ನವದೆಹಲಿ:ಪಾಕಿಸ್ತಾನದ ಫೇಸ್​ಬುಕ್​ ಫ್ರೆಂಡ್​ನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿರುವ ಭಾರತದ ಅಂಜು ವಿರುದ್ಧ ಆಕೆಯ ಪತಿ ಅರವಿಂದ್​ ದೂರು ದಾಖಲಿಸಿದ್ದಾರೆ. ಡಿವೋರ್ಸ್​ ನೀಡದೇ ಬೇರೊಬ್ಬ ವ್ಯಕ್ತಿಯ ಜತೆಗೆ ಮದುವೆ ಆಗಿರುವುದಲ್ಲದೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅರವಿಂದ್​ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದ್ದು, ಅಂಜು ಮತ್ತು ಆಕೆಯ ಲವರ್​ ನಸ್ರುಲ್ಲ (29) ಹೆಸರನ್ನು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಕುರಿತು ಅಂಜು ಮೇಲೆ ನಸ್ರುಲ್ಲ ಪರಿಣಾಮ ಬೀರಿದ್ದಾರೆ ಎಂದು ಅರವಿಂದ್​ ಆರೋಪಿಸಿದ್ದಾರೆ. ಭಿವಾಡಿಯ (ಅಲ್ವಾರ್) ಫೂಲ್‌ಬಾಗ್ ಪೊಲೀಸರು ಅರವಿಂದ್ ಹೇಳಿಕೆಯ ಆಧಾರದ ಮೇಲೆ ವರದಿಯನ್ನು ಬರೆದಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ದೂರು ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನಾ: ಕೋವಾ ಫಿಯೋನಿಕ್ಸ್ ಡೋಲನ್ ಪರಿಚಯಿಸಿದ ಗೋವಾ ಬ್ಯೂಟಿ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಈಗಾಗಲೇ ಮದುವೆಯಾಗಿದ್ದರೂ ಎರಡನೇ ಮದುವೆ ಆಗಿರುವುದು), 500 (ಮಾನನಷ್ಟ), 506 (ಕೊಲೆ ಬೆದರಿಕೆ) ಹಾಗೂ ಐಟಿ ಕಾಯ್ದೆ 43/66 (ಗೌಪ್ಯ ದತ್ತಾಂಶ ವಹಿವಾಟು) ಅಡಿಯಲ್ಲಿ ಅಂಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ಅಂಜು ಹಾಗೂ ನಸ್ರುಲ್ಲ ವಿರುದ್ಧ ಯಾವುದೇ ದೂರು ದಾಖಲಾಗಿರಲಿಲ್ಲ. ಇದೀಗ ಅಂಜು ಪತಿ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ತನಿಖೆಯನ್ನು ಆರಂಭಿಸಲಿದ್ದಾರೆ.
ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿದ ಬಳಿಕ ಪ್ರಿಯಕರನನ್ನು ಅರಸಿ ಅಂಜು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿ, ನಸ್ರುಲ್ಲನನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾಳೆ. ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ.
ಇದನ್ನೂ ಓದಿ:ರಾಜ್ಯದಲ್ಲಿ ಟೇಕಾಫ್ ಆಗದ ವಿಶೇಷ ಅಭಿವೃದ್ಧಿ ಯೋಜನೆ: ಮೂರು ತಿಂಗಳ ಆರ್ಥಿಕ ಪ್ರಗತಿಯಲ್ಲಿ ಸಾಧನೆ ಶೂನ್ಯ
ಅಂಜುಗೆ ಅರವಿಂದ್​ ಜತೆ ಮೊದಲೇ ಮದುವೆಯಾಗಿದ್ದು, ದಂಪತಿಗೆ 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಜೈಪುರಕ್ಕೆ ಹೋಗಿ ಬರುವುದಾಗಿ ಪತಿ ಬಳಿ ಹೇಳಿ ಹೊರಟಿದ್ದ ಅಂಜು, ಬಳಿಕ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿ, ಇದೀಗ ಮದುವೆ ಸಹ ಆಗಿದ್ದಾಳೆ. ಇದೀಗ ಇಬ್ಬರು ಮಕ್ಕಳು ತಾಯಿಯಿಲ್ಲದೇ ಅನಾಥರಾಗಿದ್ದಾರೆ. ಡಿವೋರ್ಸ್​ ನೀಡದೆ ಮದುವೆ ಆಗಿರುವುದರಿಂದ ಅಂಜು ವಿರುದ್ಧ ಪತಿ ಅರವಿಂದ್​ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ

ಅಂಜುಗೆ ಬಂಪರ್​ ಗಿಫ್ಟ್​ ಕೊಟ್ಟ ಪಾಕ್​ ಉದ್ಯಮಿ: ಉಡುಗೊರೆ ಹಿಂದಿರುವ ಅಸಲಿ ಕಾರಣವೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
