ರಾಜಕೀಯದಲ್ಲಿ 7 ದಿನಗಳು ದೀರ್ಘಾವಧಿಯಾಗಿರಬಹುದು. ಆದರೆ, ಒಂದು ರಾಷ್ಟ್ರದ ಇತಿಹಾಸದಲ್ಲಿ 8 ವರ್ಷಗಳು ತುಂಬಾ ಕಡಿಮೆ ಸಮಯ. ಆದರೂ, ಈ ಅಲ್ಪಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜಾಗತಿಕ ಖ್ಯಾತಿ ಹೆಚ್ಚಿಸಿದ್ದಾರೆ. ಕಳೆದುಹೋದ ವಿಶ್ವಗುರುವಿನ ಹೆಮ್ಮೆ, ಪ್ರತಿಷ್ಠೆ ಮತ್ತು ವೈಭವವನ್ನು ದೊಡ್ಡ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದಾರೆ. ಪ್ರಧಾನಿಯಾಗಿ ಅವರ ನಾಯಕತ್ವದ 9ನೇ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. ಭಾರತವು ತವರಿನಲ್ಲಿ ಮಾತ್ರವಲ್ಲದೆ, ವಿಶ್ವದಲ್ಲಿಯೂ ಮತ್ತಷ್ಟು ಮೇಲೇರುತ್ತಿದೆ. ಭಾರತದ ಭವಿಷ್ಯವನ್ನು ಸದೃಢವಾಗಿ ಕಟ್ಟಲಾಗಿದೆ.
ಪ್ರಧಾನ ಮಂತ್ರಿ ಮೋದಿ ಅವರ ‘ಭಾರತ ಮೊದಲು’ ನೀತಿಯು ಸಾಂಪ್ರದಾಯಿಕ ಭೌಗೋಳಿಕ ರಾಜಕೀಯಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಯನ್ನೇ ಕೇಂದ್ರೀಕರಿಸಿದೆ. ಇದರಿಂದ ವಿದೇಶದಲ್ಲಿ ಭಾರತದ ಸ್ಥಾನಮಾನ ಏರಿಕೆ ಆಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಠಿಣ ಮತ್ತು ಮೃದುವಾದ ಅಧಿಕಾರ ಪ್ರದರ್ಶನದ ಚತುರ ಮಿಶ್ರಣದ ಜತೆಗೆ, ತಂತ್ರಜ್ಞಾನದಲ್ಲಿನ ಭಾರತದ ಪರಿಣತಿಯ ದೃಢವಾದ ಪ್ರದರ್ಶನ ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯು ‘ಭಾರತ ಮೊದಲು’ ನೀತಿಯ ರಚನಾತ್ಮಕತೆಗೆ ಅಪಾರ ಬಲ ಸೇರಿಸಿದೆ. ಭಾರತದ ನಾಗರಿಕ ಪರಂಪರೆ ಮತ್ತು ಅದರ ಸಂಸ್ಕೃತಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ನಿರ್ಭಿಡೆಯಾಗಿ ಪ್ರಚಾರ ಮಾಡುವ ಮೋದಿ ಅವರ ಭಾರತದೆಡೆಗಿನ ಒಲವು ಇದಕ್ಕೆ ಪ್ರಭಾವವನ್ನು ಒದಗಿಸಿದೆ. ಹಿಂದಿನ ಸರ್ಕಾರಗಳು ಭಾರತದ ಮೃದು ಶಕ್ತಿ ಪ್ರದರ್ಶಿಸಲು ಪ್ರಯತ್ನಿಸಿದವು, ಆದರೆ, ಆ ಪ್ರಯತ್ನಗಳು ಸೀಮಿತ ಪರಿಣಾಮವನ್ನು ಮಾತ್ರ ಬೀರಿದವು. ಪ್ರವಾಸೋದ್ಯಮ-ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸದೆ ಪ್ರವಾಸೋದ್ಯಮ ಉತ್ತೇಜಿಸುವುದು, ಅಥವಾ ಭಾರತ ಹೊಂದಿರುವ ಬಹು-ಆಯಾಮಗಳ ಮನವಿಯನ್ನು ಕೇವಲ ಒಂದು ಸ್ಮಾರಕಕ್ಕೆ ನಿರ್ಬಂಧಿಸುವುದು ಅಥವಾ ಕೆಟ್ಟದಾಗಿ, ಭಾರತದ ಪರಂಪರೆಯಂತಹ ಜನಪ್ರಿಯ ಸಂಸ್ಕೃತಿಯನ್ನು ಸೀಮಿತವಾಗಿ ಪ್ರದರ್ಶಿಸುವುದರಿಂದ ಭಾರತದ ಏಳಿಗೆ ತಡೆಯುತ್ತದೆ. ಪ್ರಧಾನಿ ಮೋದಿ ಅವರು ಈ ವಿಧಾನದಲ್ಲಿ ವ್ಯಾಪಕವಾದ ಬದಲಾವಣೆ ತಂದಿದ್ದಾರೆ, ಪ್ರಚಾರವನ್ನು ವಿಸ್ತರಿಸಿದ್ದಾರೆ ಮತ್ತು ಪೂರಕ ಅಂಶಗಳನ್ನು ಸೇರಿಸಿದ್ದಾರೆ. ಉದಾಹರಣೆಗೆ, ಯೋಗವು ಈಗ ವಿಶ್ವಾದ್ಯಂತ ಮನೆಮಾತಾಗಿದೆ. ಜೂನ್ 21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೊಷಿಸಲು ಮೋದಿ ಅವರ ಉಪಕ್ರಮಗಳೇ ಕಾರಣ. ಭಾರತದ ಈ ಅನನ್ಯ ನಾಗರಿಕತೆಯ ಪರಂಪರೆಯನ್ನು ಇದು ಜನಪ್ರಿಯಗೊಳಿಸುತ್ತದೆ. ಇದು ಈ ಪ್ರಾಚೀನ ಭೂಮಿಯಿಂದ ಜಗತ್ತಿಗೆ ಉಡುಗೊರೆಯಾಗಿದೆ.
ಈ ಹಿಂದೆ, ವಸುಧೈವ ಕುಟುಂಬಕಂ ಎಂಬುದು ನಿರ್ವಾತ ಘೊಷಣೆಯಾಗಿ, ಅದರ ಬಲವಾದ ನೈತಿಕ ಅರ್ಥವನ್ನು ಕಳೆದುಕೊಂಡ ಕ್ಲೀಷೆಯಾಗಿತ್ತು. ‘ಜಗತ್ತು ಒಂದು ಕುಟುಂಬ’ ಎಂದು ಹೇಳುವುದು ಮತ್ತು ಭಾರತದ ನಾಗರಿಕತೆಯ ನೀತಿಯಲ್ಲಿ ನೆಲೆಗೊಂಡಿರುವ ಈ ಶಾಶ್ವತ ಸತ್ಯವನ್ನು ಬದುಕುವುದು ಇವೆರಡೂ ವಿಭಿನ್ನ ವಿಷಯಗಳು. ಭಾರತವು ತನ್ನ ಪ್ರಾಚೀನ ಋಷಿಗಳ ಬುದ್ಧಿವಂತಿಕೆಯಿಂದ ಭಟ್ಟಿ ಇಳಿಸಿದ ಮತ್ತು ಅದರ ಪುರಾತನ ಗ್ರಂಥಗಳಲ್ಲಿ ಒಳಗೊಂಡಿರುವ ಈ ವಾಕ್ಯವನ್ನು ನಂಬುತ್ತದೆ ಎಂಬುದನ್ನು ಪ್ರಧಾನಿ ಮೋದಿ ತೋರಿಸಿದ್ದಾರೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ದೇಶಗಳು ಕೋವಿಡ್-19 ಲಸಿಕೆಯೊಂದಿಗೆ ಇತರರಿಗೆ ಸಹಾಯ ಮಾಡಲು ಮುಂದಾಗದಿದ್ದಾಗ, ನೆರೆಹೊರೆಯವರು ಮತ್ತು ದೂರದ ದೇಶಗಳಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ಮುಂದಾದರು. ‘ಲಸಿಕೆ ಮೈತ್ರಿ’ಯು ಹಲವು ವಿಧಗಳಲ್ಲಿ, ನಾವು ಒಂದು ರಾಷ್ಟ್ರವಾಗಿ ಮತ್ತು ನಾಗರಿಕತೆಯಾಗಿ ವಿಭಿನ್ನವೆಂದು ಜಗತ್ತಿಗೆ ತೋರಿಸಿದ ಇತ್ತೀಚಿನ ದಿನಗಳಲ್ಲಿ ಭಾರತದ ಅತ್ಯುತ್ತಮ ಕ್ಷಣವಾಗಿದೆ. ಪ್ರಧಾನಿ ಮೋದಿ ಅವರಿಗೆ ವಸುಧೈವ ಕುಟುಂಬಕಂ ಎಂದರೆ ಕೇವಲ ಸಾಂಕ್ರಾಮಿಕ ಸೋಂಕಿಗೆ ಲಸಿಕೆ ಒದಗಿಸುವ ಸಹಾಯವಲ್ಲ. ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದಾಗ ವಿಪತ್ತು ಪರಿಹಾರ ತಲುಪಿಸಿ, ಈ ಪ್ರದೇಶದ ಇತರ ದೇಶಗಳಿಗಿಂತ ಮೊದಲು ಭಾರತ ಸಹಾಯಹಸ್ತ ಚಾಚಿತು. ಶ್ರೀಲಂಕಾ ಪ್ರಕ್ಷುಬ್ಧ ಸಮಯವನ್ನು ಎದುರಿಸುತ್ತಿದ್ದಾಗ ಭಾರತವು ಸಹಾಯ ಮಾಡಲು ಹಿಂಜರಿಯದೆ ಮುಂದೆ ಬಂದಿದೆ. ಕಾಬೂಲ್ ಪತನ ಮತ್ತು ತಾಲಿಬಾನ್ ಉದಯದ ನಂತರ ಜಗತ್ತು ಅಫ್ಘಾನಿಸ್ತಾನದತ್ತ ಮುಖ ಮಾಡಿದೆ. ಈ ಮಹತ್ವದ ಘಟನೆಯ ಭದ್ರತಾ ಪರಿಣಾಮಗಳ ಹೊರತಾಗಿಯೂ, ಭಾರತವು ಅಫ್ಘಾನಿಸ್ತಾನದ ಜನರಿಗೆ ಆಹಾರ ಪರಿಹಾರವನ್ನು ಒದಗಿಸಿತು. ಹಿಂದೆ, ಭಾರತವೇ ಆಫ್ಘನ್ನರಿಗೆ ಸಂಸತ್ ಭವನವನ್ನು ಉಡುಗೊರೆಯಾಗಿ ನೀಡಿತು, ಆಫ್ಘಾನಿಸ್ತಾನದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದನ್ನು ನಿರ್ವಿುಸಿಕೊಟ್ಟಿತು. ವಸುಧೈವ ಕುಟುಂಬಕಂ ಎಂಬ ಉತ್ಕೃಷ್ಟ ತತ್ವವನ್ನು ಜೀವಿಸುವ ಭಾರತದ ಪಟ್ಟಿಯು ಉದ್ದವಾಗಿದೆ. ಹಾಗೆಯೇ ಪ್ರಧಾನಿ ಮೋದಿ ಅವರ ದೂರದೃಷ್ಟಿ ವಿಶಾಲವಾಗಿದೆ. ಉದಾಹರಣೆಗೆ, ಬಲವಾದ ದೇಶೀಯ ಕಾರಣಗಳಿಗಾಗಿ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರುತ್ತಿರುವಾಗಲೂ, ಗೋಧಿ ಅಗತ್ಯವಿರುವ ದೇಶಗಳಿಗೆ ಸಮಸ್ಯೆಗಳ ಆಧಾರದ ಮೇಲೆ ಒದಗಿಸಲಾಗುವುದು ಎಂದು ಭಾರತವು ಸ್ಪಷ್ಟಪಡಿಸಿದೆ. ಈ ನಿರ್ಧಾರದ ಆಧಾರದಲ್ಲಿ ಜಗತ್ತು ಒಂದೇ ಕುಟುಂಬವಾಗಿದ್ದರೆ, ಆಹಾರ ಭದ್ರತೆ ಭಾರತಕ್ಕೆ ಮಾತ್ರ ಸಾಧ್ಯವಿಲ್ಲ ಎಂಬ ಆಳವಾದ ನೈತಿಕ ದೃಷ್ಟಿಕೋನವಾಗಿದೆ.
‘ಡಿಜಿಟಲ್ ಇಂಡಿಯಾ’ ಯಶೋಗಾಥೆಯು ಮರುಕಳಿಸಲಾಗದಷ್ಟು ಜನಪ್ರಿಯವಾಗಿದೆ. ನಾವು ಈಗ ಮೂರನೇ ಅತಿದೊಡ್ಡ ಸಂಖ್ಯೆಯ ಸ್ಟಾರ್ಟಪ್​ಗಳನ್ನು ಅನಾವರಣ ಮಾಡಿದ್ದೇವೆ, 100 ಯುನಿಕಾರ್ನ್​ಗಳನ್ನು ಹೊಂದಿದ್ದೇವೆ. ಇತರ ದೇಶಗಳಿಗಿಂತ ಹೆಚ್ಚು ಜನಪ್ರಿಯವಾಗಿರುವ ಡಿಜಿಟಲ್ ಪಾವತಿಗಳನ್ನು ಮಾಡಿರುವ ಅತ್ಯುತ್ತಮ ಯುಪಿಐಗಳಲ್ಲಿ ಒಂದನ್ನು ನಾವು ಹೊಂದಿದ್ದೇವೆ. ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ಡಿಜಿಟಲ್​ನಲ್ಲಿ ನಿರ್ವಹಿಸಲಾಗಿದೆ, ಮೇಲ್ವಿಚಾರಣೆ ಮಾಡಲಾಗಿದೆ. ಡಿಜಿಟಲ್ ಸೇರ್ಪಡೆ ಪ್ರಧಾನಿ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ನೀತಿಯ ಮೂಲಾಧಾರವಾಗಿದೆ.
ನಮ್ಮ ಕ್ರೀಡಾಪಟುಗಳು, ಯಂಗ್ ಇಂಡಿಯಾದ ಅತ್ಯುತ್ತಮ ಉದಾಹರಣೆಗಳಾಗಿದ್ದಾರೆ. ಮೋದಿ ಮಂತ್ರದಿಂದ ಪ್ರೇರಿತರಾಗಿ, ಅತ್ಯುತ್ತಮವಾಗಿ ಮತ್ತು ನಾವು ಹಿಂದಿನ ಕನಸು ಕಾಣಬಹುದಾದ ಟ್ರೋಫಿಗಳನ್ನು ಮನೆಗೆ ತರುತ್ತಿದ್ದಾರೆ. ಬಾಲಿವುಡ್ ಇನ್ನು ಮುಂದೆ ಒಂದು ನಿರ್ದಿಷ್ಟ ವೈವಿಧ್ಯದ ಜನಪ್ರಿಯ ಸಂಸ್ಕೃತಿಯ ಬಗ್ಗೆ ಮಾತ್ರವಲ್ಲ, ನಮ್ಮ ಪ್ರತಿಭಾನ್ವಿತ ಚಲನಚಿತ್ರೋದ್ಯಮವು ಸೃಜನಶೀಲತೆ, ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಜಾಗತಿಕವಾಗಿ ಅತ್ಯುತ್ತಮವಾದವುಗಳೊಂದಿಗೆ ಸ್ಪರ್ಧಿಸಬಹುದಾದ ವಿಶ್ವದರ್ಜೆಯ ವಿಷಯವನ್ನು ತಯಾರಿಸಲು ಮುಂದಾಗಿದೆ. ಭಾರತವು ಅತಿದೊಡ್ಡ ಗ್ರಾಹಕ ಮತ್ತು ವಿಷಯದ ಉತ್ಪಾದಕತೆ ಎರಡಕ್ಕೂ ಸಿದ್ಧವಾಗಿದೆ. ಇತ್ತೀಚೆಗೆ, ಕಾನ್​ನಲ್ಲಿ ಭಾರತಕ್ಕೆ ಈ ವರ್ಷದ ‘ಕಂಟ್ರಿ ಆಫ್ ಆನರ್’ ಮನ್ನಣೆ ಬಂದಿದೆ.
ಇಂದು ಭಾರತವು ಮಂಗಳ ಮತ್ತು ಚಂದ್ರನತ್ತ ತನ್ನ ವ್ಯೋಮನೌಕೆ ಕಳುಹಿಸಬಹುದು; ಸೂಪರ್ ಸಾನಿಕ್ ಕ್ಷಿಪಣಿಗಳು ಮತ್ತು ವಿಮಾನವಾಹಕ ನೌಕೆಗಳನ್ನು ತಯಾರಿಸಬಹುದು; ಅತ್ಯುತ್ತಮ ಸೃಜನಶೀಲ ಮನಸ್ಸುಗಳನ್ನು ಸೃಜಿಸಬಹುದು; ಮೂಲಸೌಕರ್ಯಗಳ ಅಂತರವನ್ನು ತ್ವರಿತವಾಗಿ ಸರಿದೂಗಿಸಬಹುದು; ಭಾರತವು ಸಾಂಕ್ರಾಮಿಕ ರೋಗವನ್ನು ಇತರ ದೇಶಗಳಿಗಿಂತ ಉತ್ತಮವಾಗಿ ನಿರ್ವಹಿಸಬಹುದು ಮತ್ತು ಬೇರೆಯವರಿಗಿಂತ ವೇಗವಾಗಿ ತನ್ನ ಆರ್ಥಿಕತೆ ಪುನಶ್ಚೇತಗೊಳಿಸಬಹುದು; ಭಾರತವು ಬಡತನ ಮತ್ತು ಅಸಮಾನತೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು; ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಎತ್ತರದಲ್ಲಿ ನಿಲ್ಲಬಹುದು, ಇವೆಲ್ಲಾ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ. ಭಾರತವು ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಈ 8 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಮುಂಬರುವ ದಶಕಗಳಲ್ಲಿ ಭಾರತದ ಅಗಾಧ ಬೆಳವಣಿಗೆಗೆ ಅಡಿಪಾಯ ಹಾಕಿದ್ದಾರೆ ಎಂಬುದನ್ನು ಗುರುತಿಸಬೇಕು. ಇಂದಿನ ಜಗತ್ತಿನಲ್ಲಿ ಈ ಪುರಾತನ ನಾಗರಿಕತೆಯು ತನ್ನ ಸರಿಯಾದ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಂತೆ, ಭಾರತವನ್ನು ವಿಶ್ವಗುರು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಪ್ರಧಾನಿ ಮೋದಿ ನಿಜವಾಗಿಯೂ ಮತ್ತು ಬದಲಾಯಿಸಲಾಗದಂತೆ ಭಾರತದ ಭವಿಷ್ಯ ಬದಲಾಯಿಸಿದ್ದಾರೆ.
(ಲೇಖಕರು ಭಾರತದ ಸರ್ಕಾರ ವಾರ್ತಾ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವ ವ್ಯವಹಾರಗಳ ಖಾತೆ ಸಚಿವರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eighteen =
Remember me
