ನವದೆಹಲಿ:ಒಂಬತ್ತು ವರ್ಷಗಳ ಕಾನೂನು ಹೋರಾಟದ ನಂತರ ನೋಯ್ಡಾದ ಅಕ್ರಮ ಅವಳಿ ಕಟ್ಟಡವನ್ನು ಭಾನುವಾರ ನೆಲಸಮಗೊಳಿಸಲಾಗಿದ್ದು ಗುಡ್ಡೆಯಾಗಿ ಬಿದ್ದ ಕಟ್ಟಡದ ಅವಶೇಷಗಳನ್ನು ಕಾರ್ವಿುಕರು ತೆಗೆದು ಹಾಕುತ್ತಿರುವ ದೃಶ್ಯಗಳು ಕಂಡು ಬಂದಿವೆ. ಈ ನಡುವೆ, ಸೂಪರ್​ಟೆಕ್ ಕಟ್ಟಡ ಧರೆಗುರುಳಿದ ನಂತರ ಅಧಿಕಾರಿಗಳು ಇನ್ನೂ ಸುಮಾರು 100 ಅಕ್ರಮ ಕಟ್ಟಡಗಳ ಮೇಲೆ ಕಣ್ಣಿಟ್ಟದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಮಧ್ಯಾಹ್ನ 2.30ರ ವರೆಗೆ ನಿಂತಿದ್ದ ಬೃಹತ್ ಕಟ್ಟಡ ಮುಂದಿನ ಕೆಲವೇ ಕ್ಷಣಗಳಲ್ಲಿ ಆಧುನಿಕ ನಿಯಂತ್ರಿತ ತಂತ್ರಜ್ಞಾನದ ಮೂಲಕ ಧರಾಶಾಯಿಯಾಗಿತ್ತು. ತಲಾ 103 ಮೀಟರ್ ಎತ್ತರದ ಅವಳಿ ಅಪಾರ್ಟ್​ವೆುಂಟ್​ನ ‘ಅಪೆಕ್ಸ್’ ಕಟ್ಟಡದಲ್ಲಿ 32 ಮಹಡಿ ಹಾಗೂ ’ಸಿಯಾನೆ’ಯಲ್ಲಿ 29 ಮಹಡಿಗಳಿದ್ದವು. ‘ಇದು ನಿಸ್ಸಂಶಯವಾಗಿಯೂ ರಿಯಲ್ ಎಸ್ಟೇಟ್ ಉದ್ಯಮಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಸಂದ ಕಾನೂನು ಗೆಲುವಾಗಿದೆ’ ಎಂದು ನಿವಾಸಿ ಹೇಳಿದ್ದಾರೆ.
ಶುಭ್ರ ಆಗಸ:ಸೋಮವಾರ ಬೆಳಗ್ಗೆ ಎದ್ದು ಹೊರ ಗಡೆ ನೋಡಿ ದಾಗ ಶುಭ್ರ ನೀಲಾಗಸ ಕಂಡು ಬಂತು ಎಂದು ನೋಯ್ಡಾದ 93ಎ ಸೆಕ್ಟರ್​ನ ನಿವಾಸಿಗಳ ಕಲ್ಯಾಣ ಸಂಘದ (ಆರ್​ಡಬ್ಲ್ಯುಎ) ಸದಸ್ಯರೊಬ್ಬರು ಹೇಳಿದ್ದಾರೆ. ಫ್ಲ್ಯಾಟ್ ಮಾಲಿಕರ ಹಿತಗಳನ್ನು ರಕ್ಷಿಸುವ ಸಲುವಾಗಿ, ಮುಂಬೈಯಲ್ಲಿ ನಿರ್ವಣಗೊಂಡಿರುವ ಅಕ್ರಮ ಗಗನಚುಂಬಿ ಕಟ್ಟಡಗಳ ವಿಶೇಷ ತಪಾಸಣೆ ನಡೆಸುವಂತೆ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯನ್ನು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಾಶಗೊಳಿಸಲಾದ ಕಟ್ಟಡವಿದ್ದ ಪ್ರದೇಶದ ಸುತ್ತಮುತ್ತ ಇದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಕಟ್ಟಲಾಗಿದೆಯೇ ಎನ್ನುವುದನ್ನು ನೋಯ್ಡಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸುಮಾರು ನೂರರಷ್ಟು ಇಂಥ ಕಟ್ಟಡಗಳ ಪೈಕಿ ಬಹುತೇಕ ಕಟ್ಟಡಗಳಿಗೆ 2009 ಮತ್ತು 2014ರ ನಡುವೆ ಅನುಮೋದನೆ ನೀಡಲಾಗಿತ್ತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ; ಮಹಾನಗರ ಪಾಲಿಕೆಯಿಂದ ಐತಿಹಾಸಿಕ ನಿರ್ಣಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 2 =
Remember me
