ನವದೆಹಲಿ:ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಇದೀಗ ಇನ್ನೊಂದು ಚೀತಾ ಕೂಡ ಸಾವಿಗೀಡಾಗಿದೆ. ಈ ಮೂಲಕ ಬರೀ ಐದು ತಿಂಗಳಲ್ಲಿ ಏಳು ಚೀತಾಗಳು ಮೃತಪಟ್ಟಂತಾಗಿದೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದ ತೇಜಸ್ ಹೆಸರಿನ ಚೀತಾ ಇಂದು ಸಾವಿಗೀಡಾಗಿದೆ. ಇದಕ್ಕೂ ಮುನ್ನ ಮೂರು ಚೀತಾಗಳು ಮತ್ತು ಮೂರು ಚೀತಾ ಮರಿಗಳು ಸಾವಿಗೀಡಾಗಿದ್ದವು.
ಈಗ ಮೃತಪಟ್ಟಿರುವ ತೇಜಸ್, ಇನ್ನೊಂದು ಹೆಣ್ಣು ಚೀತಾ ಕಚ್ಚಿದ್ದರಿಂದ ತೀವ್ರ ಗಾಯಗೊಂಡು ಸಾವಿಗೀಡಾಗಿದೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ 11ರ ಸುಮಾರಿಗೆ ಚೀತಾ ಆರೈಕೆ ಮಾಡುವವರು ಅದರ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದನ್ನು ಗಮನಿಸಿದ್ದರು. ನಂತರ ಈ ಕುರಿತು ಪಾಲ್ಪರ್ ಹೆಡ್​ ಕ್ವಾರ್ಟರ್ಸ್​ನಲ್ಲಿದ್ದ ವನ್ಯಜೀವಿ ಪಶುವೈದ್ಯರ ಗಮನ ಸೆಳೆದಿದ್ದರು.
ಇದನ್ನೂ ಓದಿ:ವೃದ್ಧ ಚಿಲ್ಲರೆ ಕೊಟ್ಟಿದ್ದಕ್ಕೆ ಸಾಲಲ್ಲ ಎಂದು 6 ಸಾವಿರ ರೂ. ಕಸಿದುಕೊಂಡು ಹೋದ ಮಂಗಳಮುಖಿಯರ ಬಂಧನ
ತಕ್ಷಣ ವನ್ಯಜೀವಿ ಪರಿಣತರು ತೇಜಸ್​ಗೆ ಚಿಕಿತ್ಸೆ ನೀಡಿದ್ದರೂ ಮಧ್ಯಾಹ್ನ 2ರ ಸುಮಾರಿಗೆ ಅದು ಕೊನೆಯುಸಿರೆಳೆದಿದೆ. ತೇಜಸ್ ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ಬರಲಿದ್ದು, ಆ ಬಳಿಕವಷ್ಟೇ ಸಾವಿಗೆ ಸಂಬಂಧಿಸಿದಂತೆ ಒಂದಷ್ಟು ಸ್ಪಷ್ಟತೆ ಸಿಗಲಿದೆ. ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದು, ತೇಜಸ್ ಸಾವಿನ ಬಳಿಕ ಇನ್ನು 13 ಚೀತಾಗಳಷ್ಟೇ ಉಳಿದಿವೆ.
ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
