ಇಂಫಾಲ/ನವದೆಹಲಿ: ಜನಾಂಗೀಯ ಘರ್ಷಣೆಗಳ ಅಗ್ನಿಕುಂಡದಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಮೇ ತಿಂಗಳಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಇನ್ನೊಂದು ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪರಿಹಾರ ಶಿಬಿರದಲ್ಲಿರುವ ಮಹಿಳೆ ಧೈರ್ಯದಿಂದ ಪೊಲೀಸರಿಗೆ ದೂರು ನೀಡಿದ್ದರಿಂದ ಈ ಪ್ರಕರಣ ಬಯಲಾಗಿದೆ. ಮಾಹಿತಿ ಒದಗಿಸುವಂತೆ ಅಧಿಕಾರಿಗಳು ಪ್ರೋತ್ಸಾಹಿ ಸುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಮೇಲೆ ನಡೆದ ಬರ್ಬರ ದೌರ್ಜನ್ಯಗಳನ್ನು ತಿಳಿಸಲು ಮಣಿಪುರದ ಹೆಚ್ಚೆಚ್ಚು ಮಹಿಳೆಯರು ಮುಂದೆ ಬರುತ್ತಿದ್ದಾರೆ. ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದೇಶದಾದ್ಯಂತ ಆಕ್ರೋಶದ ಅಲೆ ಎಬ್ಬಿಸಿದ್ದರಿಂದ ಮಣಿಪುರದ ಪರಿಸ್ಥಿತಿಯ ಇನ್ನೊಂದು ಕರಾಳ ಮುಖ ಬಯಲಿಗೆ ಬಂದಿತ್ತು.
ದುಷ್ಕರ್ವಿುಗಳಿಂದ ಬೆಂಕಿ ಬಿದ್ದ ತನ್ನ ಮನೆಯಿಂದ ಇಬ್ಬರು ಮಕ್ಕಳು ಹಾಗೂ ಇನ್ನಿಬ್ಬರು ಸಂಬಂಧಿಕರ ಜೊತೆ ಓಡಿ ಹೋಗುತ್ತಿದ್ದಾಗ ಪುರುಷರ ಗುಂಪೊಂದು ಲೈಂಗಿಕ ದೌರ್ಜನ್ಯವೆಸಗಿತು ಎಂದು ಮಹಿಳೆ ವಿವರಿಸಿದ್ದಾಳೆ. ಸಾಮಾಜಿಕ ಕಳಂಕ ಹಾಗೂ ಬಹಿಷ್ಕಾರದ ಭೀತಿಯಿಂದ ಇದುವರೆಗೆ ಗಮನಕ್ಕೆ ತಂದಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲೂ ಯೋಚಿಸಿದ್ದೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್​ನ ಭದ್ರತಾ ಸಿಬ್ಬಂದಿ ನಿಯೋಜನೆಯನ್ನು ಹಿಂತೆಗೆದುಕೊಳ್ಳ ಬಾರದು ಎಂದು ಬುಡಕಟ್ಟು ಸಮುದಾಯದ ಹತ್ತು ಶಾಸಕರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಭಾರತದ ಅತ್ಯಂತ ಹಳೆಯ ಅರೆಸೇನಾ ಪಡೆಯಾದ ಅಸ್ಸಾಂ ರೈಫಲ್ಸ್, ಸ್ಥಾಪನೆಯಾದಾಗಿನಿಂದ ದೇಶವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ರಕ್ಷಿಸುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಕಲಹ ಪ್ರಾರಂಭವಾದಾಗಿನಿಂದ ಬುಡಕಟ್ಟು ಜನಾಂಗದವರು ಮತ್ತು ಮೈತೆಯಿ ಸಮುದಾಯಗಳ ನಡುವೆ ಅಪನಂಬಿಕೆ ಸೃಷ್ಟಿಯಾಗಿದೆ. ಇದು ರಾಜ್ಯದ ಆಡಳಿತ ವಿಭಜನೆ ಆಗುವುದನ್ನು ಪ್ರತಿಫಲಿಸುತ್ತದೆ. ಆದಿವಾಸಿಗಳು ಕೇಂದ್ರ ಪಡೆಗಳ ಮೇಲೆ ವಿಶೇಷವಾಗಿ ಅಸ್ಸಾಂ ರೈಫಲ್ಸ್​ನ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಮತ್ತು ಸುಭದ್ರತೆಯ ವಾತಾವರಣ ನೆಲೆಸಬೇಕಾದರೆ ‘ಸಂಪೂರ್ಣ ನಿಶ್ಶಸ್ತ್ರೀಕರಣ’ ಸಾಧಿಸಬೇಕು ಎಂದು ಪ್ರತಿಪಾದಿಸಿ ಮಣಿಪುರದ 40 ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕುಕಿ ಉಗ್ರಗಾಮಿ ಗುಂಪುಗಳೊಂದಿಗಿನ ಕಾರ್ಯಾಚರಣೆ ರದ್ದು ಒಪ್ಪಂದ (ಎಸ್​ಒಒ) ಹಾಗೂ ರಾಜ್ಯದಲ್ಲಿ ಎನ್​ಆರ್​ಸಿ ಅನುಷ್ಠಾನವನ್ನು ವಾಪಸ್ ಪಡೆಯಬೇಕು ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಬಲಪಡಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತಿಗಳ ಬೇಡಿಕೆ ವಿರೋಧಿಸಿ ಕುಕಿಗಳು ಮೇ 3ರಂದು ಚೂರಚಂದ್ರಾಪುರ ಜಿಲ್ಲೆಯಲ್ಲಿ ಮೆರವಣಿಗೆ ನಡೆಸಿದ ನಂತರ ಹಿಂಸಾಚಾರ ಸ್ಪೋಟಗೊಂಡಿತ್ತು. ಆ ದಿನವೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಬಿಷ್ಣುಪುರ ಪೊಲೀಸ್ ಠಾಣೆಗೆ ಬುಧವಾರ ಸಲ್ಲಿಸಿದ ದೂರಿನಲ್ಲಿ 37 ವರ್ಷದ ಮಹಿಳೆ ತಿಳಿಸಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
