ನವದೆಹಲಿ:ಗಂಭೀರ ಸ್ವರೂಪದ ಸೋಂಕುಗಳಿಂದ ಬಳಲಿ, ಐಸಿಯುಗಳಲ್ಲಿ ದಾಖಲಾಗಿರುವ ಅನೇಕ ರೋಗಿಗಳ ಮೇಲೆ ಯಾವುದೇ ಆ್ಯಂಟಿಬಯೊಟಿಕ್​ ಔಷಧ ಕಾರ್ಯನಿರ್ವಹಿಸುತ್ತಿಲ್ಲ. ಅಂತಹ ರೋಗಿಗಳು ಯಾವುದೇ ಕಾರಣವಿಲ್ಲದೆ ಸಾಯುವ ಅಪಾಯವಿದೆ ಎಂದು ದೆಹಲಿಯ ಏಮ್್ಸ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಆ್ಯಂಟಿಬಯೊಟಿಕ್​ಗಳು ನಿಷ್ಪರಿಣಾಮಕಾರಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಮೀಸಲು ವಿಭಾಗದಲ್ಲಿ ಇರಿಸಲಾಗಿರುವ ಇತ್ತೀಚಿನ ಔಷಧವೂ ಈಗ ಹಲವು ಬಾರಿ ಕೆಲಸ ಮಾಡುತ್ತಿಲ್ಲ. ಮೀಸಲು ವರ್ಗದ ಔಷಧ ಎಂದರೆ ಅದನ್ನು ಆಯ್ದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಅತ್ಯಂತ ಪರಿಣಾಮಕಾರಿ ಪ್ರತಿಜೀವಕಗಳು ಸಹ ಶೇ. 20 ಪ್ರಕರಣಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕಂಡುಬರುತ್ತವೆ. ಅಂದರೆ ಶೇ. 80ರಷ್ಟು ರೋಗಿಗಳು ಅಪಾಯದಲ್ಲಿದ್ದಾರೆ. ರೋಗಿಗಳು ಮತ್ತು ವೈದ್ಯರು ತಮ್ಮ ಇಚ್ಛೆಯಂತೆ ಆಂಟಿಬಯೋಟಿಕ್​ಗಳನ್ನು ವಿವೇಚನಾರಹಿತವಾಗಿ ಬಳಸುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಸೋಂಕು ಕಡಿಮೆ ಕಂಡುಬರುತ್ತಿದೆ. ಒಟ್ಟಾರೆಯಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ನಿಯಂತ್ರಣವು ಸರ್ಕಾರಿ ಆಸ್ಪತ್ರೆಗಳಿಗಿಂತ ಉತ್ತಮವಾಗಿದೆ ಎಂದು ವರದಿ ಹೇಳಿದೆ. ಆಸ್ಪತ್ರೆಗಳ ಐಸಿಯುನಲ್ಲಿ ರೋಗಿಗೆ ನೀಡಲಾಗುವ ಕೆಲ ಸಾಧನಗಳಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಈ ಸೋಂಕುಗಳು ರೋಗಿಗಳನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ. ದೀರ್ಘಕಾಲದ ವರೆಗೆ ಐಸಿಯುನಲ್ಲಿ ದಾಖಲಾಗಿರುವ ರೋಗಿಗಳು ಇಂತಹ ಸೋಂಕಿನ ಅಪಾಯದಲ್ಲಿರುತ್ತಾರೆ. ಈ ಸೋಂಕು ರಕ್ತವನ್ನು ತಲುಪಿದರೆ ಅಂಗಗಳು ಕ್ರಮೇಣ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದನ್ನು ಬಹು ಅಂಗಗಳ ವೈಫಲ್ಯ ಎಂದು ಕರೆಯಲಾಗುತ್ತದೆ.
ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
