ಕೋಲ್ಕತ:ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿಯಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಘಾತದ ಮೇಲೆ ಅಘಾತ ಉಂಟಾಗಿದೆ. ಸುವೇಂದು ಅಧಿಕಾರಿ ಸೇರಿ ಏಳು ಶಾಸಕರು ಪಕ್ಷ ಬಿಟ್ಟು ಹೊರನಡೆದ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ:ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರಿಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು?
ನಾಡಿಯಾ ಜಿಲ್ಲೆಯ ಸಂತಪುರದ ಶಾಸಕರಾದ ಅರಿಂದಂ ಭಟ್ಟಾಚಾರ್ಯರು ಟಿಎಂಸಿ ತ್ಯಜಿಸಿದ್ದು, ಬಿಜೆಪಿ ಸೇರಿದ್ದಾರೆ. ಬುಧವಾರದಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದರು. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಪಶ್ಚಿಮ ಬಂಗಾಳ ಮತ್ತು ಯುವಜನರಿಗೆ ದೃಷ್ಟಿ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.ಅರಿಂದಮ್ ಭಟ್ಟಾಚಾರ್ಯ ಅವರು 2016 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ಅದರ ಮುಂದಿನ ವರ್ಷ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ:ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವೇಷ ಚಿತ್ರಕ್ಕೆ ಮುಹೂರ್ತ; ಹೊಸ ತಂಡಕ್ಕೆ ಬೆನ್ನು ತಟ್ಟಿದ ಮರಿ ಟೈಗರ್
ರಾಜ್ಯದಲ್ಲಿನ ಉದ್ಯೋಗದ ಕೊರತೆ ಮತ್ತು ಕೈಗಾರಿಕೀಕರಣದಿಂದಾಗಿ ರಾಜ್ಯದ ಯುವಕರು ಮಮತಾ ಬ್ಯಾನರ್ಜಿ ಸರ್ಕಾರದೊಂದಿಗೆ ಬಿರಾಸೆಗೊಂಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಪಶ್ಚಿಮ ಬಂಗಾಳ ಈಗ ಮೋದಿಜಿಯ ಆತ್ಮನಿರ್ಭರ ಭಾರತ ಮಂತ್ರದೊಂದಿಗೆ ಗುರುತಿಸಿಕೊಳ್ಳಲು ಬಯಸಿದೆ. ನಮಗೆ ಆತ್ಮನಿರ್ಭರ ಪಶ್ಚಿಮ ಬಂಗಾಳ ಬೇಕು, ಎಂದು ಅವರು ಹೇಳಿದರು. (ಏಜೆನ್ಸೀಸ್​)
ಬೈಡೆನ್​ ಗದ್ದುಗೆ ಏರುತ್ತಿದ್ದಂತೆಯೇ ಚಿಗುರಿದ ಚೀನಾ: 28 ಅಧಿಕಾರಿಗಳಿಗೆ ನಿರ್ಬಂಧ

ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
