ವಿಜಯವಾಡ​:ಎಷ್ಟು ಬಾರಿ ಚಿಕಿತ್ಸೆ ಒಳಗಾದರೂ ಆರೋಗ್ಯ ಸಮಸ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಅಂತಾ ವಿವಾಹಿತ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅನುಷಾ (27) ಎಂದು ಗುರುತಿಸಲಾಗಿದೆ. ಪ್ರಕಾಶಂ ಜಿಲ್ಲೆಯ ಕುಕ್ಕಟಪಲ್ಲಿಯ ನಿವಾಸಿ ಶಿವ ರೆಡ್ಡಿ ಎಂಬುವರು ರಾಯಚೂರು ಮೂಲಕ ಅನುಷಾಳನ್ನು ಪ್ರೀತಿ 2018ರಲ್ಲಿ ಮದುವೆ ಆಗಿದ್ದರು. ಅನುಷಾ, ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು. ಶಿವ ರೆಡ್ಡಿ ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದರು.
ಶಿವ ರೆಡ್ಡಿ ಶನಿವಾರ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಅನುಷಾ ಕರೆ ಮಾಡಿ ತಕ್ಷಣ ಮನೆಗೆ ಬರುವಂತೆ ಹೇಳಿದ್ದಳು. ಆದರೆ, ಶಿವ ರೆಡ್ಡಿ ಕೈಯಲ್ಲಿ ಸಾಧ್ಯವಾಗಿರಲಿಲ್ಲ. ಕೆಲಸ ಮುಗಿಸಿಕೊಂಡು ಭಾನುವಾರ ಬೆಳಗ್ಗೆ ಮನೆಗೆ ಬಂದು ಶಿವ ರೆಡ್ಡಿ ಬಾಗಿಲು ಬಡಿದಿದ್ದಾನೆ. ಎಷ್ಟೊತ್ತಾದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಶಿವ ರೆಡ್ಡಿ ಮನೆಯೊಳಗೆ ಕಿಟಕಿಯಲ್ಲಿ ಇಣುಕಿ ನೋಡಿದಾಗ ಅನುಷಾ ಫ್ಯಾನ್​ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಅನುಷಾ ಸ್ಥಿತಿ ನೋಡಿ ಹೆದರಿದ ಶಿವ ರೆಡ್ಡಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಶಿವ ರೆಡ್ಡಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಈಗಾಗಲೇ ಮೂರು ಬಾರಿ ಸರ್ಜರಿಗೆ ಒಳಗಾಗಿದ್ದ ಅನುಷಾ, ನೋವನ್ನು ತಡೆಯಲಾರದೇ ಸಾವಿಗೆ ಶರಣಾಗಿದ್ದಾಳೆ ಎಂದು ಗಂಡ ತಿಳಿಸಿದ್ದಾನೆ.
ಮೃತದೇಹವನ್ನು ಪ್ರಕಾಶಂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ… ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

ಕರೊನಾ ಭಯ: ಮೊದಲ ಲಾಕ್​ಡೌನ್​ನಿಂದಲೂ ಅಮ್ಮ-ಮಗಳ ಸ್ವಯಂ ಗೃಹಬಂಧನ, ಬದಲಾಯ್ತು ಇಬ್ಬರ ವರ್ತನೆ

6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
