ನವದೆಹಲಿ:ಕೋವಿಡ್​-19 ಪಿಡುಗು ಹೆಚ್ಚಾಗುತ್ತಿರುವಂತೆ ವಿಶ್ವದಾದ್ಯಂತ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಅಭಿವೃದ್ಧಿಗೆ ಸಂಶೋಧಕರು ಶ್ರಮಿಸುತ್ತಿದ್ದಾರೆ. ಇದರ ಮಧ್ಯದಲ್ಲೇ ಭಾರತದ ಹೈದರಾಬಾದ್ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ (ಬಿಬಿಐಎಲ್​) ಔಷಧ ಕಂಪನಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಚುಚ್ಚುಮದ್ದಿನ ಮಾನವರ ಮೇಲಿನ ಪ್ರಯೋಗಕ್ಕೆ ಭಾರತೀಯ ಔಷಧ ಮಹಾಪ್ರಧಾನ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದರು. ಇದರ ಬೆನ್ನಲ್ಲೇ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಮತ್ತೊಂದು ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಡಿಸಿಜಿಐ ಅನುಮತಿ ನೀಡಿದೆ.
ಗುಜರಾತ್​ನ ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಲಿಮಿಟೆಡ್​ ಕಂಪನಿ ಈ ಚಚ್ಚುಮದ್ದನ್ನು ಅಭಿವೃದ್ಧಿಪಡಿಸಿದೆ. ಆದರೆ ಚುಚ್ಚುಮದ್ದಿನ ಬಗ್ಗೆಯಾಗಲಿ ಅಥವಾ ಅದರ ಹೆಸರನ್ನಾಗಲಿ ಕಂಪನಿ ಬಹಿರಂಗಪಡಿಸಿಲ್ಲ. ಪ್ರಾಣಿಗಳ ಮೇಲೆ ಮಾಡಿದ 1 ಮತ್ತು 2ನೇ ಹಂತದ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಕಂಪನಿಗೆ ಅನುಮತಿ ದೊರೆತಿದೆ.
ಇದನ್ನೂ ಓದಿ:ಬಾಲಿವುಡ್​ನ ಹಿರಿಯ ಜನಪ್ರಿಯ ಕೊರಿಯೊಗ್ರಫರ್ ಸರೋಜ್ ಖಾನ್ ಇನ್ನಿಲ್ಲ
ವಿಷಯ ತಜ್ಞರ ಸಮಿತಿಯ ಶಿಫಾರಸಿನ ಬಳಿಕ ಈ ಚುಚ್ಚುಮದ್ದಿಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಲಿಮಿಟೆಡ್​ ಇದಕ್ಕೂ ಮುನ್ನ ಬಿಳಿ ಇಲಿ, ಮೊಲ, ಗಿನಿಯಾ ಪಿಗ್​ ಮತ್ತು ಇಲಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿದ ಬಳಿಕ ಇದನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
