ನವದೆಹಲಿ:ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಗಡಿಯಾಚೆಗಿನ ಪ್ರೇಮ ಪ್ರಕರಣಗಳದ್ದೇ ಭಾರೀ ಸುದ್ದಿಯಾಗಿದೆ. ಸೀಮಾ ಹೈದರ್​ ಎಂಬಾಕೆ ಪಾಕಿಸ್ತಾನದಿಂದ ಪಬ್​ಜಿ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂದು ಮದುವೆಯಾಗಿದ್ದರೆ, ರಾಜಸ್ಥಾನ ಮೂಲದ ಅಂಜು (ಈಗ ಫಾತಿಮಾ) ಎಂಬಾಕೆ ಫೇಸ್​ಬುಕ್​ ಫ್ರೆಂಡ್​ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿ ಆತನನ್ನು ಮದುವೆ ಆಗಿದ್ದಾಳೆ.
ಈ ಪ್ರಕರಣಗಳನ್ನು ಭಾರೀ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲೂ ಇದು ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆ ವರದಿಗಾರ್ತಿಯೊಬ್ಬಳು ಅಂಜುವಿನ ಪತಿ ಅರವಿಂದ್​ನನ್ನು ಸಂದರ್ಶನ ಮಾಡಿದ್ದು, ಅದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ವರದಿಗಾರ್ತಿ ಮಾಡಿರುವ ಎಡವಟ್ಟಿಗೆ ಅರವಿಂದ್​ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಕಂಪನಿ ನೋಂದಣಿ ಮಾಡಿಸಿಕೊಳ್ಳಲಾಗದೆ ಅಮೆರಿಕಕ್ಕೆ ಹಿಂದಿರುಗುವೆ ಎಂದ ಉದ್ಯಮಿ!
Face Expression of Anju Ka Pati 🤣🤣🤣🤣🤣🤣🤣https://t.co/18soojUN5d
— Daman Gambhir (@themangambhir)July 28, 2023

ವಿಡಿಯೋದಲ್ಲಿ ವರದಿಗಾರ್ತಿ ಅಂಜು ಹೆಸರು ಹೇಳಲು ಹೋಗಿ ಸೀಮಾ ಎಂದು ಹೇಳುತ್ತಾಳೆ. ಸದ್ಯ ದೇಶದಲ್ಲಿ ಈ ಎರಡು ಹೆಸರು ತುಂಬಾ ಚಾಲ್ತಿಯಲ್ಲಿರುವುದರಿಂದ ವರದಿಗಾರ್ತಿಯು ಗೊಂದಲಕ್ಕೀಡಾಗಿ ಅಂಜು ಬದಲು ಸೀಮಾ ಹೆಸರನ್ನು ಕೇಳಿಬಿಟ್ಟಿದ್ದಾಳೆ. ಅದು ಕೂಡ ಲೈವ್​ನಲ್ಲೇ. ಇದೀಗ ಆ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಹಾಗಾದ್ರೆ ವರದಿಗಾರ್ತಿ ಕೇಳಿದ್ದೇನು ಅಂತಾ ನೋಡುವುದಾದರೆ, ನೀವು ಇತ್ತೀಚೆಗೆ ಸೀಮಾಳ ಜತೆ ಮಾತನಾಡಿದ್ರಾ? ಎಂದು ಪ್ರಶ್ನಿಸಿದ್ದಾಳೆ. ಆದರೆ, ಸೀಮಾಗೂ ಅರವಿಂದ್​ಗೂ ಸಂಬಂಧವೇ ಇಲ್ಲ. ಇದರಿಂದ ಗೊಂದಲಕ್ಕೆ ಒಳಗಾಗುವ ಅರವಿಂದ್​, ವರದಿಗಾರ್ತಿಯ ಕಡೆ ನೋಡಿ ವಿಚಿತ್ರ ಪ್ರತಿಕ್ರಿಯೆ ನೀಡುತ್ತಾನೆ. ಆ ಬಳಿಕ ತನ್ನ ಪ್ರಮಾದವನ್ನು ಅರಿತ ವರದಿಗಾರ್ತಿ ಮತ್ತೆ ಅಂಜು ಜತೆ ಮಾತನಾಡಿದ್ರಾ ಎಂದು ಕೇಳುತ್ತಾಳೆ. ಬಳಿಕ ಅರವಿಂದ್​ ಇಲ್ಲ ಎಂದು ಉತ್ತರ ನೀಡುತ್ತಾನೆ.
ಇದನ್ನೂ ಓದಿ:498A ಕಾನೂನನ್ನು ಪತಿ ವಿರುದ್ಧದ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ: ಜಾರ್ಖಂಡ್​ ಹೈಕೋರ್ಟ್​
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ವಿಡಿಯೋ ನೋಡಿ ನಗೆಗಡಲಲ್ಲಿ ತೇಲಿರುವ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳ ಮೂಲಕ ವರದಿಗಾರ್ತಿಯ ಕಾಲೆಳೆಯುತ್ತಿದ್ದಾರೆ.(ಏಜೆನ್ಸೀಸ್​)
Same Reactionhttps://t.co/h25BwbSPrVpic.twitter.com/e8Rwu3tmOV
— 🇮🇳Delightful🇮🇳 (@sdhruv86)July 28, 2023

😂😂😂😂😂https://t.co/29VDRpaGat
— Jokerrr (@jokerrr2_0)July 28, 2023

ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ವೆಜ್ ಪ್ಯಾನ್‌ಕೇಕ್‌

ಜ್ಯೋತಿಷಿಯಾಗಿ ಬದಲಾದ ನಿವೃತ್ತ ಯೋಧನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 8 ತಿಂಗಳ ಬಳಿಕ ಬಂಧನ

ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
