ನವದೆಹಲಿ:ದೇಶದಲ್ಲಿ ಇಂದು ಮತ್ತೊಂದು ಗುಲಾಮಗಿರಿಯ ಗುರುತನ್ನು ತೆಗೆದು ಹಾಕಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ರಾಜಪಥಕ್ಕೆ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿದ್ದು, ಅದರ ಉದ್ಘಾಟನೆ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕರ್ತವ್ಯಪಥ ಬರೀ ಇಟ್ಟಿಗೆ ಮತ್ತು ಕಲ್ಲುಗಳ ರಸ್ತೆಯಲ್ಲ, ಅದು ಭಾರತೀಯ ಪ್ರಜಾಸತ್ತಾತ್ಮಕ ಇತಿಹಾಸ ಮತ್ತು ಆದರ್ಶಗಳ ಪಥ. ದೇಶದ ಪ್ರಜೆಗಳು ಇಲ್ಲಿಗೆ ಬಂದಾಗ ಇಲ್ಲಿನ ನೇತಾಜಿ ಪ್ರತಿಮೆ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ಅವರಲ್ಲಿ ಸ್ಫೂರ್ತಿಯನ್ನು ತುಂಬಬೇಕು ಎಂದರು.
ರಾಜಪಥ ಗುಲಾಮಿತನದ ಸಂಕೇತ, ಅದು ಈಗ ಇತಿಹಾಸಕ್ಕೆ ಸೇರಿದೆ. ಅದನ್ನು ಎಂದೆಂದಿಗೂ ಅಳಿಸಲಾಗಿದೆ. ಇಂದು ಕರ್ತವ್ಯಪಥದ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಾಗಿದೆ. ದೇಶದ ಜನರು ಇನ್ನೊಂದು ಗುಲಾಮಿತನದಿಂದ ಮುಕ್ತರಾಗಿದ್ದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂಬುದಾಗಿ ಮೋದಿ ಹೇಳಿದರು.
ನಮ್ಮ ರಾಷ್ಟ್ರೀಯ ನಾಯಕ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಬ್ರಿಟಿಷರ ಆಡಳಿತದಲ್ಲಿ ಅದನ್ನು ಪ್ರತಿನಿಧಿಸುವ ಪ್ರತಿಮೆ ಇತ್ತು. ಇಂದು ಅಲ್ಲಿ ನೇತಾಜಿ ಪ್ರತಿಮೆ ಸ್ಥಾಪಿಸುವ ಮೂಲಕ ಆಧುನಿಕ ಹಾಗೂ ಸಶಕ್ತ ಭಾರತಕ್ಕೆ ಬುನಾದಿ ಹಾಕಲಾಗಿದೆ ಎಂದರು.

ಹಿಜಾಬ್ ಜತೆ ಸಿಖ್ಖರ ಕಿರ್ಪನ್​ ಮತ್ತು ಟರ್ಬನ್​ ಹೋಲಿಕೆ ಇಲ್ಲ: ಸುಪ್ರೀಂ ಕೋರ್ಟ್​

ಕತ್ತಿಯಿಂದ ಕುತ್ತಿಗೆ ಕಡಿದು ಅತ್ತಿಗೆಯ ಕೊಲೆ; ಆರೋಪಿ ಮೈದುನ ಪರಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
