೀಡಿಯೊ ಕಾಲ್​ ಮಾಡಿ ಹೊಸ ಟ್ವಿಸ್ಟ್​ ಕೊಟ್ಟಿದ್ದಾರೆ. ಅಂಜು ತಂದೆ, ಗಯಾ ಪ್ರಸಾದ್ ಥಾಮಸ್, ಮದುವೆಯ ಸುದ್ದಿಯನ್ನು ಕೇಳಿದ ನಂತರ ಅಸಮ್ಮತಿ ವ್ಯಕ್ತಪಡಿಸಿದ್ದರು. ವಿಡಿಯೋ ಕಾಲ್​ನಲ್ಲಿ ತನ್ನ ಮಗಳೊಂದಿಗೆ ಮಾತನಾಡಿದ ಗಯಾ ಪ್ರಸಾದ್ ಥಾಮಸ್, ತನ್ನ ಕುಟುಂಬಕ್ಕೆ ತಿಳಿಸದೆ ಪಾಕಿಸ್ತಾನಕ್ಕೆ ಏಕೆ ಪ್ರಯಾಣಿಸಿದಳು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ
ಅದಕ್ಕೆ ಅಂಜು, ತಾನು ನಸ್ರುಲ್ಲಾನನ್ನು ಮದುವೆಯಾಗಿಲ್ಲ. ಅವೆಲ್ಲ ಕೇವಲ ಊಹಾಪೋಹದ ಗಾಳಿಸುದ್ದಿಗಳು. ಅವುಗಳನ್ನು ನಂಬದಿರುವಂತೆ ತನ್ನ ತಂದೆಗೆ ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ:ಬುರ್ಖಾ ಧರಿಸಿ ಪ್ರಿಯಕರನ ಜತೆ ಊಟ ಸವಿಯುತ್ತಿರುವ ಅಂಜು: ವಿಡಿಯೋ ವೈರಲ್​
ಅಂಜುವಿನ ತಂದೆ, “ನನ್ನ ಮಗಳು ಮಾನಸಿಕವಾಗಿ ವಿಚಲಿತಳಾಗಿದ್ದು ವಿಲಕ್ಷಣವಾಗಿ ವರ್ತಿಸುತ್ತಾಳೆ” ಎಂದು ಈ ಹಿಂದೆ ಹೇಳಿದ್ದರು. ಅವಳು ಮುಕ್ತವಾಗಿ ವರ್ತಿಸುತ್ತಿದ್ದರೂ, ಅವಳು ಇಂತಹ ಯಾವುದರಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.
ವರದಿಗಳ ಪ್ರಕಾರ, ಜುಲೈ 25 ರಂದು ಇಸ್ಲಾಂಗೆ ಮತಾಂತರಗೊಂಡ ನಂತರ ಅಂಜು ನಸ್ರುಲ್ಲಾಳನ್ನು ವಿವಾಹವಾದರು. ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಅವರಿಬ್ಬರ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದ್ದು ನಿಕಾಹ್ ನಡೆಸಲಾಯಿತು ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಮೊಹರಾರ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನೂ ಓದಿ:ಫೇಸ್​ಬುಕ್​ ಫ್ರೆಂಡ್​ಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಅಸಲಿ ಕತೆ ಬಿಚ್ಚಿಟ್ಟ ತಂದೆ ಥಾಮಸ್​!
ನಿನ್ನೆಯಷ್ಟೇ ಅಂಜುಗೆ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನೀಸ್​ನ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರಿಂದ ನಿವೇಶನ ಮತ್ತು 50,000 ಪಾಕಿಸ್ತಾನಿ ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಂಜುಗೆ ಬಂಪರ್​ ಗಿಫ್ಟ್​ ಕೊಟ್ಟ ಪಾಕ್​ ಉದ್ಯಮಿ: ಉಡುಗೊರೆ ಹಿಂದಿರುವ ಅಸಲಿ ಕಾರಣವೇ ಬೇರೆ!
ಅಂಜು ಪಾಕಿಸ್ತಾನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಮತ್ತು ಅವರಿಗೆ ಪಾಕಿಸ್ತಾನ ಸ್ವಂತ ಮನೆ ಎನ್ನುವ ಭಾವ ಇರುವಂತೆ ನೋಡಿಕೊಳ್ಳುವುದು ತನ್ನ ಉದ್ದೇಶವಾಗಿದೆ ಎಂದು ಅಬ್ಬಾಸಿ ಹೇಳಿದ್ದರು. ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಳೆ ಎಂದು ಅವರು ಹೇಳಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
