ಮುಂಬೈ:ನಟ ಸುಶಾಂತ್​ ಸಿಂಗ್ ರಜಪೂತ್ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಈ ಮಧ್ಯೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಖಿನ್ನತೆಗೆ ಸಂಬಂಧಪಟ್ಟ ಮಾತ್ರೆಗಳು ಅವರ ರೂಂ ನಲ್ಲಿ ಸಿಕ್ಕಿವೆ ಎಂದು ಹೇಳಲಾಗಿತ್ತು.
ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಸುಶಾಂತ್ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಅವರೊಂದಿಗೆ ಸುಶಾಂತ್​ಗೆ ಸಂಬಂಧವಿತ್ತಾ? ಅವರ ಸಾವು ಇವರಿಗೆ ಸಾಯುವಷ್ಟು ನೋವುಂಟು ಮಾಡಿತ್ತಾ ಎಂಬಂತಹ ಸುದ್ದಿಗಳೂ ಹರಿದಾಡುತ್ತಿವೆ.
ಈಗ ಸುಶಾಂತ್ ಸಾವಿಗೆ ಇನ್ನೊಂದು ವಿಚಾರ ಥಳುಕು ಹಾಕಿಕೊಂಡಿದೆ. ನಟ ಸುಶಾಂತ್​ ಅವರು ಅಂಕಿತಾ ಲೋಕಂಡೆ ಎಂಬುವರೊಂದಿಗೆ ಸುಮಾರು 6 ವರ್ಷ ಡೇಟಿಂಗ್​ ಮಾಡಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ 2016ರಲ್ಲಿಯೇ ಅಂಕಿತಾ ಮತ್ತು ಸುಶಾಂತ್ ಬೇರೆಯಾಗಿದ್ದರು.
ಜೂ.11ರಂದು ಅಂದರೆ ಎರಡು ದಿನಗಳ ಹಿಂದೆ ಅಂಕಿತಾ ಅವರು ವಿಕ್ಕಿ ಜೈನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ವರದಿಯಾಗಿತ್ತು. ಈ ಜೋಡಿ ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ, ಅಂಕಿತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೆಲವು ಫೋಟೋ, ಬರಹಗಳಿಂದ ಹೀಗೊಂದು ಸುದ್ದಿ ಹರಡಿತ್ತು. ವಿಕ್ಕಿ ಮತ್ತು ಅಂಕಿತಾ ಲಾಕ್​ಡೌನ್​ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.ಇದನ್ನೂ ಓದಿ:‘ಆತ ನನ್ನನ್ನು ತುಂಬ ಪ್ರೀತಿಸುತ್ತಿದ್ದ…ನಾನು ಅವನ ಮಿಸ್​ ಮಾಡಿಕೊಳ್ಳುತ್ತೇನೆ…’: ಶಾರುಖ್​ ಖಾನ್​ ಕಣ್ಣೀರು
2016ರಲ್ಲಿ ಅಂಕಿತಾ ಮತ್ತು ಸುಶಾಂತ್​ ಬ್ರೇಕ್​ಅಪ್​ ಮಾಡಿಕೊಂಡಾಗ ಅಂಕಿತಾ ಲೋಕಂಡೆ ಟ್ವೀಟ್ ಮಾಡಿದ್ದರು. ಯಾವತ್ತೂ ನೀನೂ ಏಕಾಂಗಿ ಎಂದು ಬೇಸರಪಟ್ಟುಕೊಳ್ಳಬೇಡ. ನಾನು ಯಾವಾಗಲೂ ನಿನ್ನ ಹೃದಯದಲ್ಲಿ, ನಿನ್ನ ಜೀವನದಲ್ಲಿ ಇದ್ದೇ ಇರುತ್ತೇನೆ ಎಂದು ಹೇಳಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆಂದು ಈ ಜೋಡಿ ದೃಢಪಡಿಸಿತ್ತು.ಇದನ್ನೂ ಓದಿ:ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಇದೀಗ ಅಂಕಿತಾ ಲೋಕಂಡೆ ಅವರು ಸುಶಾಂತ್​ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದು ತುಂಬ ಶಾಕಿಂಗ್​ ವಿಚಾರ ಎಂದು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಸುಶಾಂತ್​ ಸಿಂಗ್​ ಸಾವಿನ ಸುದ್ದಿಯನ್ನು ಕೇಳುತ್ತಿದ್ದಂತೆ, ಏನೂ ಮಾಡಲು ತೋಚದೆ, ಮುಂದೇನೂ ಮಾತು ಬಾರದೆ ಫೋನ್​ ಕೆಳಗಿಟ್ಟು, ಒಂದು ಕ್ಷಣ ಕಂಗಾಲಾಗಿ ಕುಳಿತಿದ್ದಾಗಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)
ಮಾಜಿ ಮ್ಯಾನೇಜರ್​ ದಿಶಾ ಆತ್ಮಹತ್ಯೆ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದ ಸುಶಾಂತ್​​; ಇಂದು ತಾವೂ ಅದೇ ಹಾದಿ ತುಳಿದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
