ಉತ್ತರಾಖಂಡ:ಬಿಜೆಪಿಯ ಮಾಜಿ ಸಚಿವನ ಪುತ್ರನ ರೆಸಾರ್ಟ್​ನಿಂದ ಕಾಣೆಯಾಗಿದ್ದ ಯುವತಿ ಕೊಲೆಗೀಡಾಗಿದ್ದು, ಆಕೆಯ ಶವ ಇಂದು ಪತ್ತೆಯಾಗಿದೆ. ಅಲ್ಲದೆ, ಆಕೆ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್​’ ಕೊಡಲು ಒಪ್ಪದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಸಂಗತಿಯೂ ಹೊರಬಿದ್ದಿದೆ.
ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಳ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್​ ಹರಿದ್ವಾರದ ರಿಷಿಕೇಶ್​ನಲ್ಲಿದ್ದು, ಅಲ್ಲಿ 19ರ ವಯಸ್ಸಿನ ಯುವತಿ ಅಂಕಿತಾ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸದಲ್ಲಿದ್ದಳು. ಆಕೆ ವಾರದ ಹಿಂದೆ ನಾಪತ್ತೆಯಾಗಿದ್ದು, ಬಳಿಕ ಆಕೆಯ ಕೊಲೆ ಆಗಿದೆ, ಆ ಕೊಲೆಗೂ ಪುಳ್ಕಿತ್ ಆರ್ಯಗೂ ಸಂಬಂಧ ಇದೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ರೆಸಾರ್ಟ್​ ಮಾಲೀಕ ಪುಳ್ಕಿತ್ ಆರ್ಯ, ಮ್ಯಾನೇಜರ್​ ಸೌರಭ್ ಭಾಸ್ಕರ್, ಅಸಿಸ್ಟೆಂಟ್ ಮ್ಯಾನೇಜರ್​ ಅಂಕಿತ್ ಗುಪ್ತಾ ಅವರನ್ನು ನಿನ್ನೆ ಬಂಧಿಸಿದ್ದರು.
ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಅವರು ಆಕೆಯನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಇಂದು ಛೀಲಾ ನಾಲೆಯಲ್ಲಿ ಅಂಕಿತಾ ಭಂಡಾರಿ ಶವ ಸಿಕ್ಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ರೆಸಾರ್ಟಲ್ಲಿ ಯುವತಿಯ ಕೊಲೆ, ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್; ವಾರದ ಹಿಂದೆ ನಾಪತ್ತೆ ಆಗಿದ್ದ ಉದ್ಯೋಗಿ..
ರೆಸಾರ್ಟ್​ಗೆ ಬರುವ ಗ್ರಾಹಕರಿಗೆ ಸ್ಪೆಷಲ್ ಸರ್ವಿಸ್ ಕೊಡಬೇಕು ಎಂಬುದಾಗಿ ಅಂಕಿತಾ ಭಂಡಾರಿಗೆ ಮಾಲೀಕ ಪುಳ್ಕಿತ್ ಒತ್ತಡ ಹಾಕುತ್ತಿದ್ದ. ಅಂಕಿತಾ ತನ್ನ ಸ್ನೇಹಿತೆಯರ ಜತೆ ನಡೆಸಿದ್ದ ಚಾಟ್​​ನಿಂದಾಗಿ ಈ ಮಾಹಿತಿ ತಿಳಿದುಬಂದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಮತ್ತೊಂಡೆ ಆ ಸ್ಪೆಷಲ್ ಸರ್ವಿಸ್ ಏನು ಎಂಬುದು ಖಚಿತವಾಗಿಲ್ಲ. ಇದಕ್ಕೂ ಮೊದಲು ಅಂಕಿತಾ ಸ್ನೇಹಿತನೊಬ್ಬ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಪ್ರಕಾರ, ರೆಸಾರ್ಟ್​ ಗ್ರಾಹಕರ ಜತೆ ಲೈಂಗಿಕವಾಗಿ ಸಹಕರಿಸುವಂತೆ ಆಕೆ ಮೇಲೆ ಮಾಲೀಕರ ಒತ್ತಡವಿತ್ತು ಎಂಬುದು ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಾಮಿ ಅವರು ಈ ಪ್ರಕರಣದ ತನಿಖೆ ಸಂಬಂಧ ವಿಶೇಷ ತನಿಖಾ ದಳವನ್ನು ರಚಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೂವರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..
ಸಮಯದೊಂದಿಗೇ ಸ್ಪರ್ಧೆಗೆ ಬಿದ್ದಿದ್ದರಾ ಎಸ್​.ಪಿ. ಬಾಲಸುಬ್ರಹ್ಮಣ್ಯಂ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
