ಭೋಪಾಲ್​:ಬಾರ್ಡರ್​ ಗವಾಸ್ಕರ್​ ಟ್ರೋಫಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೆಲೆಬ್ರಿಟಿ ದಂಪತಿ ವಿರೂಷ್ಕಾ, ಇತರ ಯಾತ್ರಾರ್ಥಿಗಳೊಂದಿಗೆ ದೇವಾಲಯದ ಒಳಗೆ ಕುಳಿತಿರುವುದನ್ನು ಕಾಣಬಹುದು. ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಮುಗಿದ ಒಂದು ದಿನದ ನಂತರ ಅಂದರೆ ಶನಿವಾರ (ಮಾ.4) ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ:ನನಸಾದ ಬಹುವರ್ಷದ ಕನಸು: 185 ಕೋಟಿ ರೂ ವೆಚ್ಚದ ದುದ್ದ ಏತ ನೀರಾವರಿ ಯೋಜನೆ ಲೋಕಾರ್ಪಣೆ
ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಶರ್ಮಾ, ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಉತ್ತಮ ದರ್ಶನ ಪಡೆದಿದ್ದೇವೆ ಎಂದರು.
ವಿರಾಟ್ ಮತ್ತು ಅನುಷ್ಕಾ ಧಾರ್ಮಿಕ ವ್ಯಕ್ತಿಗಳು ಎಂಬುದರಲ್ಲಿ ರಹಸ್ಯವೇನು ಇಲ್ಲ. ಈ ವರ್ಷದ ಆರಂಭದಲ್ಲಿ ಇಬ್ಬರೂ ತಮ್ಮ ಮಗಳು ವಮಿಕಾರೊಂದಿಗೆ ರಿಷಿಕೇಶ ಮತ್ತು ಬೃಂದಾವನಕ್ಕೆ ಭೇಟಿ ನೀಡಿದ್ದರು. ಬೃಂದಾವನದಲ್ಲಿದ್ದಾಗ ಕುಟುಂಬವು ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿತ್ತು. ಋಷಿಕೇಶದಲ್ಲಿ ಅವರು ಸ್ವಾಮಿ ದಯಾನಂದ ಆಶ್ರಮದಲ್ಲಿ ದಯಾನಂದ ಜಿ ಮಹಾರಾಜ್ ಅವರ ಸಮಾಧಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ:ಹೆರಿಗೆಗೆಂದು ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ
ನಿನ್ನೆ (ಮಾ.3) ಇಂದೋರ್‌ನ ಹೋಲ್ಕರ್​ ಕ್ರೀಡಾಂಗಣದಲ್ಲಿ ಮುಗಿದ 3ನೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಪ್ರವಾಸಿ ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ನರು ಜೂನ್‌ನಲ್ಲಿ ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಭಾರತ ಸ್ಥಾನ ಪಡೆಯಲು ಈಗ ಅಂತಿಮ ಟೆಸ್ಟ್‌ಗಳಲ್ಲಿ ಜಯದ ಅಗತ್ಯವಿದೆ. ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಆಧಾರಿತ ಕ್ರೀಡಾ ಜೀವನಚರಿತ್ರೆ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​)
ಒಂದೇ ದಿನ ಐದು ಬಾರಿ ಹಾರ್ಟ್ ಅಟ್ಯಾಕ್! ವೈದ್ಯೋ ನಾರಾಯಣೋ ಹರಿಃ…

ಇದ್ದಕ್ಕಿದ್ದಂತೆ ಸ್ಟಾರ್ಟ್​ ಆಗಿ ಅಂಗಡಿಯತ್ತ ನುಗ್ಗಿದ ಟ್ರ್ಯಾಕ್ಟರ್! ನಿಗೂಢ ವಿಡಿಯೋ ನೋಡಿ ದಂಗಾದ ಜನರು

ಬಾಯಿಗೆ ಹಗ್ಗ ಕಟ್ಟಿರೋ ಸ್ಥಿತಿಯಲ್ಲಿ ಮೊಸಳೆ‌ ಪತ್ತೆ: ಆಹಾರ ಸೇವಿಸಲಾಗದೇ ನದಿಯಿಂದ ರಸ್ತೆಗೆ ಎಂಟ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 17 =
Remember me
