ಬೆಂಗಳೂರು:ಕೋವಿಡ್​-19 ಹಾಗೂ ಅದರ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್​ಡೌನ್​ ಕಾರಣಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗರ್ಭಿಣಿಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು.
ಆ ಸಮೀಕ್ಷೆ ಎಷ್ಟು ನಿಜವಾಯಿತೋ ಗೊತ್ತಿಲ್ಲ. ಆದರೆ ಇದೀಗ ಲಾಕ್​ಡೌನ್​ ಅವಧಿಯಲ್ಲಿನ ತಮ್ಮ ಮೂರನೇ ಮಗುವನ್ನು ನಟ ಅನುಪಮ್​ ಖೇರ್ ಎಲ್ಲರಿಗೂ ಪರಿಚಯಿಸಿದ್ದಾರೆ. ‘ನಿಮ್ಮ ಅತ್ಯುತ್ತಮ ದಿನ ಇಂದೇ’ ಎಂದು ಹೇಳುತ್ತ ಅವರು ತಮ್ಮ ಮೂರನೇ ಮಗುವಿನ ಬಗ್ಗೆ ಇಂದು ಹೇಳಿಕೊಂಡಿದ್ದಾರೆ.
ಅರೇ.. ಅನುಪಮ್​ ಖೇರ್​ಗೆ ಲಾಕ್​ಡೌನ್​ನಲ್ಲಿ ಮೂರನೇ ಮಗುವಾ! ಎಂದು ಯಾರೂ ಹುಬ್ಬೇರಿಸಿ ನೋಡುವಂತಿಲ್ಲ. ಇದು ಸಾಮಾನ್ಯ ಅರ್ಥದಲ್ಲಿನ ಮಗುವಲ್ಲ. ಖೇರ್ ತಮ್ಮ ಮೂರನೇ ಕೃತಿಯನ್ನು ಮೂರನೇ ಮಗು ಎನ್ನುತ್ತಲೇ ಅದರ ಬಗ್ಗೆ ಹೇಳಿದ್ದಾರೆ.
‘ಯುವರ್ ಬೆಸ್ಟ್​ ಡೇ ಈಸ್​ ಟುಡೇ’. ಲೇಖಕನಾಗಿ ನಾನು ನನ್ನ ಮೂರನೇ ಮಗುವನ್ನು ಪರಿಚಯಿಸುತ್ತಿದ್ದೇನೆ. ನಾನು ಇದನ್ನು ಲಾಕ್​ಡೌನ್​ ಸಂದರ್ಭದಲ್ಲಿ ಬರೆದಿದ್ದೇನೆ. ನನ್ನ ಪ್ರಕಾಶಕರು ದೀಪಾವಳಿಯ ಈ ಶುಭದಿನದಂದು ಹೊಸ ಪುಸ್ತಕದ ಪ್ರಥಮ ಪ್ರತಿ ಕಳುಹಿಸಿಕೊಟ್ಟರು. ಇದನ್ನು ಬರೆಯುವುದರಿಂದ ಜೀವನ ಹಾಗೂ ಜನರ ಬಗ್ಗೆ ನನ್ನ ನೋಟ ಬದಲಾಗಿದೆ. ಇದು ನಿಮ್ಮ ಬದುಕಿನಲ್ಲೂ ಬದಲಾವಣೆ ತಂದೀತು ಎಂದು ಆಶಿಸುತ್ತೇನೆ ಎಂದು ಖೇರ್ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
