ನವದೆಹಲಿ:ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ 1923 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ಬಿಡುಗಡೆಯಾಗಿರುವ ಆರನೇ ಪಟ್ಟಿಯಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಬೆಂಬಲಿಗರಾದ ಮಹೇಶ್​ ಜೋಶಿ, ಶಾಂತಿ ಧರಿವಾಲ್​ ಹಾಗೂ ಧರ್ಮೆಂದ್ರ ರಾಥೋರ್​ಗೆ ಟಿಕೆಟ್​ ಕಾಂಗ್ರೆಸ್​ ಹೈಕಮಾಂಡ್​ ಟಿಕೆಟ್​ ನಿರಾಕರಿಸಿದೆ. ಈ ಮೂಲಕ ಅಶೋಕ್​ ಗೆಹ್ಲೋಟ್​ ಬಣದ ವಿರುದ್ಧ ಸಚಿನ್​ ಪೈಲಟ್​ ಮೇಲುಗೈ ಸಾಧಿಸಿದಂತಾಗಿದೆ.
ಕಳೆದ ವರ್ಷ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷರಾಗುವುದು ಖಚಿತವಾಗುತ್ತಿದ್ದಂತೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿತ್ತು. ಅಶೋಕ್​ ಗೆಹ್ಲೋಟ್​ ರಾಜೀನಾಮೆ ವದಂತಿ ಬೆನ್ನಲ್ಲೇ ಈ ಮೂವರು ನಾಯಕರು ಸಸಿನ್​ ಪೈಲಟ್​ರನ್ನು ಸಿಎಂ ಮಾಡದಂತೆ ಬಂಡಾಯ ಎದ್ದಿದ್ದರು ಮತ್ತು ಶಾಸಕಾಂಗ ಸಭೆ ನಡೆಸುವಂತೆ ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಒತ್ತಡಬ ಹೇರಿದ್ದರು. ಇದಲ್ಲದೆ ಅಂದಿನ ರಾಜ್ಯ ಕಾಂಗ್ರೆಸ್​ ಉಸ್ತುವಾರಿಯಾಗಿದ್ದ ಅಜಯ್​ ಮಾಕೆನ್​ ಅವರ ರಾಜೀನಾಮೆಗೂ ಈ ಮೂವರು ಪ್ರಮುಖ ಕಾರಣಕರ್ತರೆಂದು ಹೇಳಲಾಗಿದೆ. ಈ ಕಾರಣಕ್ಕೆ ಟಿಕೆಟ್​ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
राजस्थान में होने वाले विधानसभा चुनाव, 2023 के लिए भारतीय राष्ट्रीय कांग्रेस द्वारा जारी उम्मीदवारों की सूची।#कांग्रेस_फिर_से#RajasthanAssemblyElection2023pic.twitter.com/N0C3w1vHXP
ಇದನ್ನೂ ಓದಿ:ರೇವ್​ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ; ಪ್ರಮುಖ ಆರೋಪಿ ಎಲ್ಷಿಶ್​ ಯಾದವ್​ನನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು
200 ಸದಸ್ಯಬಲದ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ 178 ಅಭ್ಯರ್ಥಿಗಳನ್ನು ಘೋಷಿಸಿದ್ದು, 21 ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. 1 ಸೀಟನ್ನು ಮಿತ್ರಪಕ್ಷ ಆರ್​ಎಲ್​ಡಿಗೆ ಕಾಂಗ್ರೆಸ್​ ಬಿಟ್ಟುಕೊಟ್ಟಿದೆ. 105 ಹಾಲಿ ಶಾಸಕರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದ್ದು, 12 ಮಂದಿ ಹಾಲಿ ಶಾಸಕರಿಗೆ ಟಿಕೆಟ್​ ನಿರಾಕರಿಸಿದೆ. 24 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
