ನವದೆಹಲಿ:ಮೈ, ಕೈ ಮೇಲೆ ಏಳುವ ಗಂಧೆಗಳು ಕೋವಿಡ್​-19ರ ಲಕ್ಷಣಗಳು ಎಂಬುದನ್ನು ತುಂಬಾ ಹಿಂದೆಯೇ ಒಪ್ಪಿಕೊಳ್ಳಲಾಗಿದೆ. ಆದರೆ ಈಗ ಬಾಯಿಹುಣ್ಣು, ದಂತಕುಳಿಯಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕೂಡ ಕೋವಿಡ್​-19ರ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.
ಕೋವಿಡ್​-19 ಸೋಂಕಿತರನ್ನು ಪರೀಕ್ಷಿಸಿರುವ ಅಮೆರಿಕದ ಚರ್ಮರೋಗ ತಜ್ಞ ಡಾ. ಮೈಕೆಲ್​ ಗ್ರೀನ್​ ಕರೊನಾ ಸೋಂಕಿತರಲ್ಲಿ ಬಾಯಿಹುಣ್ಣು, ದಂತಕುಳಿಗಳಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕಂಡು ಬಂದಿದೆ. ಹಾಗಾಗಿ ಈ ಸಮಸ್ಯೆಗಳು ಕೋವಿಡ್​-19ರ ಲಕ್ಷಣಗಳು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಡುಬು ರೋಗ ಹಾಗೂ ಕಾಲು ಮತ್ತು ಬಾಯಿ ರೋಗದ ವೈರಾಣು ಸೋಂಕಿನ ಸಂದರ್ಭದಲ್ಲಿ ಲೋಳೆ ಪೊರೆ (ಮ್ಯೂಕಸ್​ ಮೆಂಬರೇನ್​) ಮೇಲೆ ಸಣ್ಣ ಸಣ್ಣ ಗಂಧೆಗಳು ಆಗುವುದು ಸಾಮಾನ್ಯ. ಹಾಗಾಗಿ ಲೋಳೆ ಪೊರೆ ಮೇಲೆ ಗಂಧೆಗಳು ಏಳುವುದು ಕೂಡ ವೈರಾಣು ಸೋಂಕಿನ ಲಕ್ಷಣ ಎಂದು ಭಾವಿಸಲಾಗುತ್ತದೆ. ಹಾಗಾಗಿ ಅದು ಕೂಡ ಕೋವಿಡ್​-19ರ ಲಕ್ಷಣ ಆಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಡ್ರಗ್‌ ದೊರೆಗೆ ಸಿಎಂ ಸಾಥ್‌! ದಿಟ್ಟ ಪೊಲೀಸ್‌ ಅಧಿಕಾರಿಯಿಂದ ಮಣಿಪುರ ಮುಖ್ಯಮಂತ್ರಿ ಗಡಗಡ
ಮ್ಯಾಡ್ರಿಡ್​ನ ವೈದ್ಯಕೀಯ ಕಾಲೇಜೊಂದರ ವೈದ್ಯ ಜುವಾನ್​ ಜಿಮೆನೆಜ್​ ಕೌಹೆ ನೇತೃತ್ವದ ಸ್ಪೇನ್​ನ ಚರ್ಮರೋಗತಜ್ಞರು ಮತ್ತು ಸಂಶೋಧಕರ ತಂಡ ಕೋವಿಡ್​-19 ಮತ್ತು ಚರ್ಮದ ಮೇಲೆ ಗಂಧೆಗಳು ಎದ್ದಿದ್ದ 21 ರೋಗಿಗಳನ್ನು ಆಮೂಲಾಗ್ರವಾಗಿ ತಪಾಸಣೆಗೆ ಒಳಪಡಿಸಿದ್ದರು. ಇವರಲ್ಲಿ ಆರು ಜನರಿಗೆ (ಶೇ.29) ಬಾಯಿಹುಣ್ಣು ಇತ್ತು. ಇವರೆಲ್ಲರೂ 40ರಿಂದ 69 ವರ್ಷ ವಯೋಮಿತಿಯವರಾಗಿದ್ದು, ಇವರಲ್ಲಿ 4:6 ಜನರು ಮಹಿಳೆಯರಾಗಿದ್ದರು ಎಂದು ಹೇಳಲಾಗಿದೆ.
ಕೋವಿಡ್​-19ರ ಇತರೆ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುವ ಎರಡು ದಿನಗಳ ಮೊದಲಿನಿಂದ ಹಿಡಿದು 24 ದಿನಗಳವರೆಗೆ ಯಾವಾಗ ಬೇಕಾದರೂ ಬಾಯಿಹುಣ್ಣು ಕಾಣಿಸಿಕೊಳ್ಳಲು ಆರಂಭವಾಗಬಹುದು. ರೋಗಿ ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಯಾವುದೇ ಔಷಧದಿಂದಲೂ ಆದ ಅಡ್ಡಪರಿಣಾಮ ಇದಾಗಿರಲಿಲ್ಲ. ಹಾಗಾಗಿ, ಬಾಯಲ್ಲಿ ಕೆಂಪುವರ್ಣದ ಗಂಧೆಗಳು ಕಾಣಿಸಿಕೊಳ್ಳುವುದು ಕರೊನಾ ಸೋಂಕಿನ ಲಕ್ಷಣ ಎಂದು ಖಚಿತವಾಗಿ ಹೇಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್​ ಬೈಕ್​ಗಳ ಡಿಕ್ಕಿ; ಪೇದೆ ಸಾವು, ಎಎಸ್​ಐ ಗಂಭೀರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + five =
Remember me
