ನವದೆಹಲಿ:ಕಂದಾಯ ಇಲಾಖೆಯ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಮುಂದುವರೆದಿದ್ದು, ಇಂದು ನವದೆಹಲಿಯ ದ್ವಾರಕಾ ಪ್ರದೇಶದಲ್ಲಿ 56 ವರ್ಷದ ಅಧಿಕಾರಿ ಶಿವರಾಜ್​ ಸಿಂಗ್​ ಆಸಿಡ್ ದ್ರಾವಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು, 1988 ರ ಬ್ಯಾಚ್ ಅಧಿಕಾರಿ ಕೇಶವ್ ಸಕ್ಸೇನಾ ದೆಹಲಿಯ ಚಾಣಕ್ಯಪುರಿಯಲ್ಲಿರುವ ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಶಿವರಾಜ್​ ಅವರು ತಮ್ಮ ಕಾರಿನಲ್ಲಿ ಕುಳಿತು ಆ್ಯಸಿಡ್ ಮಾದರಿ ದ್ರಾವಣವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ದೆಹಲಿಯ ಆರ್.ಕೆ.ಪುರದ ನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ:ಕರೊನಾ ವೈರಸ್​: ವೈದ್ಯಕೀಯ ಸಂಸ್ಥೆ ನೀಡಿದೆ ಗಾಬರಿ ತರುವ ವಿಷಯ!
ಇವರಿಗೆ ಕರೊನಾ ಸೋಂಕು ಪತ್ತೆಯಾಗಿತ್ತು. ನಂತರದ ಪರೀಕ್ಷೆಯಲ್ಲಿ, ನೆಗೆಟಿವ್​ ಕೂಡ ಬಂದಿತ್ತು. ಆದರೆ ಕುಟುಂಬದವರಿಗೆ ಕೋವಿಡ್-19 ಹರಡಲು ನಾನು ಕಾರಣ ಆಗಬಾರದು. ಅವರು ಸಂಕಷ್ಟ ಅನುಭವಿಸುವುದು ಇಷ್ಟವಿಲ್ಲ ಎಂದು ಬರೆದಿರುವ ಟಿಪ್ಪಣಿಯೊಂದು ಕಾರಿನೊಳಗೆ ಪತ್ತೆಯಾಗಿದೆ. ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆ್ಯಸಿಡ್ ಮಾದರಿ ದ್ರವ ಸೇವಿಸಿರುವುದು ಪತ್ತೆಯಾಗಿದೆ.
ಆದಾಯ ತೆರಿಗೆ ನಿರ್ದೇಶನಾಲಯದಲ್ಲಿ ಆದಾಯ ತೆರಿಗೆಯ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದ ಸಿಂಗ್ ಅವರು ಕೆಲವು ಸಮಯದಿಂದ “ಮಾನಸಿಕ ಒತ್ತಡ” ದಲ್ಲಿದ್ದರು ಮತ್ತು ಸ್ವಯಂ ನಿವೃತ್ತಿ ಬಯಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:23 ಪತ್ರಕರ್ತರಿಗೆ ಒಕ್ಕರಿಸಿದ ಕರೊನಾ ಸೋಂಕು
ಕಳೆದ ತಿಂಗಳು, 1988ರ ಬ್ಯಾಚ್ ಅಧಿಕಾರಿಯಾಗಿದ್ದ ಕೇಶವ್ ಸಕ್ಸೇನಾ ಅವರನ್ನು ಐ-ಟಿ ವಿಭಾಗದಲ್ಲಿ ಪ್ರಧಾನ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಆದರೆ ಅವರು ಕೂಡ ಒತ್ತಡದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಎಲ್ಲಾ ಅಧಿಕಾರಿಗಳನ್ನು ಆನ್​ಲೈನ್​ ಮೂಲಕ ಕೌನ್ಸೆಲಿಂಗ್​ ನಡೆಸಲು ಯೋಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಇನ್ನೊಂದೆಡೆ, ಕಂದಾಯ ಇಲಾಖೆಯ ಹಲವಾರು ಅಧಿಕಾರಿಗಳನ್ನು ಅಧಿಕಾರಿಗಳನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸರ್ಕಾರವು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ.
ಅದರ ಜತೆಗೆ, ಕರೊನಾ ಪೀಡಿತರ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ತೆರಿಗೆ ಹೆಚ್ಚಳವನ್ನು ಪ್ರತಿಪಾದಿಸುವ ವಿವಾದಾತ್ಮಕ ವರದಿಯನ್ನು ಸಾರ್ವಜನಿಕ ವಲಯಕ್ಕೆ ತಂದಿದ್ದಕ್ಕಾಗಿ ಸರ್ಕಾರವು ಈ ವರ್ಷ ಏಪ್ರಿಲ್‌ನಲ್ಲಿ ಮೂರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಈ ನಡುವೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಕರೊನಾ ವೈರಸ್​: ವೈದ್ಯಕೀಯ ಪರಿಷತ್ತು ನೀಡಿದೆ ಗಾಬರಿ ತರುವ ವಿಷಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
