ಮುಂಬೈ:ಕಾರ್ಗಿಲ್ ವಿಜಯೋತ್ಸವದ ಈ ದಿನ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ದೇಶಾದ್ಯಂತ ಅನೇಕ ಗಣ್ಯರು, ಸೆಲಿಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಗೌರವ ಸಲ್ಲಿಸಿದ್ದಾರೆ.ಸೆಲೆಬ್ರಿಟಿಗಳ ಪೈಕಿ, ಬಾಲಿವುಡ್ ಬೆಡಗಿ ನಟಿ ಅನುಷ್ಕಾ ಶರ್ಮಾ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಕದನ ಕಲಿಗಳಿಗೆ ಗೌರವ ಸಲ್ಲಿಸಿದ್ದಾರೆ.ಅನುಷ್ಕಾ ಅವರ ತಂದೆ ಕರ್ನಲ್ (ನಿವೃತ್ತ) ಅಜಯ್ ಕುಮಾರ್ ಶರ್ಮಾ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು.ಇನ್​​ಸ್ಸ್ಟಾಗ್ರಾಮ್​​​ ನಲ್ಲಿ ಅನುಷ್ಕಾ ಹೃದಯಸ್ಪರ್ಶಿ ಪೋಸ್ಟ್ ಬರೆದು ವೀರ ಕಲಿಗಳಿಗೆ ಗೌರವ ಸಮರ್ಪಿಸಿದ್ದಾರೆ. “ರಾಷ್ಟ್ರ ಮತ್ತು ಪ್ರಜೆಗಳನ್ನು ರಕ್ಷಿಸಿದ ನಮ್ಮ ವೀರಕಲಿಗಳ ಧೈರ್ಯಕ್ಕೆ ನಮಸ್ಕಾರ. ನಿಮ್ಮ ತ್ಯಾಗ, ಬಲಿದಾನ ಅವಿಸ್ಮರಣೀಯ’ ಎಂದು ಬರೆದಿದ್ದಾರೆ.
ಇದನ್ನು ಓದಿ:ಗೆದ್ದ ಹಣದಿಂದ ಶೂ ಕೊಳ್ಳುವೆ ಎಂದಳು ಕಣ್ಣೀರು ಸುರಿಸಿದ ಕೇಟೀ..
ಕಾರ್ಗಿಲ್ ರಣರಂಗದಲ್ಲಿ ಭಾರತ ಕುತಂತ್ರಿ ಪಾಕಿಸ್ತಾನವನ್ನು ಬಗ್ಗುಬಡಿದು ಮಹಾನ್ ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. 1999ರಲ್ಲಿ ಭಾರತೀಯ ಸೇನೆ ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ ಅಂದಾಜು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಅಂತಿಮವಾಗಿ ಭಾರತ ಐತಿಹಾಸಿಕ ಜಯ ದಾಖಲಿಸುವ ಮೂಲಕ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು.ಅನುಷ್ಕಾ ತಮ್ಮ ನಟನೆಯ ಮುಂದಿನ ಚಿತ್ರವನ್ನು ಇನ್ನಷ್ಟೇ ಅವರು ಘೋಷಿಸಬೇಕಿದೆ. ಸದ್ಯ ಸಿರೀಸ್ ಮತ್ತು ಮತ್ತು ಚಲನಚಿತ್ರಗಳ ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ. ಅನುಷ್ಕಾ ನಿರ್ಮಾಣದ ಇತ್ತೀಚಿನ ಚಿತ್ರ ಪಾತಾಲ್ ಲೋಕ್ ಮತ್ತು ಬುಲ್​​ಬುಲ್.ಇವೆಲ್ಲದರಲ್ಲಿ ಫುಲ್ ಬಿಜಿಯಾಗಿರುವ ಈ ನಟಿ ಲಾಕ್​ಡೌನ್ ನಲ್ಲಿ ಪತಿ ವಿರಾಟ್ ಕೊಹ್ಲಿಯೊಂದಿಗೆ ಸಮಯ ಕಳೆಯುತ್ತ . ದೈನಂದಿನ ಕೆಲಸಗಳ ಜೊತೆ ಜೊತೆಗೇ ಸೋಷಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟೀವ್ ಆಗಿದ್ದು, ಅಭಿಮಾನಿ ಬಳಗದೊಂದಿಗೂ ಸಂಪರ್ಕದಲ್ಲಿದ್ದಾರೆ.
ಗುಜರಾತ್​ನಲ್ಲಿ ಕೋವಿಡ್​ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five + 10 =
Remember me
