ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ಮತ್ತೊಂದು ದೇಶೀಯ ಔಷಧ ಕಂಪನಿ ಕರೊನಾ ಚಿಕಿತ್ಸೆ ಬಳಸಲಾಗುವ ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಿದೆ.
ಕರೊನಾ ಚಿಕಿತ್ಸೆಗಾಗಿ ಕೋವಿಫೊರ್​ ಎಂಬ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ದೇಶೀಯ ಔಷಧ ಕಂಪನಿ ಹೆಟೆರೋ ಭಾನುವಾರ ಘೋಷಿಸಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು ಪರವಾನಗಿ ನೀಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ;ಕನಕಪುರದಲ್ಲಿ ಜುಲೈ 1ರವರೆಗೆ ಸ್ವಯಂಪ್ರೇರಿತ ಲಾಕ್​ಡೌನ್​; ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಣಯ
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಈ ಲಸಿಕೆ ಸಜ್ಜುಗೊಂಡಿರುವುದು ಚಿಕಿತ್ಸೆ ನೀಡಲು ಭಾರಿ ಅನುಕೂಲಕರವಾಗಲಿದೆ. ಶೀಘ್ರವೇ ದೇಶಾದ್ಯಂತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಕಂಪನಿಯ ಮುಖ್ಯಸ್ಥ ಡಾ. ಬಿ. ಪಾರ್ಥಸಾರಥ ರೆಡ್ಡಿ ಹೇಳಿದ್ದಾರೆ.
ಕೋವಿಫೊರ್​ ಲಸಿಕೆ, ಅಮೆರಿಕದ ರೆಮ್​ಡೆಸಿವಿರ್​ನ ಲಸಿಕೆಯ ಭಾರತೀಯ ಅವತರಣಿಕೆಯಾಗಿದೆ. ಇದನ್ನು ಜನರಿಕ್​ ಔಷಧ ರೂಪದಲ್ಲಿ ಉತ್ಪಾದಿಸಲಾಗಿದೆ. ಈ ಹಿಂದೆ ಕೋವಿಡ್​ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಭಾರತದಲ್ಲಿ ಶಿಫಾರಸು ಮಾಡಲಾಗಿತ್ತು. ಇದೀಗ ಇದನ್ನು ದೇಶದಲ್ಲಿ ಉತ್ಪಾದಿಸಿ ರೋಗಿಗಳಿಗೆ ಪೂರೈಸಲಾಗುತ್ತಿದೆ.
ಇದನ್ನೂ ಓದಿ;ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ‌ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..
ನಿನ್ನೆಯಷ್ಟೇ ಮುಂಬೈ ಮೂಲದ ಗ್ಲೆನ್​ ಮಾರ್ಕ್​ ಕಂಪನಿ ಕರೊನಾದಿಂದ ಲಘು ಹಾಗೂ ಸಾಧಾರಣ ಸೋಮಕಿಗೆ ಒಳಗಾದ ರೋಗಿಗಳಿಗೆಂದೇ ಫೆಬಿಫ್ಲೂ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ದೇಶೀಯ ಕಂಪನಿ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದಂತಾಗಿದೆ.
ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
