ನವದೆಹಲಿ :ರಾಜಕೀಯ ಚಾಣಕ್ಯನೆಂದೇ ಕರೆಯಲ್ಪಡುವ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಅವರು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮುಖ್ಯ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅವರ ನೈಪುಣ್ಯದ ಬೆಂಬಲ ಮಿಸ್​ ಆಗಲಿದೆ.
ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ವಿರುದ್ಧ ಗೆಲುವು ಸಾಧಿಸುವಲ್ಲಿ ಸಹಾಯ ಮಾಡುತ್ತಿದ್ದ ಕಿಶೋರ್​ ಅವರನ್ನು, ಮಾರ್ಚ್​ನಲ್ಲಿ​ ತಮ್ಮ ಮುಖ್ಯ ಸಲಹೆಗಾರರಾಗಿ ನೇಮಿಸಿಕೊಂಡಿರುವುದಾಗಿ ಸಿಂಗ್ ಘೋಷಿಸಿದ್ದರು. ಆದರೆ ಇದೀಗ, ಕಿಶೋರ್​ ಅವರು 2022 ರ ರಾಜ್ಯ ಚುನಾವಣೆಗಳಲ್ಲಿ ತಾವು ತೊಡಗಿಸಿಕೊಳ್ಳುವುದಿಲ್ಲ ಎಂದೂ, ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸುವುದರಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುತ್ತಿರುವೆ ಎಂದೂ ಕ್ಯಾಪ್ಟನ್ ಸಿಂಗ್​ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮಾಜಿ ಸಚಿವ ರೋಷನ್‌ ಬೇಗ್ ಮನೆ ಮೇಲೂ ‘ಇಡಿ’ ದಾಳಿ! ಮುಳುವಾಯ್ತು ಐಎಂಎ ಹಗರಣ
ಮುಂದಿನ ವರ್ಷದ ಚುನಾವಣೆಗಳಲ್ಲಿ ತಾವು ಪಾತ್ರ ವಹಿಸುವುದಿಲ್ಲ. ತಮ್ಮ ಗಮನವೇನಿದ್ದರೂ 2024 ರ ಲೋಕಸಭಾ ಚುನಾವಣೆಗಳ ಮೇಲಿರಲಿದೆ ಎಂದು ಕಿಶೋರ್​  ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಕಿಶೋರ್​ ಅವರ ಈ ನಿರ್ಧಾರದಿಂದ, ಈಗಷ್ಟೇ ಪಕ್ಷದ ಆಂತರಿಕ ಕಲಹಗಳನ್ನು ಇತ್ಯರ್ಥಪಡಿಸಿಕೊಂಡಿದ್ದ ಪಂಜಾಬ್​ ಕಾಂಗ್ರೆಸ್ಸಿನ ಚುನಾವಣಾ ಸಿದ್ಧತೆಗೆ ಏಟು ಬೀಳುವುದೇ ಎಂದು ಕಾದುನೋಡಬೇಕಾಗಿದೆ.(ಏಜೆನ್ಸೀಸ್)
ಕಂಕಣ ಭಾಗ್ಯಕ್ಕೆ ಕರೊನಾ ಬ್ರೇಕ್! 27 ಜೋಡಿಗಳ ವಿವಾಹ ಮುಂದೂಡಿಕೆ
‘ಐತಿಹಾಸಿಕ! ಆತ್ಮವಿಶ್ವಾಸದಿಂದ ಕೂಡಿದ ಭಾರತವಿದು!’ – ಹಾಕಿ ವಿಜಯಕ್ಕೆ ಪ್ರಧಾನಿ ಮೋದಿ ಹರ್ಷೋದ್ಗಾರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
