ಮುಂಬೈ:ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ ಅಂಕಿತ ಕೊನ್ವರ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೆಯೊಂದನ್ನು ಕೊಟ್ಟು ಸುದ್ದಿಯಾಗಿದ್ದಾರೆ. ಮೀರಾಬಾಯಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಅವರು ಮಾತನಾಡಿರುವ ಬಗೆ ಅನೇಕರ ಗಮನ ಸೆಳೆದಿದೆ.
ಈಶಾನ್ಯ ಭಾರತದ ಮಣಿಪುರದ ಯುವತಿ ಮೀರಾಬಾಯಿ ಚಾನು ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಕೆಯನ್ನು ದೇಶದ ಜನತೆ ಭಾರತದ ಹೆಮ್ಮೆ ಎಂದು ಕರೆಯಲಾರಂಭಿಸಿದೆ. ಈ ಬಗ್ಗೆ ಅಂಕಿತಾ ಕೂಡ ಮಾತನಾಡಿದ್ದಾರೆ. “ನೀವು ಈಶಾನ್ಯ ಭಾರತದವರಾಗಿದ್ದರೆ, ದೇಶಕ್ಕಾಗಿ ಪದಕ ಗೆದ್ದಾಗ ಮಾತ್ರ ನೀವು ಭಾರತೀಯರಾಗಬಹುದು. ಇಲ್ಲದಿದ್ದರೆ ನಮ್ಮನ್ನು ‘ಚಿಂಕಿ’, ‘ಚೈನೀಸ್’, ಅಥವಾ ಹೊಸ ಸೇರ್ಪಡೆ ‘ಕರೊನಾ’ ಎಂದು ಕರೆಯಲಾಗುತ್ತದೆ” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಭಾರತವು ಕೇವಲ ಜಾತಿಯತೆಯಿಂದ ಮಾತ್ರವಲ್ಲ ವರ್ಣಭೇದ ನೀತಿಯಿಂದಲೂ ಕೂಡಿದೆ. ನನ್ನ ಸ್ವಂತ ಅನುಭವದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಸ್ಸಾಂ ಮೂಲದ ಆಕೆ ವರ್ಣಬೇಧ ನೀತಿಗೆ ತುತ್ತಾಗಿದ್ದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ.

A post shared by Ankita Konwar (@ankita_earthy)

ಅಂಕಿತಾ ಅವರ ಈ ಹೇಳಿಕೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಬೆಂಬಲವನ್ನೂ ನೀಡುತ್ತಿದ್ದಾರೆ. (ಏಜೆನ್ಸೀಸ್)
ಮೀರಾಬಾಯಿ ಸ್ಫೂರ್ತಿ: ವೇಟ್​ ಲಿಫ್ಟ್ ಮಾಡಿದ ಪುಟಾಣಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಾನು

ಮಗಳ ಲವರ್​ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ

ಅಂತೂ ಔಟ್ ಆದ್ರು ಆ ಕಂಟೆಸ್ಟೆಂಟ್​! ಬಿಗ್​ಬಾಸ್ ಮನೆಯಿಂದ ಮಧ್ಯ ರಾತ್ರಿಯೇ ಹೊರಬಂದ ಸ್ಪರ್ಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 13 =
Remember me
