ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ ಸರ್ಕಾರದಲ್ಲಿ ಲವ್​ ಜಿಹಾದ್​ ಕಾಯ್ದೆ ಜಾರಿಗೆ ಬಂದು ಎರಡು ದಿನಗಳು ಕಳೆಯುವುದರೊಳಗೆ ಎರಡನೇ ಲವ್​ ಜಿಹಾದ್​ ಪ್ರಕರಣ ದಾಖಲಾಗಿದೆ. ಹಿಂದೂ ಯುವಕನೆಂದು ನಂಬಿಸಿ ಮದುವೆಯಾದ ಯುವಕ, ಪತ್ನಿ ಗರ್ಭವತಿ ಆದ ನಂತರ ಮತಾಂತರವಾಗುವ ಒತ್ತಾಯ ಮಾಡಿರುವ ಘಟನೆ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಎನ್​ಡಿಎ ಮೈತ್ರಿಕೂಟದಿಂದ ಮತ್ತೊಂದು ಪಕ್ಷ ಔಟ್​?! ಕೃಷಿ ಕಾಯ್ದೆ ಕೈ ಬಿಡದಿದ್ದರೆ ನಾವು ನಿಮ್ಮ ಕೈ ಬಿಡುತ್ತೇವೆ
ಹಿಂದೂ ಧರ್ಮದ ಯುವತಿಗೆ ಫೇಸ್​ಬುಕ್​ನಲ್ಲಿ ಕುನಾಲ್​ ಶರ್ಮಾ ಹೆಸರಿನ ಯುವಕನೊಂದಿಗೆ ಸ್ನೇಹ ಬೆಳೆದಿದ್ದು, ಅದು ಪ್ರೀತಿಗೆ ತಿರುಗಿದೆ. ಇವರಿಬ್ಬರು ದೋಪೇಶ್ವರ ನಾಥ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ದಂಪತಿ ಆಗಾಗ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಸುಖ ಸಂಸಾರ ನಡೆಸುತ್ತಿದ್ದ ಈ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿತ್ತು. ಯುವತಿ ಗರ್ಭವತಿ ಆಗಿದ್ದಾಳೆ. ಆದರೆ ಅಷ್ಟರಲ್ಲಾಗಲೇ ತನ್ನ ನಿಜ ರೂಪ ತೋರಲಾರಂಭಿಸಿದ ಪತಿ, ಆಕೆಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ್ದಾನೆ. ನನ್ನ ಹೆಸರು ಕುನಾಲ್​ ಅಲ್ಲ ತಾಹಿರ್​ ಹುಸೇನ್​ ಎಂದು ಹೇಳಿದ್ದಾನೆ. ನನ್ನ ಜತೆ ಬದುಕಲು ನೀನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲೇ ಬೇಕು ಎಂದು ಹೆದರಿಸಿದ್ದಾನೆ. ಒಂದು ವೇಳೆ ಮತಾಂತರವಾಗದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ.
ಮೋಸ ಹೋದ ನಂತರ ಎಚ್ಚೆತ್ತ ಯುವತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
