ಚೆನ್ನೈ:ಬುಧವಾರ (ಜ.04) ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ಕೆಲವು ಸಂಘಟನೆಗಳ ವರದಿಗಾರರು ಅಜೆಂಡಾ ಕೇಂದ್ರಿತ ಎಂದು ಜರಿದಿದ್ದಲ್ಲದೆ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಾಹೀರಾತು ಬಜೆಟ್ ಅನ್ನು ಸಾಧನವಾಗಿ ಬಳಸಿಕೊಂಡು ಸುದ್ದಿ ಮಾಧ್ಯಮಗಳಿಗೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿದರು.
ಬಹಳ ಶಾಂತವಾಗಿಯೇ ಸುದ್ದಿಗೋಷ್ಠಿ ಆರಂಭಿಸಿದ ಅಣ್ಣಾಮಲೈ, ತಮ್ಮ ಮೇಲೆ ಗಂಭೀರ ಆರೋಪ ಮಾಡಿ ಪಕ್ಷ ತೊರೆದ ನಟಿ ಕಂ ರಾಜಕಾರಣಿ ಗಾಯತ್ರಿ ರಘುರಾಮ್​ ಬಗ್ಗೆ ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡರು. ಗಾಯತ್ರಿ ರಘುರಾಮ್​ ಅವರ ಆರೋಪ ಕೇವಲ ವ್ಯಕ್ತಿ ಕೇಂದ್ರಿತವಾಗಿದೆ. ಒಬ್ಬರೇ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಕರ್ತವ್ಯ ನಿರತ ಮಹಿಳಾ ಪೊಲೀಸ್​ ಪೇದೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರ ಬಗ್ಗೆ ನೀವು ಸಿಎಂ ಅಥವಾ ಅವರ ಕಚೇರಿಯನ್ನು ಪ್ರಶ್ನೆ ಮಾಡಿದ್ದೀರಾ? ನಿಮ್ಮ ಬಳಿ ಒಂದು ಅಜೆಂಡಾ ಇದೆ. ಈ ಅಜೆಂಡಾ ಕೇಂದ್ರಿತ ಪತ್ರಿಕೋದ್ಯಮ ಇಂದಿನ ಬಹು ದೊಡ್ಡ ಸಮಸ್ಯೆ ಎಂದು ಅಣ್ಣಾಮಲೈ ಟೀಕಿಸಿದರು.
ರಾಜ್ಯದ ಡಿಐಪಿಆರ್ ಕೆಲವು ಮಾಧ್ಯಮಗಳಿಗೆ ತಮ್ಮ ಪ್ರಸಾರಕ್ಕೆ ವಿರುದ್ಧವಾಗಿ ದೊಡ್ಡ ಮೊತ್ತವನ್ನು ಪಾವತಿಸುತ್ತಿದೆ ಎಂದು ಅಣ್ಣಾಮಲೈ ಗಂಭೀರ ಆರೋಪ ಮಾಡಿದರು. ಇಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಹಾಕಿರುವವರು ಅತ್ಯಧಿಕ ಮೊತ್ತವನ್ನು ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು.
ಗಾಯತ್ರಿ ಆರೋಪ ಏನು?ಗಾಯತ್ರಿ ಅವರು ರಾಜ್ಯದ ಬಿಜೆಪಿ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆಯಾಗಿದ್ದರು. ಸರಣಿ ಟ್ವೀಟ್​ ಮಾಡಿರುವ ಗಾಯತ್ರಿ ತಮಿಳುನಾಡು ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಗೌರವ ಸಿಗದೇ ಇರುವುದಕ್ಕೆ ನಾನು ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಂಡಿದ್ದೇನೆ. ಅಣ್ಣಾಮಲೈ ನೇತೃತ್ವದಲ್ಲಿ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಯಾರೂ ಕೂಡ ನಿಜವಾದ ಕಾರ್ಯಕರ್ತರ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಿಜವಾದ ಕಾರ್ಯಕರ್ತರನ್ನು ಪಕ್ಷದಿಂದ ಓಡಿಸುವುದೇ ಅಣ್ಣಾಮಲೈ ಅವರ ಏಕೈಕ ಗುರಿಯಾಗಿದೆ. ಬಿಜೆಪಿಗೆ ಶುಭ ಹಾರೈಸುತ್ತೇನೆ ಎಂದು ಗಾಯತ್ರಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮೋದೀಜಿ ನೀವು ತುಂಬಾ ವಿಶೇಷ,. ನೀವು ರಾಷ್ಟ್ರಪಿತರು, ನೀವು ಯಾವಾಗಲೂ ನನ್ನ ವಿಶ್ವಗುರು ಮತ್ತು ಮಹಾನ್ ನಾಯಕ ಎಂದು ಪ್ರಶಂಸಿಸಿರುವ ಗಾಯತ್ರಿ, ಅಮಿತ್ ಶಾ ಜೀ ನೀವು ಎಂದೆಂದಿಗೂ ನನ್ನ ಚಾಣಕ್ಯ ಗುರುಗಳಾಗಿ ಉಳಿಯುತ್ತೀರಿ ಎಂದಿದ್ದಾರೆ.
ಇಂದು ನಾನು ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಮತ್ತು ಅದರ ಕ್ರೆಡಿಟ್ ಅಣ್ಣಾಮಲೈ ಅವರಿಗೆ ಸಲ್ಲುತ್ತದೆ. ಮುಂದೆ ನಾನು ಅಣ್ಣಾಮಲೈ ಬಗ್ಗೆ ಕಡಿಮೆ ಕಾಳಜಿ ವಹಿಸಲು ಬಯಸುತ್ತೇನೆ. ಅವರೊಬ್ಬ ಸುಳ್ಳುಗಾರ ಮತ್ತು ಅಧರ್ಮದ ನಾಯಕ ಎಂದು ಗಾಯತ್ರಿ ಜರಿದಿದ್ದಾರೆ.
ನನ್ನ ಜೊತೆ 8 ವರ್ಷಗಳ ಕಾಲ ಕೆಲಸ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು. ಕಾರ್ಯಕರ್ತರೊಂದಿಗೆ ನಾನು ಅಪಾರ ಪ್ರೀತಿ ಮತ್ತು ಗೌರವವನ್ನು ಹಂಚಿಕೊಂಡಿದ್ದೇನೆ. ನಿಜಕ್ಕೂ ಇದೊಂದು ದೊಡ್ಡ ಪ್ರಯಾಣವಾಗಿತ್ತು. ಇತರರನ್ನು ನೋಯಿಸುವುದು ಹಿಂದು ಧರ್ಮವಲ್ಲ. ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ನನಗೆ ಸಾಧ್ಯವಿಲ್ಲ. ಅವರಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಹಿಳೆಯರೇ ಸುರಕ್ಷಿತವಾಗಿರಿ, ಯಾರಾದರೂ ನಿಮ್ಮನ್ನು ರಕ್ಷಿಸುತ್ತಾರೆ ಎಂದು ನಂಬಬೇಡಿ. ಏಕೆಂದರೆ, ಯಾರೂ ಬರುವುದಿಲ್ಲ. ನಿಮ್ಮನ್ನು ಮಾತ್ರ ನೀವು ನಂಬಿರಿ. ನಿಮ್ಮನ್ನು ಗೌರವಿಸದ ಸ್ಥಳದಲ್ಲಿ ಎಂದಿಗೂ ಉಳಿಯಬೇಡಿ ಎಂದು ಗಾಯತ್ರಿ ಕರೆ ನೀಡಿದ್ದಾರೆ.
ಅಣ್ಣಾಮಲೈ ಅವರನ್ನು ಮತ್ತಷ್ಟು ತನಿಖೆ ಮಾಡಲು ಎಲ್ಲ ವಿಡಿಯೋಗಳು ಮತ್ತು ಆಡಿಯೋಗಳನ್ನು ಒಪ್ಪಿಸಲು ನಾನು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಸಿದ್ಧನಿದ್ದೇನೆ. ಅಣ್ಣಾಮಲೈ ಓರ್ವ ಅನಾರೋಗ್ಯದ ವ್ಯಕ್ತಿ ಮತ್ತು ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಎಂದು ಗಾಯತ್ರಿ ದೂರಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ಸಭೆಯಲ್ಲಿ ಗಲಾಟೆ ಪ್ರಕರಣ: ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷೆ ಸೇರಿದಂತೆ ಇಬ್ಬರ ಬಂಧನ

ಲೈಂಗಿಕ ಸುಖದ ನಷ್ಟ ಅನುಭವಿಸಿದ್ದೇನೆ! 10 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ

ಪದವಿ ವಿದ್ಯಾರ್ಥಿಗಳಿಗೆ ಇನ್ನೂ ಸಿಗದ ಟ್ಯಾಬ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
