ಮುಂಬೈ:ಜನಪ್ರಿಯ ಕಿರುತೆರೆ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶ್ರೀಕಾಂತ್ ಲೋಖಂಡೆ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಸದ್ಯ ಅಂಕಿತಾ ತಂದೆ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಓಶಿವಾರದಲ್ಲಿ ನೆರವೇರಿಸಲಾಗುವುದು.ಅಂಕಿತಾ ತನ್ನ ತಂದೆ ಜೊತೆಗೆ ತುಂಬಾ ಆತ್ಮೀಯವಾಗಿದ್ದರು. ಆಗಾಗ ಅವರ ಜೊತೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಅಂಕಿತಾ ಅವರ ತಂದೆ ಬ್ಯಾಂಕ್​​​ನಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.
ಅಂಕಿತಾ 2009 ರಲ್ಲಿ ಏಕ್ತಾ ಕಪೂರ್ ಅವರ ಧಾರಾವಾಹಿ ಪವಿತ್ರ ರಿಷ್ತಾ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಧಾರಾವಾಹಿಯಲ್ಲಿ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಕಾಣಿಸಿಕೊಂಡರು. ಅರ್ಚನಾ ಪಾತ್ರದಲ್ಲಿ ಮೂಲಕ ಮನೆಮಾತಾಗಿದ್ದ ಅಂಕಿತಾ ಕಾಮಿಡಿ ಸರ್ಕಸ್, ಏಕ್ ಥಿ ನಾಯಕ ಮತ್ತು ಝಲಕ್ ದಿಖ್ಲಾ ಜಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿದರು. ಅಂಕಿತಾ ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಅವರು ಕಂಗನಾ ರಣಾವತ್ ಜೊತೆ ಮಣಿಕರ್ಣಿಕಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅವರು ಬಾಘಿ 3 ನಲ್ಲಿಯೂ ಕಾಣಿಸಿಕೊಂಡರು.
ಸದ್ಯ ಅಂಕಿತಾ ಸಾಕಷ್ಟು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದು, ವಿಕ್ಕಿ ಜೈನ್ ಅವರನ್ನು ಮದುವೆಯಾಗಿ ಸುಖೀ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಅಂಕಿತಾ ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಪ್​​ಡೇಟ್ಸ್ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

A post shared by Ankita Lokhande Jain (@lokhandeankita)
ಅಳುತ್ತಿದ್ದ ಮಗನ ಮುಂದೆಯೇ ತಂದೆಗೆ ನಿರ್ದಯವಾಗಿ ಥಳಿಸಿದ ಗೂಂಡಾಗಳು; ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತಿರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + three =
Remember me
