ಚೆನ್ನೈ:ತಮಿಳುನಾಡು ರಾಜಕಾರಣದಲ್ಲಿ ದುಬಾರಿ ವಾಚ್ ಖರೀದಿ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು 5 ಲಕ್ಷ ರೂ. ಮೌಲ್ಯದ ರಫೇಲ್ ವಾಚ್ ಖರೀದಿಸಿದ್ದು, ಅದರ ರಶೀದಿಯನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿ ಸವಾಲು ಎಸೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದುಬಾರಿ ವಾಚ್​ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಣ್ಣಾಮಲೈ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದುವರೆಗೂ ನಾನು ಧರಿಸುತ್ತಿದ್ದ ಶರ್ಟ್​, ಪ್ಯಾಂಟ್​, ಪಂಚೆ ಹಾಗೂ ನಾನು ಬಳಸುತ್ತಿದ್ದ ಕಾರು ಇವುಗಳನ್ನು ಹೋಲಿಕೆ ಮಾಡಿ ಮಾತನಾಡುತ್ತಿದ್ದವರು. ಇದೀಗ ಹೊಸ ಚರ್ಚೆ ಆರಂಭಿಸಿದ್ದಾರೆ. ನನ್ನ ವಾಚ್​ ಬಗ್ಗೆ ಮಾತನಾಡುತ್ತಿದ್ದಾರೆ.
ನಾನು ಕಟ್ಟಿರುವುದು ರಫೇಲ್ ವಾಚ್​. ಭಾರತಕ್ಕೆ ಫ್ರಾನ್ಸ್​ನಿಂದ ಬಂದ ರಫೇಲ್​ ವಿಮಾನಕ್ಕೂ ಇದಕ್ಕೂ ಸಂಬಂಧ ಇದೆ. ರಫೇಲ್​ ವಿಮಾನಗಳ ಬಿಡಿ ಭಾಗಗಳನ್ನು ಬಳಸಿ ಕೇವಲ 500 ವಾಚ್​ಗಳನ್ನು ತಯಾರಿಸಲಾಗಿದೆ. ಇದೊಂದು ವಿಶೇಷ ರಫೇಲ್​ ಆವೃತ್ತಿಯಾಗಿದೆ. ರಫೇಲ್​ ವಿಮಾನದಲ್ಲಿ ಯಾವೆಲ್ಲ ಭಾಗಗಳು ಇವೆಯೋ ಅದೆಲ್ಲ ನಾನು ಕಟ್ಟಿರುವ ವಾಚ್​ನಲ್ಲಿ ಇದೆ. ನಾನೊಬ್ಬ ರಾಷ್ಟ್ರಪ್ರೇಮಿ. ನನಗೆ ರಫೇಲ್​ ವಿಮಾನವನ್ನು ಓಡಿಸುವ ಭಾಗ್ಯ ದೊರೆಯಲಿಲ್ಲ. ಅದಕ್ಕಾಗಿ ನಾನು ರಫೇಲ್​ ವಿಮಾನದ ಭಾಗಗಳಿಂದ ತಯಾರಿಸಿದ ವಾಚ್​ ಅನ್ನು ಧರಿಸುತ್ತಿದ್ದೇನೆ. ಇದು ದೇಶ ಪ್ರೇಮದ ಸಂಕೇತ ಎಂದು ಅಣ್ಣಾಮಲೈ ಹೇಳಿದರು.
ಇಡೀ ವಿಶ್ವದಲ್ಲಿ ಕೇವಲ 500 ರಫೇಲ್​ ವಾಚ್​ಗಳು ಮಾತ್ರ ಇವೆ. ಈ ವಾಚ್​ಗಳನ್ನು ರಫೇಲ್​ ವಿಮಾನ ನಿರ್ಮಾಣ ಮಾಡುವ ಡಸಾಲ್ಟ್​ ಏವಿಯೇಷನ್​ ತಯಾರು ಮಾಡಿದೆ. ನನಗಂತೂ ರಫೇಲ್​ ವಿಮಾನ ಓಡಿಸುವ ಅದೃಷ್ಟ ಇಲ್ಲ. ಹೀಗಾಗಿ ನನ್ನ ಉಸಿರು ಇರೋವರೆಗೂ ನಾನು ಈ ವಾಚ್​ ಅನ್ನು ಧರಿಸುತ್ತೇನೆ. ಈ ವಾಚ್​ ಅನ್ನು ಭಾರತೀಯರು ಬಿಟ್ಟರೆ ಇನ್ಯಾರು ಖರೀದಿ ಮಾಡುತ್ತಾರೆ. ನಾವೇ ತಾನೇ ಖರೀದಿಸಬೇಕು. ರಫೇಲ್​ ವಿಮಾನ ಬಂದ ಮೇಲೆ ಭಾರತದ ವಾಯುಶಕ್ತಿ ಇನ್ನಷ್ಟು ಹೆಚ್ಚಿದೆ. ನಾನೊಬ್ಬ ದೇಶ ಪ್ರೇಮಿ ಆಗಿರುವುದರಿಂದ ಈ ರಫೇಲ್​ ವಾಚ್​ ಖರೀದಿ ಮಾಡಿದ್ದೇನೆ ಎಂದರು.
ನನ್ನ ವಾಚ್​ ಯಾವುದು? ಯಾವ ಕಂಪನಿಯದ್ದು? ಎಂದು ಸಚಿವರು ಕೇಳಿದ್ದಾರೆ. ನಾನು ವಾಚ್​ ಬಗ್ಗೆ ತಿಳಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದರೆ ರಫೇಲ್​ ಬಗ್ಗೆ ತಿಳಿಯಿರಿ. ಭಾರತದ ಶತ್ರುಗಳು ಒಳಗಡೆಯೇ ಇದ್ದಾರೆ. ಚೀನಾ ಮತ್ತು ಪಾಕಿಸ್ತಾನದ ಏಜೆಂಟ್​ಗಳು ನಮ್ಮಲ್ಲಿಯೇ ಇದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು ಕೊಟ್ಟಿದ್ದೇನೆ. ಇದು ಮೊದಲಿನ ಭಾರತವಲ್ಲ. ಇದು ಮೋದಿಜಿ ಅವರ ಭಾರತ ಎಂದು ಟೀಕಾಕಾರರಿಗೆ ಅಣ್ಣಾಮಲೈ ತಿರುಗೇಟು ನೀಡಿದರು.
ತಮಿಳುನಾಡು ಸಚಿವ ಹೇಳಿದ್ದೇನು?ಇದು ರಫೇಲ್​ ವಾಚ್​. ವಿಶ್ವದಲ್ಲಿ ಕೇವಲ 500 ವಾಚ್​ಗಳನ್ನು ತಯಾರಿಸಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ವೆಚ್ಚದ ರಫೇಲ್ ವಾಚ್ ಅನ್ನು ಕೇವಲ 4 ಕುರಿಗಳ ಮಾಲಿಕ ಎಂದು ಹೇಳಿಕೊಳ್ಳುವ ವ್ಯಕ್ತಿ ಕೈಯಲ್ಲಿ ಹೇಗೆ ಬಂತು? ಒಂದು ಗಂಟೆಯೊಳಗೆ ಅವರು ಖರೀದಿಸಿದ ರಸೀದಿಯನ್ನು ನೀಡಿದರೆ, ಸಾಮಾನ್ಯ ಜನರು ಸಹ ಆನಂದಿಸಬಹುದು. ರಶೀದಿಯನ್ನು ಎಂದಿನಂತೆ ಎಕ್ಸೆಲ್ ಶೀಟ್ ಮೂಲಕ ಮೋಸಗೊಳಸಬಹುದು ಎಂದು ವ್ಯಂಗ್ಯವಾಡಿದ್ದಾರೆ.(ಏಜೆನ್ಸೀಸ್​)
ಅಪ್ರಾಪ್ತೆ ಅತ್ಯಾಚಾರ ಕೇಸ್​: ಬಂಧಿತ ಆರೋಪಿಯ ವೈದ್ಯಕೀಯ ಪರೀಕ್ಷಾ ವರದಿ ನೋಡಿ ಪೊಲೀಸರೇ ತಬ್ಬಿಬ್ಬು!

ನಗರದಲ್ಲಿ ಹೆಚ್ಚಾಯ್ತು ರೌಡಿಗಳ ಅಟ್ಟಹಾಸ; ಹಫ್ತಾ ನೀಡಿಲ್ಲವೆಂದು ಮೀನು ವ್ಯಾಪಾರಿ ಮೇಲೆ ಲಾಂಗ್ ಬೀಸಿದ ಪುಡಿ ರೌಡಿ

ಕೋಳಿ ಕೂಗೋದ್ರಿಂದ ನಮಗೆ ನಿದ್ದೆ ಇಲ್ಲದಂತಾಗಿದೆ; ಸಮಸ್ಯೆಯಿಂದ ಪಾರು ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
