ನವದೆಹಲಿ:ಆಪ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರ ಅಣ್ಣಾ ಹಜಾರೆ ಅವರನ್ನು ಆಮಂತ್ರಿಸಿ ಪತ್ರ ಬರೆದ ಬಿಜೆಪಿ ಈಗ ಪೇಚಿಗೆ ಸಿಲುಕಿದೆ.
ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್​ ಆದ್ಮಿ ಪಾರ್ಟಿ ಸರ್ಕಾರ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕಾರಣಕ್ಕೆ ಆಪ್​ ವಿರುದ್ಧ ಬೃಹತ್​ ಹೋರಾಟಕ್ಕೆ ಮುಂದಾಗಿದೆ. ಈ ಹೋರಾಟದಲ್ಲಿ ಭಾಗಿಯಾಗುವಂತೆ ಅಣ್ಣಾ ಹಜಾರೆ ಅವರಿಗೆ ಬಿಜೆಪಿ ದೆಹಲಿ ಅಧ್ಯಕ್ಷ ಆದೇಶ್​ ಗುಪ್ತಾ ಪತ್ರ ಬರೆದಿದ್ದರು.
ಇದನ್ನೂ ಓದಿ;ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲ ಸಂಸದರಿಗೂ ಕೋವಿಡ್ ಟೆಸ್ಟ್​ ಕಡ್ಡಾಯ; ಸೆ.14ರಿಂದ ಅ.1ರ ವರೆಗೆ ಅಧಿವೇಶನ
ಸ್ವಚ್ಛ ಆಡಳಿತದ ಹೆಸರಲ್ಲಿ ಅಧಿಕಾರಕ್ಕೆ ಬಂದ ಅರವಿಮದ ಕೇಜ್ರಿವಾಲ್​ ನೇತೃತ್ವದ ಆಪ್​ ಸರ್ಕಾರ ರಾಜಕೀಯ ಪವಿತ್ರತೆಯ ಆಶಯಗಳನ್ನೇ ಧ್ವಂಸಗೊಳಿಸಿದೆ. ಆಪ್​ ಸರ್ಕಾರದಿಂದ ಪ್ರಾಯೋಜಿತ ಕೋಮುಗಲಭೆಗಳಲ್ಲಿ ಜನರು ನರಳುವಂತಾಗಿದೆ ಎಂದು ಆದೇಶ್​ ಟೀಕಿಸಿದ್ದರು.
ಈ ಪತ್ರಕ್ಕೆ ಉತ್ತರಿಸಿರುವ ಅಣ್ಣಾ ಹಜಾರೆ, ಜಗತ್ತಿನ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಸಾಮೂಹಿಕ ಹೋರಾಟವೊಂದನ್ನು ನಡೆಸಲು 83 ವರ್ಷದ ವ್ಯಕ್ತಿಯನ್ನು ಆಹ್ವಾನಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಆರು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಸಿಬಿಐ, ಇ.ಡಿಯಂಥ ಸಂಸ್ಥೆಗಳು ಅದರ ಅಧೀನದಲ್ಲಿವೆ. ಒಂದು ದೆಹಲಿಯ ಆಪ್​ ಸರ್ಕಾರ ಭ್ರಷ್ಟಾಚಾರ ನಡೆಸಿದ್ದರೆ, ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ;ಕೋವಿಡ್​ಗೆ ಬಲಿಯಾದ ಕಾಂಗ್ರೆಸ್​ ಸಂಸದ
ಭ್ರಷ್ಟಾಚಾರದ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಹೀಗಿರುವಾಗ, ಅಕ್ರಮ ಎಸಗಿದ ದೆಹಲಿ ಸರ್ಕಾರದ ವಿರುದ್ಧ ಕ್ರಮವಿಲ್ಲವೇ? ಅಥವಾ ಮೋದಿ ಹೇಳುತ್ತಿರುವುದೇ ಸುಳ್ಳಾ ಎಂದು ಕೇಳುವ ಮೂಲಕ ಪತ್ರ ಬರೆದ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
ದೆಹಲಿಯಲ್ಲಿ 2011ರಲ್ಲಿ ಅಣ್ಣಾ ಹಜಾರೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕವೇ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ರಾಜಕೀಯ ಜೀವನ ಆರಂಭಿಸಿದ್ದರು.
ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
