ತಿರುವನಂತಪುರಂ:ಅಪಘಾತದಲ್ಲಿ ಮೆದುಳು ಹಾನಿಯಾಗಿ ಮೃತಪಟ್ಟ ಕೇರಳ ಮೂಲದ ಅನುಜಿತ್​ (27) ಎಂಬಾತ ಸಾವಿನ ಬಳಿಕವೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಪಡಿಸಿಕೊಂಡಿದ್ದಾರೆ. ಅನುಜಿತ್​ ಪತ್ನಿ ಹಾಗೂ ಸಹೋದರಿಯ ಪ್ರಯತ್ನದಿಂದಾಗಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಪ್ರಾಣ ಉಳಿಸಿದ್ದಾರೆ.
ಇದನ್ನೂ ಓದಿ:ಬಾಲಕಿಯನ್ನು ರೇಪ್​ ಮಾಡಿ ಓಡಿ ಹೋಗ್ತಿದ್ದವನನ್ನು ಹಿಡಿಯಲು 13ನೇ ಮಹಡಿಯಿಂದ ಜಿಗಿದ ಪೊಲೀಸ್: ಮುಂದೇನಾಯ್ತು?
ಜುಲೈ 14ರಂದು ಕೊಟ್ಟರಕ್ಕರ ಎಂಬಲ್ಲಿ ಅನುಜಿತ್​ ಬೈಕ್​ ಅಪಘಾತಕ್ಕೀಡಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕೊಟ್ಟರಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರ ಮೆಡಿಕಲ್​ ಕಾಲೇಜು ಮತ್ತು ಕಿಮ್ಸ್​ಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ಕಠಿಣ ಶ್ರಮದ ನಡುವೆಯೂ ಅನುಜಿತ್​ ಬದುಕುಳಿಯಲಿಲ್ಲ. ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ಜುಲೈ 17ರಂದು ವೈದ್ಯರು ತಿಳಿಸಿದ್ದರು.
ಅನುಜಿತ್​ ಅಂತೂ ಬದುಕುಳಿಯಲಿಲ್ಲ. ಆದರೆ, ಆತನ ಅಂಗಾಂಗಳಾದರೂ ಇನ್ನೊಬ್ಬರಿಗೆ ನೆರವಾಗಲಿ ಎಂಬ ನಿರ್ಧಾರಕ್ಕೆ ಬಂದ ಅನುಜಿತ್​ ಪತ್ನಿ ಪ್ರಿನ್ಸಿ ಮತ್ತು ಸಹೋದರಿ ಅಜಲ್ಯಾ, ಆತನ ಹೃದಯ, ಕಿಡ್ನಿ, ಕಣ್ಣು, ಸಣ್ಣ ಕರುಳು ಮತ್ತು ಕೈಗಳನ್ನು ದಾನ ಮಾಡಲು ಮುಂದಾದರು. ಇವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ದುಃಖದಲ್ಲೂ ಕುಟುಂಬದ ಈ ರೀತಿಯ ಮಾನವೀಯತೆ ಹೆಜ್ಜೆ ಇಟ್ಟಿದ್ದು ಪ್ರಶಂಸನೀಯ ಎಂದಿದ್ದಾರೆ. ಅಲ್ಲದೆ, ಅನುಜಿತ್​ ಸಾವಿಗೂ ಸಂತಾಪ ಸೂಚಿಸಿದ್ದಾರೆ.
ಟ್ರೈನ್​ ಅಪಘಾತ ತಪ್ಪಿಸಿ ಹಿಂದೊಮ್ಮೆ ಸುದ್ದಿಯಾಗಿದ್ದ ಅನುಜಿತ್​ಹಿಂದೆ 2010ರಲ್ಲಿ ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಅನುಜಿತ್​, ಮತ್ತವರ ಸ್ನೇಹಿತರು ಕೆಂಪು ಬಣ್ಣದ ಬಾಸ್ಕೆಟ್​ ಹಿಡಿದು ರೈಲಿನ ಕಡೆಗೆ ಸೂಚನೆ ನೀಡುವ ಮೂಲಕ ಅನೇಕ ಜನರ ಪ್ರಾಣವನ್ನು ಉಳಿಸಿದ್ದರು. ಆ ವೇಳೆ ಭಾರಿ ಸುದ್ದಿ ಸಹ ಆಗಿದ್ದರು. ಇದೀಗ ಮೃತಪಟ್ಟ ಮೇಲೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಕವಾಗಿಸಿದ್ದಾರೆ.
ಇದನ್ನೂ ಓದಿ:ದೇಶದ 18 ಕೋಟಿ ಜನರಿಗೆ ಈಗಾಗ್ಲೇ ಕರೊನಾ ಬಂದು ಹೋಗಿದೆ: ಕರ್ನಾಟಕಕ್ಕೂ ಸಿಕ್ತು ಗುಡ್​ ನ್ಯೂಸ್​!
ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಜಿತ್​, ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೊಟ್ಟರಕ್ಕರದಲ್ಲಿನ ಸೂಪರ್​ ಮಾರ್ಕೆಟ್​ನಲ್ಲಿ ಸೇಲ್ಸ್​ಮನ್​ ಆಗಿ ನಿರ್ವಹಿಸುತ್ತಿದ್ದರು. ಇವರ ಪತ್ನಿ ಪ್ರಿನ್ಸಿ ಸಹ ಜ್ಯುವೆಲ್ಲರಿ ಶಾಪ್​ ಒಂದರಲ್ಲಿ ಸೇಲ್ಸ್​ವುಮನ್​ ಆಗಿದ್ದರು. ದಂಪತಿಗೆ 3 ವರ್ಷದ ಮಗನಿದ್ದನು. ಇದೀಗ ಕುಟುಂಬವನ್ನು ಅನುಜಿತ್​ ಅಗಲಿದ್ದಾರೆ. ಶವಪರೀಕ್ಷೆಯ ನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿದೆ.(ಏಜೆನ್ಸೀಸ್​)
‘ಎರಡು ಪೊರಕೆ ಎಲ್ಲಿ ಹೋಯ್ತು ಹೇಳ್ತಿಯೋ ಇಲ್ವೋ’: ಗ್ರಾಮಲ್ಕೆಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕನ ಫೈಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
